
ಬಿಜೆಪಿಗೆ ಬಿಸಿತುಪ್ಪವಾಗಿದ್ದ ಸುಬ್ರಮಣಿಯನ್ ಸ್ವಾಮಿ, ವರುಣ್ ಗಾಂಧಿಗೆ ಬಿಗ್ ಶಾಕ್: ಕಾರ್ಯಕಾರಿಣಿಯಿಂದ ಗೇಟ್ ಪಾಸ್
ಈ ಮೂಲಕ ಟ್ವಿಟರ್ನಲ್ಲಿ ಬಿಜೆಪಿ ಹೆಸರನ್ನು ಸುಬ್ರಮಣಿಯನ್ ಸ್ವಾಮಿ ಕಿತ್ತು ಹಾಕಿದ್ದಾರೆ. ಸದ್ಯ ಸುಬ್ರಮಣಿಯನ್ ಸ್ವಾಮಿ ಟ್ವಿಟರ್ನಲ್ಲಿ, ರಾಜ್ಯಸಭಾ ಸಂಸದ, ಕೇಂದ್ರದ ಮಾಜಿ ಕ್ಯಾಬಿನೆಟ್ ಮಂತ್ರಿ, ಅರ್ಥಶಾಸ್ತ್ರದಲ್ಲಿ ಹಾರ್ವಡ್ ಪಿಹೆಚ್ಡಿ ;ಪ್ರೊಫೆಸರ್; ನನಗೆ ಸಿಕ್ಕಷ್ಟೇ ಒಳ್ಳೆಯದನ್ನು ನೀಡುತ್ತೇನೆ ಎಂದು ಬರೆದುಕೊಂಡಿದ್ದಾರೆ.
ರಾಜ್ಯದ ಜನತೆಗೆ ಗುಡ್ ನ್ಯೂಸ್: ಉಚಿತ ಚಿಕಿತ್ಸೆ ಸೌಲಭ್ಯದ ಯಶಸ್ವಿನಿ ಆರೋಗ್ಯ ವಿಮೆ ಯೋಜನೆ ಮರು ಜಾರಿ ಸಾಧ್ಯತೆ
ಎಲ್ಲರಿಗೂ ತಿಳಿದಿರುವಂತೆ ಸುಬ್ರಮಣಿಯನ್ ಸ್ವಾಮಿ ಪ್ರಧಾನಿ ಮೋದಿಯ ಆರ್ಥಿಕ ನೀತಿಯನ್ನು ವಿರೋಧಿಸುತ್ತಿದ್ದರು, 80 ಸದಸ್ಯರ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯನ್ನು ಹೊಸದಾಗಿ ರಚಿಸಿದ ವೇಳೆ ಸುಬ್ರಮಣಿಯನ್ ಸ್ವಾಮಿ ಸೇರಿದಂತೆ ಹಲವರ ಹೆಸರನ್ನು ಕೈ ಬಿಡಲಾಗಿತ್ತು. ಲಖೀಂಪುರ ಹಿಂಸಾಚಾರದ ಬಳಿಕ ಕೇಂದ್ರ ಸರ್ಕಾರದ ವಿರುದ್ಧ ಮಾತನಾಡಿದ ವರುಣ್ ಗಾಂಧಿ ಹಾಗೂ ಮೇನಕಾ ಗಾಂಧಿ ಹೆಸರನ್ನೂ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯಿಂದ ಕೈ ಬಿಡಲಾಗಿದೆ.