alex Certify SHOCKING: ಶಿಕ್ಷಕನಿಂದಲೇ ಪೈಶಾಚಿಕ ಕೃತ್ಯ: ವಿದ್ಯಾರ್ಥಿಗೆ ಹಿಗ್ಗಾಮುಗ್ಗಾ ಥಳಿಸಿ ಕೆಡವಿ ನೆಲಕ್ಕೆ ತಲೆ ಉಜ್ಜಿದ ಶಿಕ್ಷಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING: ಶಿಕ್ಷಕನಿಂದಲೇ ಪೈಶಾಚಿಕ ಕೃತ್ಯ: ವಿದ್ಯಾರ್ಥಿಗೆ ಹಿಗ್ಗಾಮುಗ್ಗಾ ಥಳಿಸಿ ಕೆಡವಿ ನೆಲಕ್ಕೆ ತಲೆ ಉಜ್ಜಿದ ಶಿಕ್ಷಕ

ಲಖ್ನೋ: ಉತ್ತರ ಪ್ರದೇಶದ ಭದೋಹಿ ಜಿಲ್ಲೆಯಲ್ಲಿ ಶಿಕ್ಷಕನೊಬ್ಬ ರಾಕ್ಷಸೀಯ ಕೃತ್ಯವೆಸಗಿದ್ದಾನೆ. 7 ವರ್ಷದ ದಲಿತ ವಿದ್ಯಾರ್ಥಿಯನ್ನು ಹಿಗ್ಗಾಮುಗ್ಗಾ ಥಳಿಸಿ ತಲೆಯನ್ನು ನೆಲಕ್ಕೆ ಉಜ್ಜಿದ್ದಾನೆ.

ಭದೋಹಿ ಜಿಲ್ಲೆಯ ಕಿಯೋರೌನಾ ಪ್ರದೇಶದ ಗಂಗಾಪುರ ತಾಲಿಯಾ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಶಿಕ್ಷಕ ಇಂತಹ ಪೈಶಾಚಿಕ ಕೃತ್ಯವೆಸಗಿದ್ದಾನೆ. ಹಲ್ಲೆಗೊಳಗಾದ ಬಾಲಕ ಎರಡನೇ ತರಗತಿ ಓದುತ್ತಿದ್ದ. ಶಾಲೆಯ ಮೈದಾನದಲ್ಲಿ ಆಟವಾಡುತ್ತಿದ್ದ ಸಂದರ್ಭದಲ್ಲಿ ಶಿಕ್ಷಕ ಈ ರೀತಿ ಪೈಶಾಚಿಕ ಕೃತ್ಯವೆಸಿಗಿದ್ದಾನೆ.

ಮುಖದ ಮೇಲೆ ಬಲವಾಗಿ ಗುದ್ದಿದ ನಂತರ ಬಾಲಕನನ್ನು ಕೆಡವಿ ತಲೆಯನ್ನು ನೆಲಕ್ಕೆ ಉಜ್ಜಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಬಾಲಕನ ಬಲಗಣ್ಣಿನ ಮೇಲೆ ಗಾಯವಾಗಿದ್ದು, ಆತನ ಚಿಕ್ಕಪ್ಪ ನೀಡಿದ ದೂರಿನ ಅನ್ವಯ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...