ಚುಮು ಚುಮು ಚಳಿಯಲ್ಲೂ ಐಸ್ ಕ್ರೀಂ ತಿನ್ನುವವರಿದ್ದಾರೆ. ಮಧ್ಯ ರಾತ್ರಿ ನಿದ್ರೆಯಲ್ಲಿ ಎಬ್ಬಿಸಿ ಐಸ್ ಕ್ರೀಂ ಕೊಟ್ಟರೂ ಕೆಲವರು ಇಷ್ಟಪಟ್ಟು ಐಸ್ ಕ್ರೀಂ ತಿನ್ನುತ್ತಾರೆ. ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಗೆ ಬೇರೆ ಬೇರೆ ಫ್ಲೇವರ್ ನ ಅನೇಕ ಐಸ್ ಕ್ರೀಂ ಬಂದಿದೆ. ಜನರನ್ನು ಸೆಳೆಯಲು ಕಂಪನಿಗಳು ಭಿನ್ನ ಪ್ರಯತ್ನ ನಡೆಸುತ್ತಿವೆ. ಹಾಗನ್-ಡ್ಯಾಸ್ ಕಂಪನಿ, ವಯಸ್ಕರ ಐಸ್ ಕ್ರೀಂ ತಯಾರಿಸಿದೆ.
ವರದಿಯ ಪ್ರಕಾರ, ಹಾಗನ್ ಡ್ಯಾಸ್ನ 2 ಹೊಸ ಫ್ಲೇವರ್‌ಗಳ ಐಸ್‌ಕ್ರೀಮ್ ತಯಾರಾಗಿದೆ. ಈ ಫ್ಲೇವರ್‌ಗಳಿಗೆ ಕಂಪನಿ ಆಲ್ಕೋಹಾಲ್ ಬಳಸಿದೆ. ಈ ತಿಂಗಳಲ್ಲಿ ಈ ಎರಡೂ ಐಸ್ ಕ್ರೀಂ ಮಾರುಕಟ್ಟೆಗೆ ಬರಲಿದೆ. ವಯಸ್ಕರಿಗಾಗಿಯೇ ಈ ಐಸ್ ಕ್ರೀಂ ತಯಾರಿಸಲಾಗಿದೆ.
‘ಲವ್ ಯೂ ರಚ್ಚು’ ಚಿತ್ರದ ಲಿರಿಕಲ್ ಸಾಂಗ್ ರಿಲೀಸ್
ಲಂಡನ್ ನ ಕಾಕ್ಟೇಲ್ ವೀಕ್ ಸಂದರ್ಭದಲ್ಲಿ ಇದನ್ನು ಬಿಡುಗಡೆ ಮಾಡಲಾಗುತ್ತಿದೆ. ಈ ಕಾಕ್ಟೇಲ್ ವೀಕ್ 2 ಫ್ಲೇವರ್‌ಗಳನ್ನು, ರಮ್ ಸಾಲ್ಟೆಡ್ ಕ್ಯಾರಮೆಲ್ ಮತ್ತು ಬಿಸ್ಕಟ್ ಹಾಗೂ ಐರಿಶ್ ವಿಸ್ಕಿ ಮತ್ತು ಚಾಕೊಲೇಟ್ ವಾಫ್ಲೆ ಹೆಸರಿನಲ್ಲಿ ಬಿಡುಗಡೆ ಮಾಡಲಾಗ್ತಿದೆ.
ಈ ಎರಡೂ ಐಸ್ ಕ್ರೀಂ ತಿಂದ ನಂತ್ರ ಜನರ ಮೂಡ್ ಬದಲಾಗುವುದು ಖಂಡಿತ. ಜನರು ಸ್ವಲ್ಪ ಝೂಮ್ ನಲ್ಲಿರ್ತಾರೆ. ಆದ್ರೆ ಅವರು ಮದ್ಯ ಸೇವನೆ ಮಾಡಿರುವುದಿಲ್ಲವೆಂದು ಕಂಪನಿ ಹೇಳಿದೆ. ರಮ್ ಮತ್ತು ವಿಸ್ಕಿ ಸುವಾಸನೆಯ ಐಸ್ ಕ್ರೀಂನ ಪ್ರತಿ ಟಬ್ ನಲ್ಲಿ ಶೇಕಡಾ 0.5 ಕ್ಕಿಂತ ಕಡಿಮೆ ಆಲ್ಕೋಹಾಲ್ ಬಳಸಲಾಗುತ್ತದೆ. ಈ ಐಸ್ ಕ್ರೀಂನ ಒಂದು ಬಾಕ್ಸ್ ಬೆಲೆ ಸುಮಾರು 500 ರೂಪಾಯಿ. ಐಸ್ ಕ್ರೀಮ್ ಮತ್ತು ಆಲ್ಕೋಹಾಲ್ ನ ಈ ಸಂಯೋಜನೆಯು ಎರಡೂ ಫ್ಲೇವರ್ ಗಳ ಸಣ್ಣ ಟಬ್ ಗಳಲ್ಲಿ ಕೂಡ ಲಭ್ಯವಿದೆ.
17 ಕೋಟಿ ರೂ.ಲಾಟರಿ ಗೆದ್ದರೂ ಈಕೆ ಬದುಕುತ್ತಿರುವ ರೀತಿ ಎಲ್ಲರಿಗೂ ಮಾದರಿ
ಈ ಹಿಂದೆ, 2020 ರಲ್ಲಿ ಆರಂಭವಾದ ಹಾಗನ್-ಡ್ಯಾಸ್ ಬ್ರಾಂಡ್‌ನ ಸ್ಪಿರಿಟ್ ಕಲೆಕ್ಷನ್ ಭಾರೀ ಹೆಸರು ಪಡೆದಿತ್ತು. ಈ ಐಸ್ ಕ್ರೀಮ್ ಆಲ್ಕೊಹಾಲ್ಯುಕ್ತವಾಗಿದ್ದರಿಂದ ಇದನ್ನು ವಯಸ್ಕ ಐಸ್ ಕ್ರೀಂ ಎಂದೂ ಕರೆಯುತ್ತಾರೆ.