ಸಾಮಾಜಿಕ ಜಾಲತಾಣಗಳಲ್ಲಿ ದೇಸೀ ನೆಟ್ಟಿಗರ ವಲಯದಲ್ಲಿ ಭಾರೀ ಜನಪ್ರಿಯವಾಗಿರುವ ಪಾಕಿಸ್ತಾನದ ನಿರಾಶಾ ಕ್ರಿಕೆಟ್ ಅಭಿಮಾನಿಯೊಬ್ಬರ ಮುಖವು ಲೆಕ್ಕವಿಲ್ಲದಷ್ಟು ಮೀಮ್‌ಗಳನ್ನು ಸೃಷ್ಟಿಸಿದೆ. 2019ರ ಕ್ರಿಕೆಟ್ ವಿಶ್ವಕಪ್‌ನ ಪಾಕಿಸ್ತಾನ-ಆಸ್ಟ್ರೇಲಿಯಾ ನಡುವಿನ ಪಂದ್ಯದ ವೇಳೆ ಭಾರೀ ನಿರಾಸೆಯಲ್ಲಿ ತಮ್ಮ ಕೈಗಳನ್ನು ಸೊಂಟದ ಮೇಲೆ ಹಾಕಿಕೊಂಡು ಮುಖದಲ್ಲಿ ಬೇಸರ ವ್ಯಕ್ತಪಡಿಸುತ್ತಿರುವ ಮುಹಮ್ಮದ್ ಸಾರಿಂ ಅಖ್ತರ್ ಭಾರತದಲ್ಲಿ ಸೆಲೆಬ್ರಿಟಿಯೇ ಆಗಿಬಿಟ್ಟಿದ್ದಾರೆ.
ಕೊರೊನಾ ಡೆಲ್ಟಾ ಪ್ಲಸ್ ಗೆದ್ದು ಬಂದ ಈತ ಹೇಳಿದ್ದೇನು….?
ಮಾಧ್ಯಮವೊಂದಕ್ಕೆ ಕೊಟ್ಟ ಸಂದರ್ಶನವೊಂದರಲ್ಲಿ ಮಾತನಾಡಿದ ಮುಹಮ್ಮದ್ “ನನ್ನ ಹೆಸರನ್ನು ಲೀಕ್ ಮಾಡಿದ ಬಳಿಕ ಸಾವಿರಾರು ಫ್ರೆಂಡ್ ರಿಕ್ಷೆಸ್ಟ್‌ಗಳು ನನ್ನ ಫೇಸ್ಬುಕ್ ಪ್ರೊಫೈಲ್‌ಗೆ ಬಂದಿದ್ದು, ರಾತ್ರಿಯೆಲ್ಲಾ ನನ್ನ ಫೋನ್ ರಿಂಗಣಿಸುತ್ತಲೇ ಇರುತ್ತಿತ್ತು” ಎಂದಿದ್ದಾರೆ.
ʼಕೊರೊನಾʼಕ್ಕೆ ಮತ್ತೊಂದು ಸಂಜೀವಿನಿ ಶೀಘ್ರದಲ್ಲೇ ಲಭ್ಯ: ಬೆಲೆ ಘೋಷಣೆ ಮಾಡಿದ ಡಾ. ರೆಡ್ಡೀಸ್ ಲ್ಯಾಬೋರೇಟರಿ
“ಕ್ರಿಕೆಟ್ ಲೋಕವನ್ನೂ ಮೀರಿ ನನ್ನ ಈ ಮೀಮ್ ವ್ಯಾಪಿಸಿದ್ದು, ಉಗಾಂಡಾ, ಬೋಟ್ಸ್ವಾನಾ, ಮಲೇಷ್ಯಾ ಹಾಗೂ ಇಂಡೋನೇಷ್ಯಾಗಳಲ್ಲೂ ಹಬ್ಬಿದೆ. ಏಕೆಂದರೆ ಇಷ್ಟವಿಲ್ಲದ ವಿಚಾರಗಳು ಘಟಿಸಿದಾಗ ಅಂಥ ಪರಿಸ್ಥಿತಿಗಳಿಗೆ ಈ ಮೀಮ್ ಹೋಲಿಕೆಯಾಗುತ್ತದೆ” ಎನ್ನುತ್ತಾರೆ ಅವರು.
ಈ ವಿಚಾರವಾಗಿ ತಮಗಾದ ಫನ್ನಿ ಅನುಭವವೊಂದನ್ನು ಹಂಚಿಕೊಂಡ ಮುಹಮ್ಮದ್, “ಯೂರೋಪ್‌ನಲ್ಲಿ ವ್ಯಕ್ತಿಯೊಬ್ಬರು ನನ್ನ ಮುಖವನ್ನು ತಮ್ಮ ಕ್ರೆಡಿಟ್ ಕಾರ್ಡ್‌ನಲ್ಲಿ ಬಳಸಬಹುದೇ ಎಂದು ಕೇಳಿ, ಆ ಮೂಲಕ ತಮ್ಮ ಕ್ರೆಡಿಟ್ ಕಾರ್ಡ್ ಅನ್ನು ಎಲ್ಲೆಂದರಲ್ಲಿ ಪದೇ ಪದೇ ತೋರುವ ಅಗತ್ಯ ನಿಲ್ಲಬಹುದು” ಎಂದಿದ್ದಾರೆ.
ಅಖ್ತರ್‌ರ ಜನಪ್ರಿಯತೆ ಯಾವ ಮಟ್ಟಿಗೆ ಆಗಿಬಿಟ್ಟಿದೆಯೆಂದರೆ, ಕೋಕ-ಕೋಲಾ ತನ್ನ ಜಾಹೀರಾತು ಅಭಿಯಾನಕ್ಕಾಗಿ ಅವರನ್ನು ನೇಮಿಸಿಕೊಂಡಿದ್ದು, ಈ ಅಭಿಯಾನದಲ್ಲಿ ಅಖ್ತರ್, ವಾಸಿಂ ಅಕ್ರಂರನ್ನು ಭೇಟಿಯಾಗಿದ್ದರು.
https://www.instagram.com/p/COc0smWF80H/?utm_source=ig_web_copy_link