ಪ್ರಧಾನಿ ಮೋದಿ ಜನ್ಮದಿನದ ಪ್ರಯುಕ್ತ ಸಮುದ್ರ ಚಿಪ್ಪುಗಳಲ್ಲಿ ನಿರ್ಮಾಣವಾಯ್ತು ಮರಳುಶಿಲ್ಪ 17-09-2021 1:56PM IST / No Comments / Posted In: India, Featured News, Live News ಪ್ರಧಾನಿ ನರೇಂದ್ರ ಮೋದಿ 71ನೇ ಜನ್ಮದಿನದ ಪ್ರಯುಕ್ತ ಓಡಿಶಾದ ಮರಳು ಶಿಲ್ಪಿ ಸುದರ್ಶನ್ ಪಟ್ನಾಯಕ್ 2035 ಸಮುದ್ರ ಚಿಪ್ಪುಗಳನ್ನು ಬಳಸಿ ಪುರಿ ಸಮುದ್ರ ತೀರದಲ್ಲಿ ಮರಳು ಕಲಾಕೃತಿ ನಿರ್ಮಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರಿಗೆ ಜನ್ಮದಿನದ ಶುಭಾಶಯಗಳು. ಭಾರತ ಮಾತೆಯ ಸೇವೆಯನ್ನು ಮಾಡಲು ಮಹಾಪ್ರಭು ಜಗನ್ನಾಥ ದೀರ್ಘ ಹಾಗೂ ಆರೋಗ್ಯಯುತ ಜೀವನವನ್ನು ನಿಮಗೆ ಕರುಣಿಸಲಿ ಎಂದು ಟ್ವಿಟರ್ನಲ್ಲಿ ಸುರೇಂದ್ರ ಪಟ್ನಾಯಕ್ ಬರೆದುಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಪ್ರಧಾನಿ ಮೋದಿಯವರ ಮರಳು ಕಲಾಕೃತಿಯ ಫೋಟೋಗಳು ವೈರಲ್ ಆಗಿವೆ. ಈಗಾಗಲೇ ಈ ಫೋಟೋ 7000 ಲೈಕ್ಸ್ ಹಾಗೂ 1000 ರಿಟ್ವೀಟ್ಗಳನ್ನು ಸಂಪಾದಿಸಿದೆ. ಈ ಫೋಟೋ ನೋಡಿದ ನೆಟ್ಟಿಗರು ಸುದರ್ಶನ್ ಅವರ ಪ್ರತಿಭೆಗೆ ಶಹಬ್ಬಾಸ್ ಎಂದಿದ್ದು ಮಾತ್ರವಲ್ಲದೇ ಪ್ರಧಾನಿ ಮೋದಿಯವರಿಗೆ ಜನ್ಮ ದಿನದ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ. Wishing Our Hon’ble Prime Minister @narendramodi ji on his birthday. May Mahaprabhu Jagannatha bless him with long and healthy life to serve mother India.I’ve created a SandArt installation used 2035 sea shells with message #HappyBirthdayModiJi at Puri beach , Odisha . pic.twitter.com/uDTJGOLCFk — Sudarsan Pattnaik (@sudarsansand) September 17, 2021