alex Certify ಕಡಿಮೆ ಅಂಕ ಕೊಟ್ಟ ಶಿಕ್ಷಕನ ಬೈಕ್ ಗೇ ಬೆಂಕಿ ಹಚ್ಚಿದ ವಿದ್ಯಾರ್ಥಿಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಡಿಮೆ ಅಂಕ ಕೊಟ್ಟ ಶಿಕ್ಷಕನ ಬೈಕ್ ಗೇ ಬೆಂಕಿ ಹಚ್ಚಿದ ವಿದ್ಯಾರ್ಥಿಗಳು

ತರಗತಿಯ ಪ್ರಾಜೆಕ್ಟ್‌ ನಲ್ಲಿ ಉತ್ತೀರ್ಣ ಅಂಕಗಳನ್ನು ನೀಡಲು ನಿರಾಕರಿಸಿದ ಕಾರಣ 12 ನೇ ತರಗತಿಯ ವಿದ್ಯಾರ್ಥಿಗಳ ಗುಂಪು ತಮ್ಮ ಶಾಲಾ ಶಿಕ್ಷಕರ ಬೈಕ್‌ ಗೆ ಬೆಂಕಿ ಹಚ್ಚಿದ ಘಟನೆ ಪಶ್ಚಿಮ ಬಂಗಾಳದ ಚಿತ್ತರಂಜನ್ ರೈಲ್ ಟೌನ್‌ ನಲ್ಲಿರುವ ದೇಶಬಂಧು ಬಾಲಕರ ಶಾಲೆಯಲ್ಲಿ ಈ ಘಟನೆ ನಡೆದಿದೆ.

12 ನೇ ತರಗತಿಯ ಕನಿಷ್ಠ 7 ವಿದ್ಯಾರ್ಥಿಗಳು ತಮ್ಮ ಇತಿಹಾಸ ಶಿಕ್ಷಕ ಅವ್ನಿ ಕುಮಾರ್ ಬೇರಾ ಅವರ ಮೋಟಾರ್‌ ಸೈಕಲ್‌ ಗೆ ಬೆಂಕಿ ಹಚ್ಚಿದ್ದು, ಬೈಕ್ ಸುಟ್ಟು ಭಸ್ಮವಾಗಿದೆ.

ಆರೋಪಿಗಳನ್ನು ಅವಿನಾಶ್ ರಾಮ್, ಆದಿತ್ಯ ಕುಮಾರ್, ರಾಹುಲ್ ಕುಮಾರ್ ಬಾಲ್ಮಿಕಿ, ಮುನ್ನಾ ಶಾ, ಸುಮಿತ್ ಕುಮಾರ್, ಸುಜಿತ್ ಕುಮಾರ್ ಮತ್ತು ಇತರ ಇಬ್ಬರು ಎಂದು ಗುರುತಿಸಲಾಗಿದೆ.

ಆರೋಪಿ ವಿದ್ಯಾರ್ಥಿಗಳು ಎರಡೂವರೆ ತಿಂಗಳ ಹಿಂದೆ ಶಾಲೆಯ ಗೋಡೆ ಒಡೆದ ಪ್ರಕರಣದಲ್ಲಿ ಭಾಗಿಯಾಗಿದ್ದರು. ಸಿಸಿಟಿವಿ ಕ್ಯಾಮೆರಾಗಳನ್ನು ಕಿತ್ತುಹಾಕಿದ್ದರಿ. ತರಗತಿ ಅಸೈನ್‌ ಮೆಂಟ್‌ ಗಳಲ್ಲಿ ಕಡಿಮೆ ಅಂಕಗಳನ್ನು ನೀಡಿದ್ದಕ್ಕಾಗಿ ತಮ್ಮ ಇಂಗ್ಲಿಷ್ ಶಿಕ್ಷಕರ ಮೇಲೆ ಹಲ್ಲೆ ನಡೆಸಿದ್ದರು ಎಂದು ಆರೋಪಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...