alex Certify ಟ್ಯೂಶನ್​ ಮುಗಿಸಿ ಬರುವ ವೇಳೆ ಚರಂಡಿಗೆ ಬಿದ್ದ ಬಾಲಕ ಕಣ್ಮರೆ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟ್ಯೂಶನ್​ ಮುಗಿಸಿ ಬರುವ ವೇಳೆ ಚರಂಡಿಗೆ ಬಿದ್ದ ಬಾಲಕ ಕಣ್ಮರೆ….!

15 ವರ್ಷದ ಬಾಲಕ ಆಯತಪ್ಪಿ ಚರಂಡಿಗೆ ಬಿದ್ದು ಬಳಿಕ ಕಣ್ಮರೆಯಾದ ಘಟನೆ ಓಡಿಶಾದ ಭುವನೇಶ್ವರದಲ್ಲಿ ನಡೆದಿದೆ.

10ನೇ ತರಗತಿಯ ಜ್ಯೋತಿರ್ಮಯ ಬೆಹ್ರಾ ಚರಂಡಿಗೆ ಬಿದ್ದ ಬಾಲಕ ಎನ್ನಲಾಗಿದೆ. ಮಧ್ಯಾಹ್ನ 2 ಗಂಟೆ ಸುಮಾರಿಗೆ ಸೈಕಲ್​ ಏರಿ ಟ್ಯೂಷನ್​ಗೆ ಹೋಗುತ್ತಿದ್ದ ಬಾಲಕ ತೆರೆದ ಚರಂಡಿಯಲ್ಲಿ ಬಿದ್ದಿದ್ದಾನೆ.

8 ಗಂಟೆಗೂ ಅಧಿಕ ಕಾಲ ಬಾಲಕನ ಪತ್ತೆಗೆ ಹುಡುಕಾಟ ನಡೆಸಲಾಗಿದೆ. ಬಾಲಕನನ್ನು ಆದಷ್ಟು ಬೇಗ ಪತ್ತೆ ಮಾಡುತ್ತೇವೆ ಎಂದು ಅಗ್ನಿಶಾಮಕ ದಳದ ಅಧಿಕಾರಿ ಪ್ರಕಾಶ್​ ಅಭಯ ನೀಡಿದ್ದಾರೆ.

ಚರಂಡಿಯು ಪ್ರವಾಹದ ನೀರಿನಿಂದ ಉಕ್ಕಿ ಹರಿಯುತ್ತಿತ್ತು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಹೀಗಾಗಿ ಚರಂಡಿಗೆ ಬೀಳುತ್ತಿದ್ದಂತೆಯೇ ಬಾಲಕ ಕೊಚ್ಚಿ ಹೋಗಿದ್ದಾನೆ ಎನ್ನಲಾಗಿದೆ.

ವಿವಿಧ ಪ್ರದೇಶಗಳಲ್ಲಿ ಓಡಿಶಾದ ಅಗ್ನಿಶಾಮಕ ದಳ ಸಿಬ್ಬಂದಿಗೆ ಬಾಲಕನಿಗಾಗಿ ಹುಡುಕಾಟ ನಡೆಸುತ್ತಿದೆ. ಚರಂಡಿ ದುರಸ್ಥಿ ಸರಿಪಡಿಸಿದ ಸ್ಥಳೀಯ ಆಡಳಿತಾಧಿಕಾರಿಗಳ ವಿರುದ್ಧ ಸ್ಥಳೀಯರು ಆಕ್ರೋಶ ಹೊರ ಹಾಕಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...