alex Certify Sex scandal: ವಿದ್ಯಾರ್ಥಿಗಳೊಂದಿಗೆ ಶಿಕ್ಷಕಿ ಗ್ರೂಪ್ ಸೆಕ್ಸ್ ವಿಡಿಯೋ ವೈರಲ್: ಸೈಬರ್ ಸೆಲ್ ತನಿಖೆ ತೀವ್ರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Sex scandal: ವಿದ್ಯಾರ್ಥಿಗಳೊಂದಿಗೆ ಶಿಕ್ಷಕಿ ಗ್ರೂಪ್ ಸೆಕ್ಸ್ ವಿಡಿಯೋ ವೈರಲ್: ಸೈಬರ್ ಸೆಲ್ ತನಿಖೆ ತೀವ್ರ

ಚೆನ್ನೈ: ತಮಿಳುನಾಡಿನ ಶಾಲಾ ಶಿಕ್ಷಕಿ ಹಾಗೂ ವಿದ್ಯಾರ್ಥಿಗಳ ಗ್ರೂಪ್ ಸೆಕ್ಸ್ ವಿಡಿಯೋ ಕುರಿತು ತಮಿಳುನಾಡು ಸೈಬರ್ ಸೆಲ್ ತನಿಖೆ ಆರಂಭಿಸಿದೆ.

ಮಹಿಳೆಯ ಆಪ್ತ ಉದ್ಯಮಿಯೊಬ್ಬರು ಚಿತ್ರೀಕರಿಸಿದ ವಿಡಿಯೊವನ್ನು ಅವರ ಕೆಲವು ಸ್ನೇಹಿತರು ಹಂಚಿಕೊಂಡಿದ್ದಾರೆ. ಹಣಕ್ಕಾಗಿ ಅಂತರಾಷ್ಟ್ರೀಯ ಅಶ್ಲೀಲ ತಾಣಗಳಿಗೆ ವಿಡಿಯೋ ಅಪ್ಲೋಡ್ ಮಾಡಲಾಗಿದೆಯೇ ಅಥವಾ ಕೆಲವೇ ಜನರ ನಡುವೆ ಪ್ರಸಾರವಾಗಿದೆಯೇ ಎಂಬ ಬಗ್ಗೆ ಸೈಬರ್ ಸೆಲ್ ತನಿಖೆ ನಡೆಸುತ್ತಿದೆ.

ಮಧುರೈನ ಸರ್ಕಾರಿ ಶಾಲೆಯೊಂದರ 42 ವರ್ಷದ ಶಿಕ್ಷಕಿ ಮತ್ತು ಆಕೆಯ 39 ವರ್ಷದ ಪ್ರೇಮಿಯನ್ನು ಭಾನುವಾರ ಬಂಧಿಸಲಾಗಿದ್ದು, ಪೊಲೀಸ್ ಕಸ್ಟಡಿಯಲ್ಲಿದ್ದಾರೆ.

ಅಶ್ಲೀಲ ವಿಷಯವನ್ನು ಹಂಚಿಕೊಂಡ ಎಲ್ಲರ ವಿರುದ್ಧ ಕಠಿಣ ಕ್ರಮಕೈಗೊಳ್ಳಲು ಡಿಜಿಪಿ ಕಚೇರಿಯಿಂದ ಕಟ್ಟುನಿಟ್ಟಿನ ಸೂಚನೆಗಳಿವೆ ಎಂದು ಮಧುರೈ ಸೈಬರ್ ಸೆಲ್‌ ನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪತಿಯಿಂದ ಬೇರ್ಪಟ್ಟಿದ್ದ ಮಹಿಳೆ 2010ರಲ್ಲಿ ಉದ್ಯಮಿ ಜತೆ ಅಕ್ರಮ ಸಂಬಂಧ ಬೆಳೆಸಿದ್ದಳು. ಶಿಕ್ಷಕಿ 16 ವರ್ಷದ ಮೂವರು ವಿದ್ಯಾರ್ಥಿಗಳನ್ನು ತನ್ನ ಮನೆಗೆ ಕರೆಸಿಕೊಂಡಿದ್ದು, ಅವರೊಂದಿಗೆ ಅನ್ಯೋನ್ಯವಾಗಿ, ಅಶ್ಲೀಲವಾಗಿ ಸಮಯ ಕಳೆದಿದ್ದಾರೆ. ಉದ್ಯಮಿ ಈ ವಿಡಿಯೋವನ್ನು ತನ್ನ ಕೆಲ ಸ್ನೇಹಿತರ ನಡುವೆ ಹರಿಬಿಟ್ಟಿದ್ದಾಗಿ ಬಹಿರಂಗಪಡಿಸಿದ್ದಾನೆ. ಇದರಿಂದಾಗಿ ಸೈಬರ್ ಸೆಲ್ ವಿಡಿಯೋವನ್ನು ಸ್ವೀಕರಿಸಿದ ಕೆಲವರನ್ನು ಪ್ರಶ್ನಿಸಿದೆ.

ಅಪ್ರಾಪ್ತ ಬಾಲಕರು ಆಕೆಯ ವಿರುದ್ಧ ದೂರು ನೀಡಿದ ನಂತರ ಮಧುರೈ ದಕ್ಷಿಣ ಪೊಲೀಸ್ ಠಾಣೆಯಲ್ಲಿ ಮಹಿಳೆ ಮತ್ತು ಪುರುಷನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇಬ್ಬರ ವಿರುದ್ಧ ಪೋಕ್ಸೊ ಕಾಯಿದೆಯ ಸೇರಿ ವಿವಿಧ ಸೆಕ್ಷನ್ ಗಳಡಿ ಕೇಸ್ ದಾಖಲಾಗಿದೆ. ವಿಡಿಯೋ ಪ್ರಸಾರ ಮಾಡಿದವರನ್ನು ವಿಚಾರಣೆ ನಡೆಸುತ್ತಿದ್ದು, ಅಗತ್ಯ ಬಿದ್ದರೆ ಬಂಧಿಸಲಾಗುವುದು ಎಂದು ಸೈಬರ್ ಸೆಲ್ ಅಧಿಕಾರಿಗಳು ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...