alex Certify ಐಪ್ಯಾಡ್​ನಲ್ಲಿ ಶೇ.93 ಬ್ಯಾಟರಿ ಚಾರ್ಜ್​ನೊಂದಿಗೆ ಶಾಲೆಗೆ ಆಗಮಿಸಿದ್ದ ವಿದ್ಯಾರ್ಥಿನಿಗೆ ಶಿಕ್ಷೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಐಪ್ಯಾಡ್​ನಲ್ಲಿ ಶೇ.93 ಬ್ಯಾಟರಿ ಚಾರ್ಜ್​ನೊಂದಿಗೆ ಶಾಲೆಗೆ ಆಗಮಿಸಿದ್ದ ವಿದ್ಯಾರ್ಥಿನಿಗೆ ಶಿಕ್ಷೆ…!

ಶಾಲೆಗೆ ತಡವಾಗಿ ಬಂದರೆ, ಕೊಟ್ಟ ಅಸೈನ್​ ಮೆಂಟ್​ ಮಾಡದಿದ್ದರೆ, ಕೀಟಲೆ ಮಾಡಿದ್ದರೆ ಶಾಲೆಯಲ್ಲಿ ಶಿಕ್ಷೆ ನೀಡುವ ಸಂಪ್ರದಾಯ ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ, ಇಲ್ಲೊಂದು ಶಾಲೆಯಲ್ಲಿ ವಿದ್ಯಾರ್ಥಿನಿ ತನ್ನ ಐಪ್ಯಾಡ್​ನಲ್ಲಿ ಶೇ.93 ಬ್ಯಾಟರಿ ಚಾರ್ಜ್​ನೊಂದಿಗೆ ಶಾಲೆಗೆ ಆಗಮಿಸಿದ್ದಕ್ಕೆ ಶಿಕ್ಷೆಗೆ ಒಳಗಾಗಿದ್ದಾಳೆ.

ವಿದ್ಯಾರ್ಥಿನಿಯ ತಾಯಿ ಶಾಲೆಯಲ್ಲಿನ ನಡೆದ ಘಟನೆಯನ್ನು ಟ್ವೀಟರ್​ ಮೂಲಕ ಹಂಚಿಕೊಂಡಿದ್ದು, ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ. ನನ್ನ ಮಗಳಿಗೆ ಶಾಲೆಗೆ ಬಾರದಂತೆ ಡಿಟೆನ್ಷನ್​ ಶಿಕ್ಷೆ ವಿಧಿಸಲಾಯಿತು. ಏಕೆಂದರೆ ಶಾಲೆಗೆ ಬಂದಾಗ ಅವಳ ಐಪ್ಯಾಡ್​ 93 ಪ್ರತಿಶತದಷ್ಟು ಚಾರ್ಜ್​ ಇತ್ತು ಎಂದು ಸೆಲೀನಾ ಎಂಬ ಪೋಷಕರು ಹೇಳಿಕೊಂಡಿದ್ದಾರೆ.

ವಿದ್ಯಾಥಿರ್ಗಳು ಶಾಲೆಗೆ ಬರುವಾಗ ಐ ಪ್ಯಾಡ್​ ಚಾರ್ಜ್​ ಕನಿಷ್ಠ ಶೇ.97 ಚಾರ್ಜ್​ ಇರಬೇಕೆಂದು ಶಾಲೆಯಿಂದ ಪೋಷಕರಿಗೆ ತಿಳಿಸಲಾಗಿತ್ತು. ಅಷ್ಟು ಚಾರ್ಜ್​ ಇಲ್ಲದ ಕಾರಣ ತಮ್ಮ ಮಗಳನ್ನು ಹೊರಗೆ ಹಾಕಿದ್ದಕ್ಕೆ ತಾಯಿ ಸಿಟ್ಟಾಗಿದ್ದಾರೆ. ಅಂತಹ ಅಸಂಬದ್ಧ ಆದೇಶವನ್ನು ಯಾರಾದರೂ ಕೇಳಿದ್ದೀರಾ? ಎಂದು ತಾಯಿ ಟ್ವಿಟ್ಟರ್​ನಲ್ಲಿ ಪ್ರಶ್ನಿಸಿದ್ದಾರೆ. ಹಾಗೆಯೇ ಶಾಲೆಯ ಅಧಿಕಾರಿಗಳಿಗೆ ತಾವು ಕಳಿಸಿದ ಪತ್ರದ ಸ್ಕ್ರೀನ್​ ಶಾಟ್​ ಅನ್ನೂ ಸಹ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು. ಶಾಲೆಯಿಂದ ವಿವರಣೆ ಕೂಡ ಕೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...