alex Certify 92ನೇ ವಸಂತಕ್ಕೆ ಕಾಲಿಟ್ಟ ಗಾನ ಕೋಗಿಲೆ ಲತಾ ಮಂಗೇಶ್ಕರ್​​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

92ನೇ ವಸಂತಕ್ಕೆ ಕಾಲಿಟ್ಟ ಗಾನ ಕೋಗಿಲೆ ಲತಾ ಮಂಗೇಶ್ಕರ್​​

ಖ್ಯಾತ ಹಿರಿಯ ಗಾಯಕಿ ಲತಾ ಮಂಗೇಶ್ಕರ್​ 92ನೇ ವರ್ಷದ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ. ಭಾರತ ರತ್ನ ಪುರಸ್ಕೃತೆ ಜನ್ಮ ದಿನವಾದ ಇಂದು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕರು ಭಾರತದ ಕೋಗಿಲೆಗೆ ಶುಭಕೋರಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರು ಲತಾ ಮಂಗೇಶ್ಕರ್​ರ ಆಶೀರ್ವಾದವನ್ನು ತಮ್ಮ ಅತ್ಯಂತ ದೊಡ್ಡ ಶಕ್ತಿಯ ಮೂಲ ಎಂದು ಬಣ್ಣಿಸಿದ್ದಾರೆ.

ಲತಾ ಸಹೋದರಿಗೆ ಜನ್ಮ ದಿನದ ಶುಭಾಶಯಗಳು. ವಿಶ್ವಾದ್ಯಂತ ಇವರ ಮಧುರವಾದ ಧ್ವನಿಯು ಪ್ರತಿಧ್ವನಿಸುತ್ತದೆ. ಇವರ ವಿನಮ್ರತೆ, ಭಾರತೀಯ ಸಂಸ್ಕೃತಿ ಬಗೆಗಿನ ಉತ್ಸಾಹಕ್ಕಾಗಿ ಗೌರವಿಸಲಾಗುತ್ತದೆ. ಲತಾ ಸಹೋದರಿಯ ದೀರ್ಘ ಆಯುಷ್ಯಕ್ಕಾಗಿ ನಾನು ಪ್ರಾರ್ಥಿಸುತ್ತೇನೆ ಎಂದು ಪ್ರಧಾನಿ ಮೋದಿ ಟ್ವೀಟಾಯಿಸಿದ್ದಾರೆ.

ನಟಿ ಜುಹಿ ಚಾವ್ಲಾ ಕೂಡ ಟ್ವಿಟರ್​ನಲ್ಲಿ ಲತಾ ಮಂಗೇಶ್ಕರ್ ಅವರಿ​ಗೆ ಶುಭ ಕೋರಿದ್ದಾರೆ. ನಿಮ್ಮ ಹಾಡುಗಳನ್ನು ಕೇಳ್ತಿದ್ರೆ ಹೂವಿನ ಮಳೆಯಾದಂತೆ, ಗಂಗಾ ನದಿಯು ಹರಿದಂತೆ ಭಾಸವಾಗುತ್ತದೆ ಎಂದು ಹೇಳಿದ್ದಾರೆ.

ಫಿಲಂ ಮೇಕರ್​ ಮಧುರ್​ ಭಂಡಾರ್ಕರ್​ ಲತಾ ಮಂಗೇಶ್ಕರ್​ರನ್ನು ಸಂಗೀತದ ದೇವತೆ ಎಂದು ಬಣ್ಣಿಸಿದ್ದಾರೆ. ಅಲ್ಲದೇ ಜನ್ಮದಿನದ ಶುಭಾಶಯವನ್ನೂ ಕೋರಿದ್ದಾರೆ.

— Narendra Modi (@narendramodi) September 28, 2021

 

 

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...