ಜಪಾನ್ನ ಮ್ಯಾಪನ್ ಟನಲ್ ಒಳಗೆ ರೈಲು ಪ್ರಯಾಣದ ಅದ್ಭುತ ಕ್ಷಣ ಸೆರೆ ಹಿಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ನವೆಂಬರ್ 2021 ರಲ್ಲಿ ಪೋಸ್ಟ್ ಮಾಡಿದ ಕ್ಲಿಪ್ ಅನ್ನು ಟ್ವಿಟರ್ ಬಳಕೆದಾರ ತಾರಸ್ ಗ್ರೆಸ್ಕೋ ಹಂಚಿಕೊಂಡಿದ್ದಾರೆ. ಕ್ಯೋಟೋದಲ್ಲಿನ ಕುರಾಮಾ ಲೈನ್ನಲ್ಲಿ ಇಚಿಹಾರ ಮತ್ತು ನಿನೋಸ್ ನಡುವಿನ ಕಿಬುನ್ನಲ್ಲಿರುವ ‘ಮ್ಯಾಪಲ್ ಟನಲ್’ ಉದ್ದಕ್ಕೂ ತೆಗೆದ ವೀಡಿಯೊ ಇದಾಗಿದೆ.
ಸುರಂಗವನ್ನು ಪ್ರವೇಶಿಸುವ ಮೊದಲು ಚಾಲಕನು ರೈಲಿನ ಒಳಗಿನ ಲೈಟ್ಗಳನ್ನು ಸ್ವಿಚ್ ಆಫ್ ಮಾಡುವುದರಿಂದ ವಿಡಿಯೋ ಪ್ರಾರಂಭವಾಗುತ್ತದೆ. ಕೆಲವೇ ಸೆಕೆಂಡುಗಳಲ್ಲಿ, ಮೇಪಲ್ ಮರಗಳ ಸೌಂದರ್ಯ ನೋಡಬಹುದು. ರೈಲಿನ ಒಳಭಾಗವು ಕತ್ತಲೆಯಾಗಿರುವುದರಿಂದ, ದೃಶ್ಯಾವಳಿಯು ಪದಗಳಲ್ಲಿ ವಿವರಿಸಲು ಅಸಾಧ್ಯ.
ಈ ವಿಡಿಯೋ 688ಕೆ ವೀಕ್ಷಣೆ ಕಂಡಿದ್ದು, ಸಾವಿರಾರು ಪ್ರತಿಕ್ರಿಯೆ ಬಂದಿದೆ. ನೆಟ್ಟಿಗರು ಕ್ಲಿಪ್ ಅನ್ನು ನೋಡಿ ಕಾಲ್ಪನಿಕ ಕಥೆಯ ಮೂಲಕ ಸವಾರಿ ಎಂದು ವಿವರಿಸಿದ್ದಾರೆ.