alex Certify ಪ್ರಧಾನಿ ಮೋದಿ ಜನ್ಮದಿನದ ಪ್ರಯುಕ್ತ ಸಮುದ್ರ ಚಿಪ್ಪುಗಳಲ್ಲಿ ನಿರ್ಮಾಣವಾಯ್ತು ಮರಳುಶಿಲ್ಪ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರಧಾನಿ ಮೋದಿ ಜನ್ಮದಿನದ ಪ್ರಯುಕ್ತ ಸಮುದ್ರ ಚಿಪ್ಪುಗಳಲ್ಲಿ ನಿರ್ಮಾಣವಾಯ್ತು ಮರಳುಶಿಲ್ಪ

ಪ್ರಧಾನಿ ನರೇಂದ್ರ ಮೋದಿ 71ನೇ ಜನ್ಮದಿನದ ಪ್ರಯುಕ್ತ ಓಡಿಶಾದ ಮರಳು ಶಿಲ್ಪಿ ಸುದರ್ಶನ್​ ಪಟ್ನಾಯಕ್​​ 2035 ಸಮುದ್ರ ಚಿಪ್ಪುಗಳನ್ನು ಬಳಸಿ ಪುರಿ ಸಮುದ್ರ ತೀರದಲ್ಲಿ ಮರಳು ಕಲಾಕೃತಿ ನಿರ್ಮಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರಿಗೆ ಜನ್ಮದಿನದ ಶುಭಾಶಯಗಳು. ಭಾರತ ಮಾತೆಯ ಸೇವೆಯನ್ನು ಮಾಡಲು ಮಹಾಪ್ರಭು ಜಗನ್ನಾಥ ದೀರ್ಘ ಹಾಗೂ ಆರೋಗ್ಯಯುತ ಜೀವನವನ್ನು ನಿಮಗೆ ಕರುಣಿಸಲಿ ಎಂದು ಟ್ವಿಟರ್​ನಲ್ಲಿ ಸುರೇಂದ್ರ ಪಟ್ನಾಯಕ್​ ಬರೆದುಕೊಂಡಿದ್ದಾರೆ.

ಸೋಶಿಯಲ್​ ಮೀಡಿಯಾದಲ್ಲಿ ಪ್ರಧಾನಿ ಮೋದಿಯವರ ಮರಳು ಕಲಾಕೃತಿಯ ಫೋಟೋಗಳು ವೈರಲ್​ ಆಗಿವೆ.

ಈಗಾಗಲೇ ಈ ಫೋಟೋ 7000 ಲೈಕ್ಸ್​ ಹಾಗೂ 1000 ರಿಟ್ವೀಟ್​ಗಳನ್ನು ಸಂಪಾದಿಸಿದೆ. ಈ ಫೋಟೋ ನೋಡಿದ ನೆಟ್ಟಿಗರು ಸುದರ್ಶನ್​ ಅವರ ಪ್ರತಿಭೆಗೆ ಶಹಬ್ಬಾಸ್​ ಎಂದಿದ್ದು ಮಾತ್ರವಲ್ಲದೇ ಪ್ರಧಾನಿ ಮೋದಿಯವರಿಗೆ ಜನ್ಮ ದಿನದ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ.

— Sudarsan Pattnaik (@sudarsansand) September 17, 2021

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...