alex Certify ಹಬ್ಬದ ಋತುವಿನಲ್ಲಿ ದಾಖಲೆಯ ರಫ್ತು ಕಂಡ ಆಭರಣಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಬ್ಬದ ಋತುವಿನಲ್ಲಿ ದಾಖಲೆಯ ರಫ್ತು ಕಂಡ ಆಭರಣಗಳು

ಮುಂಬರುವ ಹಬ್ಬದ ಮಾಸದಲ್ಲಿ ಬೇಡಿಕೆ ಹೆಚ್ಚಿರುವ ಕಾರಣ ಆಭರಣ ಹಾಗೂ ರತ್ನಗಳ ರಫ್ತುಗಳು ಆಗಸ್ಟ್‌ನಲ್ಲಿ ದಾಖಲೆಯ 24,239.81 ಕೋಟಿ ರೂ.ಗಳ ಮಟ್ಟಕ್ಕೆ ಏರಿಕೆ ಕಂಡಿದೆ.

92ನೇ ವಸಂತಕ್ಕೆ ಕಾಲಿಟ್ಟ ಗಾನ ಕೋಗಿಲೆ ಲತಾ ಮಂಗೇಶ್ಕರ್​​

2020ರ ಆಗಸ್ಟ್‌ನಲ್ಲಿ 13,160.24 ಕೋಟಿ ರೂ.ಗಳಷ್ಟಿದ್ದ ಆಭರಣ ಹಾಗೂ ರತ್ನಗಳ ರಫ್ತು ಆಗಸ್ಟ್ 2019ರಲ್ಲಿ 20,793 ಕೋಟಿ ರೂ.ಗಳಷ್ಟಿತ್ತು. ಕೋವಿಡ್ ನಿರ್ಬಂಧಗಳ ಕಾರಣದಿಂದಾಗಿ ಕಳೆದ ವರ್ಷದ ರಫ್ತು ವಹಿವಾಟು ಮಂಕಾಗಿತ್ತು.

ಇದೇ ವೇಳೆ ಕತ್ತರಿಸಿ ಪಾಲಿಶ್ ಮಾಡಲಾದ ವಜ್ರಗಳ ರಫ್ತಿನಲ್ಲಿ 29.37% ವರ್ಧನೆ ಕಂಡುಬಂದಿದ್ದು, ಆಗಸ್ಟ್ 2021ರಲ್ಲಿ 15,083 ಕೋಟಿ ರೂ.ಗಳ ವಹಿವಾಟು ನಡೆದಿದೆ. ಆಗಸ್ಟ್‌ 2019ರಲ್ಲಿ ಇದೇ ವಹಿವಾಟು 11,659.46 ಕೋಟಿ ರೂ.ಗಳಷ್ಟಿತ್ತು.

Big News: ಅಧ್ಯಯನದಲ್ಲಿ ಬಯಲಾಯ್ತು ಭಾರತೀಯರ ‘ಎತ್ತರ’ದ ಕುರಿತಾದ ಶಾಕಿಂಗ್‌ ಸಂಗತಿ

ಆಗಸ್ಟ್‌ 2021ರಲ್ಲಿ ಚಿನ್ನದ ಆಭರಣಗಳ ರಫ್ತಿನಲ್ಲಿ 15.06%ನಷ್ಟು ಇಳಿಕೆ ಕಂಡುಬಂದಿದ್ದು, 5,756.54 ಕೋಟಿ ರೂ.ಗಳ ವಹಿವಾಟು ಕಂಡಿದೆ. 2019ರ ಆಗಸ್ಟ್‌ನಲ್ಲಿ 6,777.5 ಕೋಟಿ ರೂ.ಗಳಷ್ಟು ಚಿನ್ನ ರಫ್ತಾಗಿತ್ತು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...