
ಈ ವರ್ಷ ಗಣೇಶ ಚತುರ್ಥಿಯನ್ನು ಸೆಪ್ಟೆಂಬರ್ 10ರಂದು ಆಚರಣೆ ಮಾಡಲಾಗಿದ್ದರೆ, ಓಡಿಶಾದ ಪ್ರಮುಖ ಸುಗ್ಗಿ ಹಬ್ಬ ನುವಾಕೈ ಜುಹಾರ್ನ್ನು ಮಾರನೇ ದಿನ ಅಂದರೆ ಶನಿವಾರ ಆಚರಿಸಲಾಗಿದೆ.
ಸುದರ್ಶನ್ ಪಟ್ನಾಯಕ್ ಮರಳಿನಲ್ಲಿ ಗಣೇಶನ ಮೂರ್ತಿ ಹಾಗೂ ಸುಗ್ಗಿ ಹಬ್ಬದ ಕಲಾಕೃತಿಗಳನ್ನು ಪುರಿ ಕಡಲತೀರದಲ್ಲಿ ರಚಿಸಿದ್ದಾರೆ.
ಇದು ಹೊಸಕ್ಕಿ ಹಬ್ಬವಾಗಿದ್ದು ಹೀಗಾಗಿ ಭತ್ತದ ತೆನೆಯನ್ನು ಪಾಟ್ನಾಯಕ್ ಚಿತ್ರಿಸಿದ್ದಾರೆ. ಗಣೇಶ ಚತುರ್ಥಿಯ ಮಾರನೇ ದಿನ ಒಡಿಶಾದಲ್ಲಿ ಈ ಹಬ್ಬವನ್ನು ಆಚರಿಸಲಾಗುತ್ತದೆ.
ನುವಾಖೈ ಓಡಿಶಾ ಹಾಗೂ ಜಾರ್ಖಂಡ್ನಲ್ಲಿ ಪ್ರಮುಖ ಹಬ್ಬವಾಗಿದೆ. ಗಣೇಶ ಮೂರ್ತಿಯನ್ನು ಸುದರ್ಶನ್ ಬರೋಬ್ಬರಿ 7000 ಚಿಪ್ಪುಗಳನ್ನು ಬಳಸಿ ನಿರ್ಮಿಸಿದ್ದಾರೆ.