ಸ್ಟ್ರಾಬೆರಿ ಚರ್ಮವನ್ನು ಹೈಡ್ರೀಕರಿಸುತ್ತದೆ. ಇದು ನಿಮ್ಮ ಚರ್ಮಕ್ಕೆ ಒಳಗಿನಿಂದ ಕಾಂತಿಯನ್ನು ನೀಡುತ್ತದೆ. ಇದನ್ನು ಎಲ್ಲಾ ಪ್ರಕಾರದ ಚರ್ಮಗಳಿಗೂ ಬಳಸಬಹುದು. ಆದರೆ ಅದನ್ನು ಹೇಗೆ ಬಳಸುವುದು ಎಂಬುದನ್ನು ತಿಳಿದುಕೊಳ್ಳಿ.
ಸಾಮಾನ್ಯ ಹಾಗೂ ಎಣ್ಣೆಯುಕ್ತ ಚರ್ಮ ಹೊಂದಿರುವವರು 6 ಸ್ಟ್ರಾಬೆರಿ ಪೇಸ್ಟ್ ಗೆ ½ ಕಪ್ ಮೊಸರು, ಸ್ವಲ್ಪ ಜೇನುತುಪ್ಪ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ 20 ನಿಮಿಷ ಬಿಟ್ಟು ತಣ್ಣೀರಿನಲ್ಲಿ ವಾಶ್ ಮಾಡಿ.
ಸ್ಟ್ರಾಬೆರಿ ಚರ್ಮವನ್ನು ಹೈಡ್ರೇಟ್ ಮಾಡುವುದರಿಂದ ಒಣ ಚರ್ಮ ಹೊಂದಿರುವವರು 6 ಸ್ಟ್ರಾಬೆರಿ ಪೇಸ್ಟ್ ಗೆ 2 ಚಮಚ ಜೇನುತುಪ್ಪ, ಮಾವಿನ ಹಣ್ಣಿನ ತಿರುಳು, 1 ಚಮಚ ಆಲಿವ್ ಆಯಿಲ್ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ 15 ನಿಮಿಷ ಬಿಟ್ಟು ತಣ್ಣೀರಿನಲ್ಲಿ ವಾಶ್ ಮಾಡಿ.
ಒಣ ಮತ್ತು ಎಣ್ಣೆ ಮಿಶ್ರಿತ ಚರ್ಮ ಹೊಂದಿರುವವರು 6 ಸ್ಟ್ರಾಬೆರಿ ಪೇಸ್ಟ್ ಗೆ 1 ಚಮಚ ಅಲೋವೆರಾ ಜೆಲ್ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ 15 ನಿಮಿಷ ಬಿಟ್ಟು ತಣ್ಣೀರಿನಲ್ಲಿ ವಾಶ್ ಮಾಡಿ.