alex Certify ಈ ಕಣ್ಕಟ್ಟು ಚಿತ್ರದಲ್ಲಿ ಅಡಗಿರುವ ಪದಗಳನ್ನು ಹುಡುಕುವುದೊಂದು ದೊಡ್ಡ ಸವಾಲು…! ನೀವೂ ಒಮ್ಮೆ ಟ್ರೈ ಮಾಡಿ ನೋಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಕಣ್ಕಟ್ಟು ಚಿತ್ರದಲ್ಲಿ ಅಡಗಿರುವ ಪದಗಳನ್ನು ಹುಡುಕುವುದೊಂದು ದೊಡ್ಡ ಸವಾಲು…! ನೀವೂ ಒಮ್ಮೆ ಟ್ರೈ ಮಾಡಿ ನೋಡಿ

ನಿತ್ಯ ಬದುಕಿನ ಜಂಜಡಗಳ ನಡುವೆ ಮನಸ್ಸನ್ನು ಚುರುಕುಗೊಳಿಸುವ ಕೆಲವು ವಿಷಯಗಳಾದರೂ ಬೇಕು.

ಕೆಲವು ಸೃಜನಶೀಲರು ಅಂತಹ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಅವರು ಸೃಷ್ಟಿಸಿರುವ ಕಣ್ಕಟ್ಟಿನ ಚಿತ್ರಗಳು ನಮ್ಮ ಮನಸ್ಸನ್ನು ಚುರುಕುಗೊಳಿಸುತ್ತವೆ ಕೂಡ. ಅಂತಹ ಒಂದು ಚಿತ್ರ ಇಲ್ಲಿದೆ. ಇವುಗಳನ್ನು ಸೂಕ್ಷ್ಮವಾಗಿ ಏಕಾಗ್ರಚಿತ್ತದಿಂದ ನೋಡಿ ಮರೆಯಾಗಿರುವ ಪದಗಳನ್ನು ಹುಡುಕಿ ಹೇಳಿ ನೋಡೋಣ.

ಈಗಾಗಲೇ ಹೇಳಿದಂತೆ ಇದು ಕಣ್ಕಟ್ಟು ಚಿತ್ರ. ಎಷ್ಟು ನೋಡಿದರೂ ಹೌದೋ ಅಲ್ಲವೋ ಎಂಬ ಸಂದೇಹ. ಈ ಭ್ರಮೆಯ ನಡುವೆಯೂ ಎಚ್ಚರಿಕೆಯಿಂದ ಗಮನಿಸಿದರೆ MORE ಎಂಬ ಪದವನ್ನು ಕಾಣಬಹುದು. ಇದೆಲ್ಲ ನಮ್ಮಿಂದಾಗದು ಎಂದು ನೀವು ಭಾವಿಸುವುದಾದರೆ, ಇನ್ನೂ ಕೆಲವು ಪದಗಳನ್ನು ಹುಡುಕುವುದು ಸುಲಭವಲ್ಲ.

ತಲೆ ತಿರುಗಿಸುವಂತಿದೆ ಟೊಮೆಟೊ ಬೆಲೆ, ಶತಕ ದಾಟಿದ ಚಿಲ್ಲರೆ ದರ, ಹೋಲ್ಸೇಲ್ ದರ 15 ಕೆಜಿಗೆ 1080 ರೂ.

ಸಮಾಧಾನದಿಂದ ಮತ್ತೊಮ್ಮೆ ಚಿತ್ರವನ್ನು ಗಮನಿಸಿ, ಹಳದಿ ಹಿನ್ನೆಲೆಯಲ್ಲಿ ನಾವು ಬಹಳಷ್ಟು ಹಸಿರು ಚುಕ್ಕೆಗಳನ್ನು ನೋಡಬಹುದು. ಎಚ್ಚರಿಕೆಯಿಂದ ಗಮನಿಸಿದರೆ MILE ಎಂಬ ಪದ ಕಾಣಬಹುದು. ಈ ಆಪ್ಟಿಕಲ್ ಭ್ರಮೆಯನ್ನು ಇನ್ನಷ್ಟು ಎಚ್ಚರಿಕೆಯಿಂದ ಗಮನಿಸಿದರೆ ಎಲ್ಲ ಚುಕ್ಕೆಗಳು ತೇಲುತ್ತಿರುವಂತೆ ಭಾಸವಾಗುತ್ತದೆ. ಈ ಸವಾಲಿನ ನಡುವೆ, MILE ಪದವನ್ನು ಕಂಡುಹಿಡಿಯುವುದು ತುಸು ಕಷ್ಟವೇ ಸರಿ.

ಇನ್ನು ಬಹಳಷ್ಟು ನೀಲಿ ಚುಕ್ಕೆಗಳನ್ನು ಹೊಂದಿರುವ ಈ ಚಿತ್ರದಲ್ಲಿ ಮೇಲಿನ ಎರಡೂ ಭ್ರಮೆಗಳ ನಡುವೆ ನೀಲಿ ಚುಕ್ಕೆಗಳ ಮಾದರಿಯು ಮಧ್ಯದಿಂದ ಮುರಿದುಹೋಗಿದೆ. ಹಿಂದಿನ ಸಂಕೀರ್ಣ ಭ್ರಮೆಗಳಿಗೆ ಹೋಲಿಸಿದರೆ, ಇದು ಬಹಳ ಸರಳವಾಗಿದೆ. DOG ಅನ್ನು ಮಧ್ಯದಲ್ಲಿ ಬರೆದುದು ಕಂಡುಬರುತ್ತದೆ.

ಈ ಎಲ್ಲಾ ಆಪ್ಟಿಕಲ್ ಭ್ರಮೆಗಳಲ್ಲಿ ಅತ್ಯಂತ ಕಷ್ಟವಾದುದು ಇದು. ಏಕೆಂದರೆ ಇಲ್ಲಿ ಸಾಕಷ್ಟು ಅಸಮ ವಿನ್ಯಾಸಗಳಿವೆ. ಹೆಚ್ಚು ಎಚ್ಚರಿಕೆಯಿಂದ ಹುಡುಕಿದ ನಂತರ, ಮತ್ತೆ ಮಧ್ಯದಲ್ಲೇ WALK ಪದವನ್ನು ಕಾಣಬಹುದು. ಇಂತಹ ಆಪ್ಟಿಕಲ್ ಭ್ರಮೆಗಳು ಏಕಕಾಲದಲ್ಲಿ ಗೊಂದಲ ಮತ್ತು ಆಸಕ್ತಿಯನ್ನು ಮೂಡಿಸುತ್ತವೆ.

ಇದರಲ್ಲಿ ಇನ್ನೂ ಒಂದು ಪದ ಅಡಗಿದೆ. ಅದನ್ನು ಗ್ರಹಿಸುಲ್ಲಿ ಶೇಕಡ 99 ಜನ ವಿಫಲರಾಗಿದ್ದಾರೆ. BAD EYES ಎಂಬ ಪದ ಎಲ್ಲಾದರೂ ಕಾಣುತ್ತದೆಯೇ ನೋಡಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...