ʼಕಪಿಲ್ ಶರ್ಮಾ ಶೋʼ ನಲ್ಲಿ ಕಾಣಿಸಿಕೊಂಡಿರುವ ಇನ್ಫೋಸಿಸ್ ಫೌಂಡೇಶನ್‌ನ ಅಧ್ಯಕ್ಷೆ ಡಾ. ಸುಧಾಮೂರ್ತಿ ಕಾರ್ಯಕ್ರಮದಲ್ಲಿ ಹಲವು ಸ್ವಾರಸ್ಯಕರ ಮತ್ತು ವಿಶೇಷ ವಿಷಯಗಳನ್ನು ಹಂಚಿಕೊಂಡಿದ್ದಾರೆ.
ನಟಿ ರವೀನಾ ಟಂಡನ್ ಮತ್ತು ಆಸ್ಕರ್ ವಿಜೇತ ಚಲನಚಿತ್ರ ʼಎಲಿಫೆಂಟ್ ವಿಸ್ಪರರ್ಸ್ʼ ನಿರ್ಮಾಪಕಿ ಗುಣೀತ್ ಮೊಂಗಾ ಅವರೊಂದಿಗೆ ಕಾಣಿಸಿಕೊಂಡ ಅವರು ತಮ್ಮ ಜೀವನದ ಬಗ್ಗೆ ಅನೇಕ ಆಸಕ್ತಿದಾಯಕ ವಿಷಯಗಳನ್ನು ಬಹಿರಂಗಪಡಿಸಿದ್ದಾರೆ.
ಅವರು ಮತ್ತು ಅವರ ಪತಿ ಇನ್ಫೋಸಿಸ್ ಸಹ-ಸಂಸ್ಥಾಪಕ ನಾರಾಯಣ ಮೂರ್ತಿ ಕಂಪನಿಯನ್ನು ಪ್ರಾರಂಭಿಸಿದ ನಂತರ 30 ವರ್ಷಗಳ ಕಾಲ ರಜೆಯ ಮೇಲೆ ಒಂದೂ ದಿನವೂ ಎಲ್ಲಿಗೂ ಹೋಗಿರಲಿಲ್ಲ ಎಂದು ಹೇಳಿದ್ದು ಎಲ್ಲರ ಗಮನವನ್ನು ಸೆಳೆದಿದೆ.
ನಾರಾಯಣ ಮೂರ್ತಿ ಅವರು 1981 ರಲ್ಲಿ ಇನ್ಫೋಸಿಸ್ ಅನ್ನು ಪ್ರಾರಂಭಿಸಿದರು ಮತ್ತು ಅವರು ತಮ್ಮ ಕೆಲಸಕ್ಕೆ ಸಂಪೂರ್ಣವಾಗಿ ಸಮರ್ಪಿಸಿಕೊಂಡಿದ್ದರಿಂದ ನಾನು ಮನೆಯನ್ನು ನಡೆಸುತ್ತಿದ್ದೆ. ನಾವು ಇನ್ಫೋಸಿಸ್ ಅನ್ನು ಪ್ರಾರಂಭಿಸಿದಾಗ, ಮುಂದಿನ 30 ವರ್ಷಗಳ ಕಾಲ ನಾವು ರಜೆಗಾಗಿ ಒಂದು ದಿನವೂ ಹೊರಗೆ ಹೋಗಲಿಲ್ಲ. ಏಕೆಂದರೆ ನಾರಾಯಣ ಮೂರ್ತಿ ಯಾವಾಗಲೂ ಕೆಲಸ ಮಾಡುತ್ತಿದ್ದರು. ವರ್ಷದಲ್ಲಿ 220 ದಿನ ಪ್ರವಾಸ ಮಾಡುತ್ತಿದ್ದರು. ನಾನು ಅವರಿಂದ ಏನನ್ನೂ ನಿರೀಕ್ಷಿಸಿರಲಿಲ್ಲ, ನಾನು ಮಕ್ಕಳನ್ನು ಬೆಳೆಸಿದೆ ಮತ್ತು ಅವರಿಗೆ ಮನೆಯ ಬಗ್ಗೆ ಯಾವುದೇ ಸುಳಿವು ಇರಲಿಲ್ಲ. ನಮ್ಮ ಮಕ್ಕಳು ಹೊರಗೆ ಹೋದಾಗ ನಾನು ಅವರನ್ನು ಎಷ್ಟು ಬೆಂಬಲಿಸಿದೆ ಎಂದು ನಾರಾಯಣ ಮೂರ್ತಿಗೆ ಅರ್ಥವಾಯಿತು. ನಂತರ ಅವರು ನನ್ನ ವೃತ್ತಿಜೀವನವನ್ನು ಮುಂದುವರಿಸಲು ಹೇಳಿದರು ಹಾಗೆಯೇ ಅವರು ನನಗೆ ಬೆಂಬಲ ನೀಡುತ್ತಿದ್ದಾರೆ” ಎಂದು ಸುಧಾಮೂರ್ತಿ ಹೇಳಿದ್ದಾರೆ.
ನಾನು 14 ರಾಷ್ಟ್ರೀಯ ವಿಪತ್ತುಗಳನ್ನು ನಿಭಾಯಿಸಿದ್ದೇನೆ, ನಾನು ಎಂದಿಗೂ ಮನೆಯಲ್ಲಿಲ್ಲ. ಸುನಾಮಿ, ಬರ, ಕೋವಿಡ್ ಇರಲಿ ನಾನು ಯಾವಾಗಲೂ ಹೊರಗಿದ್ದೇನೆ. ನನ್ನ ಕೆಲಸಕ್ಕಾಗಿ ನಾನು ಯಾವಾಗಲೂ ತುದಿಗಾಲ ಮೇಲೆ ಇರುತ್ತೇನೆ ಎಂದಿದ್ದಾರೆ.
ನಾರಾಯಣ ಮೂರ್ತಿ ಯಾವಾಗಲೂ ಹೇಳುತ್ತಾರೆ, ಇದು ಆಕೆಯ ಉತ್ಸಾಹ, ನಾನು ಇನ್ಫೋಸಿಸ್ ಮಾಡುವಾಗ ಅವರು ನನಗೆ ಬೆಂಬಲ ನೀಡಿದರು, ಈಗ ಅವರ ಕೆಲಸಗಳಿಗೆ ನಾನು ಅವರಿಗೆ ಬೆಂಬಲ ನೀಡುತ್ತೇನೆ ಎಂದು ಪತಿ ತಮ್ಮ ಕಾರ್ಯಗಳಿಗೆ ಬೆಂಬಲವಾಗಿ ನಿಲ್ಲುವುದನ್ನ ಸುಧಾಮೂರ್ತಿ ಹೇಳಿದ್ದಾರೆ.