alex Certify ಮಹಿಳೆ ಕಿವಿಯೊಳಗಿದ್ದ ವಸ್ತು ನೋಡಿ ದಂಗಾದ ವೈದ್ಯರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಹಿಳೆ ಕಿವಿಯೊಳಗಿದ್ದ ವಸ್ತು ನೋಡಿ ದಂಗಾದ ವೈದ್ಯರು

ಸೋಶಿಯಲ್​ ಮೀಡಿಯಾದಲ್ಲಿ ಮಹಿಳೆಯೊಬ್ಬಳು ತನ್ನ ಕಿವಿ ಗುಗ್ಗೆ ಕತೆಯನ್ನ ಹೇಳಿಕೊಂಡಿದ್ದು ಇದನ್ನ ಕೇಳಿದ ನೆಟ್ಟಿಗರು ಶಾಕ್​ ಆಗಿದ್ದಾರೆ.

ಜೋರ್ಡನ್​ ಎಂಬ ಹೆಸರಿನ ಮಹಿಳೆಗೆ ಶೀತ ಶುರುವಾದ ಬಳಿಕ ವೈದ್ಯರು ಈಕೆಯ ಕಿವಿಯನ್ನ ಒಮ್ಮೆ ಸ್ವಚ್ಛ ಮಾಡೋಣ ಎಂದು ಸಲಗೆ ನೀಡಿದ್ರು. ಅದರಂತೆ ಕಿವಿ ಗುಗ್ಗೆಯನ್ನ ತೆಗೆಯಲು ಮುಂದಾದ ವೇಳೆ ಭರ್ಜರಿ ಶಾಕ್​ ಕಾದಿತ್ತು.

26 ವರ್ಷದ ಜೋರ್ಡನ್​​​ ಕಿವಿಯಲ್ಲಿ ಬರೋಬ್ಬರಿ 22 ವರ್ಷದ ಹಿಂದೆ ಸಿಲುಕಿಹಾಕಿಕೊಂಡಿದ್ದ ವಸ್ತು ಪತ್ತೆಯಾಗಿದ್ದು ಇದನ್ನ ನೋಡಿದ ಜಾರ್ಡನ್ ಕೂಡಾ​ ಶಾಕ್​ ಆಗಿದ್ದಾಳೆ.

ಈಕೆ ಕೇವಲ 4 ವರ್ಷ ಪ್ರಾಯದವಳಾಗಿದ್ದಾಗ ಕಿವಿಯೊಳಗೆ ಹಾಕಿಕೊಂಡಿದ್ದ ಚಿಕ್ಕ ವಸ್ತುವೊಂದು ಈಗ ಹೊರಬಿದ್ದಿದೆ. ಈ ವಸ್ತುವನ್ನ ಸುತ್ತ ಕಿವಿಯ ಗುಗ್ಗೆ ಆವರಿಸಿತ್ತು. ಈ ವಸ್ತುವನ್ನ ತೆಗೆದ ಬಳಿಕ ನನಗೆ ಸ್ಪಷ್ಟವಾಗಿ ಕೇಳಿಸುತ್ತಿದೆ ಎಂದು ಜಾರ್ಡನ್​ ಹೇಳಿದ್ದಾರೆ. ಈ ಪೋಸ್ಟ್​ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದ್ದು ಅನೇಕರು ತಮ್ಮ ಜೀವನದಲ್ಲೂ ಆದ ಇಂತಹ ಕೆಲ ಘಟನೆಗಳನ್ನ ಹಂಚಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...