alex Certify ನ್ಯಾಷನಲ್ ಗೇಮ್ಸ್ ನ‌ಲ್ಲಿ ಅದ್ಭುತ ಡ್ರೋಣ್ ಶೋ; ತಮ್ಮ ಟ್ವೀಟರ್ ಅಕೌಂಟ್‌ನಲ್ಲಿ ಫೋಟೋ ಹಂಚಿಕೊಂಡ ಪಿಎಂ ಮೋದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನ್ಯಾಷನಲ್ ಗೇಮ್ಸ್ ನ‌ಲ್ಲಿ ಅದ್ಭುತ ಡ್ರೋಣ್ ಶೋ; ತಮ್ಮ ಟ್ವೀಟರ್ ಅಕೌಂಟ್‌ನಲ್ಲಿ ಫೋಟೋ ಹಂಚಿಕೊಂಡ ಪಿಎಂ ಮೋದಿ

36ನೇ ರಾಷ್ಟ್ರೀಯ ಕ್ರೀಡಾಕೂಟವನ್ನು ಅಹಮದಾಬಾದ್, ಗಾಂಧಿನಗರ, ಸೂರತ್, ವಡೋದರಾ, ರಾಜ್ಕೋಟ್ ಸೇರಿದಂತೆ ಭಾವನಗರ ಈ ಆರು ನಗರಗಳಲ್ಲಿ ಆಯೋಜೀಸಲಾಗಿತ್ತು.

ಈ ಕಾರ್ಯಕ್ರಮದ ಪ್ರಯುಕ್ತ ಅಹಮದಾಬಾದ್ನ ಸಬರಮತಿ ರಿವರ್ಫ್ರಂಟ್ನಲ್ಲಿ ಭವ್ಯವಾದ ಡ್ರೋಣ್ ಪ್ರದರ್ಶನ ಮಾಡಲಾಯಿತು. ಆ ಭವ್ಯವಾದ ಪ್ರದರ್ಶನದ ಚಿತ್ರಗಳನ್ನು ಪ್ರಧಾನಿ ಮೋದಿ ತಮ್ಮ ಟ್ವಿಟರ್ ಅಕೌಂಟ್‌ನಲ್ಲಿ ಹಂಚಿಕೊಂಡಿದ್ದಾರೆ.

ಈ ಕ್ರೀಡಾಕೂಟ ಕಾರ್ಯಕ್ರಮದಲ್ಲಿ 15,000 ಆಟಗಾರರು, ತರಬೇತುದಾರರು ಹಾಗೂ ಅಧಿಕಾರಿಗಳು ಭಾಗವಹಿಸಲಿದ್ದಾರೆ. ಅಕ್ಟೋಬರ್ 12ರವರೆಗೆ ನಡೆಯಲಿರುವ ಕ್ರೀಡಾಕೂಟದ ಕುಂಭವನ್ನು ಗುಜರಾತ್‌ನಲ್ಲಿ ಮೊದಲ ಬಾರಿಗೆ ಆಯೋಜಿಸಲಾಗಿದೆ.

ಅಹಮದಾಬಾದ್ ರಾಷ್ಟ್ರೀಯ ಕ್ರೀಡಾಕೂಟವನ್ನು ಪ್ರಧಾನಿ ಮೋದಿ ಉದ್ಘಾಟಿಸಿದ್ದಾರೆ. ಈ ಉದ್ಘಾಟನಾ ಸಮಾರಂಭದ ಮೊದಲು, ಅಹಮದಾಬಾದ್‌ನ ಸಬರಮತಿ ರಿವರ್‌ಫ್ರಂಟ್‌ನಲ್ಲಿ ಭವ್ಯವಾದ ಡ್ರೋನ್ ಪ್ರದರ್ಶನ ಮಾಡಲಾಯಿತು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಈ ಕಾರ್ಯಕ್ರಮದ ಚಿತ್ರಗಳನ್ನು ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಿದ್ದು, ಈಗ ಅದು ಸಾಕಷ್ಟು ವೈರಲ್ ಕೂಡ ಆಗಿದೆ. ಈಗಾಗಲೇ ಸಾವಿರಾರು ಜನ ಈ ಚಿತ್ರಗಳನ್ನು ಲೈಕ್ ಮಾಡಿದ್ದಾರೆ.

