ದುರ್ಬಲ ನೆಟ್‌ವರ್ಕ್ ಕಾರಣದಿಂದ ಮಹಾರಾಷ್ಟ್ರದ ಗೋಂಡಿಯಾ ಜಿಲ್ಲೆಯ ಗ್ರಾಮವೊಂದರ ವಿದ್ಯಾರ್ಥಿಗಳು ಆನ್ಲೈನ್ ಕ್ಲಾಸ್‌ಗಳಿಗೆ ಹಾಜರಾಗಲು ’ನೆಟ್‌ವರ್ಕ್ ಮರ’ವೊಂದನ್ನು ಕಂಡುಕೊಂಡಿದ್ದಾರೆ.
ದೇಶದ ಗ್ರಾಮಾಂತರ ಪ್ರದೇಶಗಳಲ್ಲಿ ಮೊಬೈಲ್ ನೆಟ್‌ವರ್ಕ್ ಇನ್ನೂ ಸಮರ್ಪಕವಾಗಿ ಪೂರೈಕೆಯಾಗುತ್ತಿಲ್ಲದ ಕಾರಣದಿಂದ ಅಂತರ್ಜಾಲವು ಬಹಳಷ್ಟು ಹಳ್ಳಿಗಳಿಗೆ ಇನ್ನೂ ಗಗನಕುಸುಮವಾಗೇ ಇದೆ.
ಪ್ರೀತಿಸುವಂತೆ ವಿದ್ಯಾರ್ಥಿನಿಗೆ ಕಿರುಕುಳ, ಅಶ್ಲೀಲ ಫೋಟೋ ಪೋಸ್ಟ್ ಮಾಡುವ ಬೆದರಿಕೆ
ಪಾಲಿಟೆಕ್ನಿಕ್‌ನಲ್ಲಿ ವ್ಯಾಸಂಗ ಮಾಡುತ್ತಿರುವ ಅತುಲ್ ಗೊಂಢಾಲೇ ತನ್ನೂರಿನಿಂದ 18 ಕಿಮೀ ದೂರದಲ್ಲಿರುವ ಈ ಮರವನ್ನು ಕಂಡುಕೊಂಡಿದ್ದಾರೆ. ಅವರಿಂದ ಈ ವಿಚಾರ ಸುತ್ತಲಿನ ಹಳ್ಳಿಗಳ ವಿದ್ಯಾರ್ಥಿಗಳಿಗೆ ತಿಳಿದು ಅವರೆಲ್ಲಾ ಈ ನೆಟ್‌ವರ್ಕ್ ವೃಕ್ಷದತ್ತ ಧಾವಿಸಲು ಆರಂಭಿಸಿದ್ದಾರೆ.
ಮಹಿಳೆ ಕಿವಿಯೊಳಗಿದ್ದ ವಸ್ತು ನೋಡಿ ದಂಗಾದ ವೈದ್ಯರು
ಕಳೆದ 15 ತಿಂಗಳುಗಳಿಂದ ಸುಮಾರು 150 ವಿದ್ಯಾರ್ಥಿಗಳು ತಮ್ಮ ನೋಟ್‌ಬುಕ್‌ಗಳೊಂದಿಗೆ ಆನ್ಲೈನ್ ಅಧ್ಯಯನಕ್ಕೆಂದು ಈ ’ನೆಟ್‌ವರ್ಕ್ ವೃಕ್ಷ’ನತ್ತ ತಂತಮ್ಮ ಮೊಬೈಲ್ ಫೋನ್‌ಗಳು, ಪೆನ್ನುಗಳು ಹಾಗೂ ಹ್ಯಾಂಡ್‌ಫೋನ್‌ಗಳೊಂದಿಗೆ ಧಾವಿಸುತ್ತಾರೆ.
ಈ ಪ್ರದೇಶದಲ್ಲಿರುವ ಏಕೈಕ ಮೊಬೈಲ್ ಟವರ್‌ನಿಂದ 200 ಮೀಟರ್ ಅಂತರದಲ್ಲಿರುವ ಈ ಮರದ ಬಳಿ ಮಾತ್ರವೇ ಮೊಬೈಲ್ ನೆಟ್‌ವರ್ಕ್‌ನ ಒಳ್ಳೆಯ ಸಿಗ್ನಲ್ ದೊರಕುತ್ತದೆ.