alex Certify ನ. 16ರಿಂದ ಬದಲಾಗಲಿದೆ ಈ ರಾಶಿಯವರ ಅದೃಷ್ಟ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನ. 16ರಿಂದ ಬದಲಾಗಲಿದೆ ಈ ರಾಶಿಯವರ ಅದೃಷ್ಟ

ಸೂರ್ಯನನ್ನು ಒಂಬತ್ತು ಗ್ರಹಗಳ ರಾಜ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ನಂಬಲಾಗಿದೆ. ಜಾತಕದಲ್ಲಿ ಸೂರ್ಯನು ತಂದೆ ಸ್ಥಾನದಲ್ಲಿರುತ್ತಾನೆ. ಸೂರ್ಯ ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಹೋದಾಗ ಇದು ಎಲ್ಲ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಸೂರ್ಯನು ನವೆಂಬರ್ 16 ರಂದು ವೃಶ್ಚಿಕ ರಾಶಿಯನ್ನು ಪ್ರವೇಶಿಸಲಿದ್ದಾನೆ. ಸೂರ್ಯನ ಈ ರಾಶಿ ಬದಲಾವಣೆ ಕೆಲ ರಾಶಿಯವರ ಮೇಲೆ ಮಂಗಳಕರ ಪರಿಣಾಮ ಬೀರಲಿದೆ.

ಮಿಥುನ : ಸೂರ್ಯನ ಈ ರಾಶಿ ಬದಲಾವಣೆಯಿಂದ ಮಿಥುನ ರಾಶಿಗೆ ಒಳ್ಳೆಯದಾಗಲಿದೆ. ಶತ್ರುಗಳ ನಾಶವಾಗಲಿದೆ. ವೃತ್ತಿ ಜೀವನದಲ್ಲಿ  ವೇಗದಲ್ಲಿ ಪ್ರಗತಿಯಾಗಲಿದೆ. ಮಿಥುನ ರಾಶಿಯವರ ಆರ್ಥಿಕ ಸ್ಥಿತಿ ಸುಧಾರಿಸಲಿದೆ. ಪ್ರಯಾಣದಲ್ಲಿ ಉತ್ತಮ ಲಾಭವಾಗಲಿದೆ. ಉದ್ಯೋಗದಲ್ಲಿ ಬದಲಾವಣೆ ಕಾಣಲಿದೆ.

ಕನ್ಯಾ : ಕನ್ಯಾ ರಾಶಿಯವರ ಅದೃಷ್ಟದ ಬಾಗಿಲು ತೆರೆಯಲಿದೆ.  ಮಾರ್ಕೆಟಿಂಗ್, ಸಾಮಾಜಿಕ ಮಾಧ್ಯಮ, ಸಮಾಲೋಚನೆ ಮುಂತಾದ ಕ್ಷೇತ್ರಗಳಲ್ಲಿ ಕೆಲಸ ಮಾಡುವವರಿಗೆ ವಿಶೇಷ ಲಾಭ  ಸಿಗಲಿದೆ. ಆದಾಯದಲ್ಲಿ ಹೆಚ್ಚಳವಾಗಲಿದೆ. ಹೂಡಿಕೆಯಲ್ಲಿ ಲಾಭ ಸಿಗಲಿದೆ.

ತುಲಾ : ಸೂರ್ಯನ ರಾಶಿ ಬದಲಾವಣೆ ತುಲಾ ರಾಶಿಗೂ ಉತ್ತಮ ಫಲ ನೀಡಲಿದೆ. ಈ ಸಂದರ್ಭದಲ್ಲಿ ಸಂಪತ್ತು ವೃದ್ಧಿಯಾಗಲಿದೆ. ಹಣಕಾಸು ಕ್ಷೇತ್ರದಲ್ಲಿ ಕೆಲಸ ಮಾಡುವ ಜನರಿಗ ಮಂಗಳಕರ ಫಲ ಸಿಗಲಿದೆ. ಕುಟುಂಬದ ಸಂಪೂರ್ಣ ಬೆಂಬಲ ನಿಮಗಿರಲಿದೆ.

ವೃಶ್ಚಿಕ : ವೃಶ್ಚಿಕ ರಾಶಿಗೆ ಅನುಕೂಲವಾಗಲಿದೆ. ಕೆಲಸ ಮತ್ತು ವ್ಯವಹಾರದಲ್ಲಿ ಯಶಸ್ಸು ಸಿಗಲಿದೆ. ಉದ್ಯೋಗದಲ್ಲಿ ವಿಶೇಷ ಲಾಭ ಪ್ರಾಪ್ತಿಯಾಗಲಿದೆ. ವಿದೇಶ ಪ್ರಯಾಣ ಸಾಧ್ಯತೆಯಿದೆ.

ಕುಂಭ : ಸೂರ್ಯನ ರಾಶಿ ಬದಲಾವಣೆಯಿಂದ ಕುಂಭ ರಾಶಿಯವರ ಉದ್ಯೋಗದಲ್ಲಿ ಪ್ರಗತಿಯಾಗಲಿದೆ. ಹಲವು ಮಾರ್ಗಗಳ ಮೂಲಕ ಹಣ ಪ್ರಾಪ್ತಿಯಾಗಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...