ಪ್ರಧಾನಿ ಮೋದಿ ಅವರು, ತಮ್ಮ ಅಧಿಕೃತ ಟ್ವಿಟರ್ ಅಕೌಂಟ್ @narendramodiಯಲ್ಲಿ ಈ ಡ್ರೋಣ್ ಶೋ ಫೋಟೋಗಳನ್ನ ಶೇರ್ ಮಾಡಿಕೊಂಡಿದ್ದಾರೆ.

ಪ್ರಧಾನಿ ಹಂಚಿಕೊಂಡ ಚಿತ್ರಗಳಲ್ಲಿ ಒಲಿಂಪಿಕ್ಸ್‌ನಲ್ಲಿ ಭಾರತ ಮಾಡಿರುವ ಸಾಧನೆ, ಗುಜರಾತ್ನ ನಕ್ಷೆ, ರಾಷ್ಟ್ರೀಯ ಕ್ರೀಡಾಕೂಟ 2022ರ ಲೋಗೋ ಮತ್ತು ಏಕತಾ ಪ್ರತಿಮೆಯನ್ನು ತೋರಿಸಲಾಗಿದೆ.

ಇದೇ ಡ್ರೋಣ್ ಶೋ ಚಿತ್ರಗಳನ್ನ ಬಿಜೆಪಿ ವಕ್ತಾರ ಅಮಿತ್ ಮಾಳವಿಯಾ ಅವರು ಸಹ ತಮ್ಮ ಟ್ವಿಟರ್ ಅಕೌಂಟ್‌ ನಲ್ಲೂ ಹಂಚಿಕೊಂಡಿದ್ದಾರೆ. ಅದಕ್ಕೆ “36 ನೇ ರಾಷ್ಟ್ರೀಯ ಕ್ರೀಡಾಕೂಟದ ಮುನ್ನಾದಿನದಂದು ಸಬರಮತಿ ರಿವರ್‌ಫ್ರಂಟ್‌ನಲ್ಲಿ ಉತ್ತಮ ಡ್ರೋನ್ ಪ್ರದರ್ಶನ. ಪ್ರಧಾನಿ ನರೇಂದ್ರ ಮೋದಿಯವರಿಗೆ ಸ್ವಾಗತ. ರಾಷ್ಟ್ರಧ್ವಜ, ಸರ್ದಾರ್ ಪಟೇಲ್ ಅವರ ಭಾವಚಿತ್ರ ಮತ್ತು ರಾಷ್ಟ್ರೀಯ ಕ್ರೀಡಾಕೂಟದ ಲಾಂಛನವನ್ನು ಸಹ ಪ್ರದರ್ಶಿಸಲಾಯಿತು.“ ಎಂದು ಶೀರ್ಷಿಕೆಯಲ್ಲಿ ಬರೆದುಕೊಂಡಿದ್ದಾರೆ.

ವೈರಲ್ ಆಗಿರುವ ಈ ಡ್ರೋಣ್ ಶೋವನ್ನು ನೆಟ್ಟಿಗರು ಹಾಡಿಹೊಗಳಿದ್ಧಾರೆ. ಈ ಡ್ರೋನ್ ಶೋ ಪ್ರದರ್ಶನ ಒಬ್ಬರು ಅದ್ಭುತ ಎಂದು ಹೇಳಿದ್ದಾರೆ. ಇನ್ನೊಬ್ಬರು ಇದು ಅದ್ಭುತ ಕ್ಷಣಗಳು ಎಂದು ಅಂದಿದ್ದಾರೆ. ಇನ್ನೊಬ್ಬರಂತೂ ಇದು ಅದ್ಭುತ ಮತ್ತು ಸ್ಮರಣೀಯ ಕ್ಷಣಗಳು ಎಂದು ಭಾವುಕತೆಯಿಂದ ಕೂಡಿದ ಕಾಮೆಂಟ್ ಬರೆದಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...