ಮಾನಸಿಕ ಒತ್ತಡ ಹೆಚ್ಚಾದಷ್ಟೂ ದೇಹಕ್ಕೆ ಸಂಬಂಧಿತ ಅನಾರೋಗ್ಯ ಹೆಚ್ಚುವುದು ಖಚಿತ ಎಂದು ಅಧ್ಯಯನವೊಂದು ಹೇಳಿದೆ.
ಜರ್ನಲ್ ಸೆಲ್ ಮೆಟಬಾಲಿಸಂನಲ್ಲಿ ಈ ಅಧ್ಯಯನದ ಅಂಶಗಳು ಪ್ರಕಟವಾಗಿದ್ದು, ಒತ್ತಡದಲ್ಲಿದ್ದಾಗ ಮನುಷ್ಯರು ಹೆಚ್ಚು ಆಹಾರ ಸೇವಿಸುತ್ತಾರೆ ಎಂದು ವರದಿ ತಿಳಿಸಿದೆ.
ಹೀಗೆ ಒತ್ತಡದ ಜೊತೆಗೆ ಅಧಿಕ ಕ್ಯಾಲೊರಿಯ ಆಹಾರವೂ ಸೇರಿದರೆ ದೇಹದ ತೂಕ ಹೆಚ್ಚಾಗುತ್ತದೆ. ಅಲ್ಲದೆ ಅದೇ ಆಹಾರ, ಒತ್ತಡವಿಲ್ಲದೆ ಸೇವಿಸಿದಾಗ ತೂಕದ ಪ್ರಮಾಣ ಕಡಿಮೆ ಇರುತ್ತದೆ.
ಹಾಗೇ ಅಧಿಕ ಕ್ಯಾಲೊರಿ ಆಹಾರ ಸೇವಿಸಿದರೆ ಇನ್ಸುಲಿನ್ ಪ್ರಮಾಣ ಹೆಚ್ಚುತ್ತದೆ. ಅದನ್ನೇ ಒತ್ತಡದಲ್ಲಿದ್ದಾಗ ಸೇವಿಸಿದರೆ ದೇಹದಲ್ಲಿನ ಇನ್ಸುಲಿನ್ ಪ್ರಮಾಣ ಹತ್ತು ಪಟ್ಟು ಹೆಚ್ಚುತ್ತದೆ ಎಂದು ವರದಿ ಹೇಳಿದೆ.