alex Certify ʼಕೊರೊನಾʼಕ್ಕೆ ಮತ್ತೊಂದು ಸಂಜೀವಿನಿ ಶೀಘ್ರದಲ್ಲೇ ಲಭ್ಯ: ಬೆಲೆ ಘೋಷಣೆ ಮಾಡಿದ ಡಾ. ರೆಡ್ಡೀಸ್​ ಲ್ಯಾಬೋರೇಟರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಕೊರೊನಾʼಕ್ಕೆ ಮತ್ತೊಂದು ಸಂಜೀವಿನಿ ಶೀಘ್ರದಲ್ಲೇ ಲಭ್ಯ: ಬೆಲೆ ಘೋಷಣೆ ಮಾಡಿದ ಡಾ. ರೆಡ್ಡೀಸ್​ ಲ್ಯಾಬೋರೇಟರಿ

ಡಿಆರ್​ಡಿಓ ಅಭಿವೃದ್ಧಿ ಪಡಿಸಿದ ಕೊರೊನಾ ವಿರೋಧಿ 2 ಡಿಜಿ ಔಷಧಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡೋದಾಗಿ ಘೋಷಣೆ ಡಾ. ರೆಡ್ಡೀಸ್​ ಲ್ಯಾಬೋರೇಟರಿ ಮಾಡಿದೆ. ಪ್ರತಿ ಸ್ಯಾಚೆಟ್​​ನ ಎಂಆರ್​ಪಿ 990 ರೂಪಾಯಿ ಇರಲಿದೆ ಎಂದು ಲ್ಯಾಬೋರೇಟರಿ ಹೇಳಿದೆ.

2 ಡಯೋಕ್ಸಿ ಡಿ ಗ್ಲುಕೋಸ್​​ ಅನ್ನೋದು ಕೋವಿಡ್​ 19 ರೋಗಿಗಳಿಗೆ ನೀಡಬಹುದಾದ ಆಂಟಿ ವೈರಲ್​ ಔಷಧಿಯಾಗಿದೆ. ರಕ್ಷಣಾ ಸಚಿವಾಲಯ ಮೇ 17ರಂದು ಈ ಔಷಧಿಯ ಬಗ್ಗೆ ಘೋಷಣೆ ಮಾಡುತ್ತಿದ್ದಂತೆಯೇ ಸಾಕಷ್ಟು ಕುತೂಹಲಗಳು ಹುಟ್ಟಿಕೊಂಡಿದ್ದವು. ಡಿಆರ್​ಡಿಓ ಅಭಿವೃದ್ಧಿಪಡಿಸಿದ ಈ ಔಷಧಿಯನ್ನು ಹೈದರಾಬಾದ್​ಮೂಲದ ಡಾ. ರೆಡ್ಡೀಸ್​ ಲ್ಯಾಬೋರೇಟರಿ ತಯಾರು ಮಾಡುತ್ತಿದೆ. 2 ಡಿಜಿ ಬ್ರ್ಯಾಂಡ್​ ಹೆಸರಿನ ಅಡಿಯಲ್ಲಿ ಮಾರಾಟವಾಗಲಿರುವ ಈ ಔಷಧಿಯು 99.5 ಪ್ರತಿಶತ ಶುದ್ಧತೆ ಹೊಂದಿದೆ.

ದೇಶದಲ್ಲಿ ಎಲ್ಲಾ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳಿಗೆ ಡಾ.ರೆಡ್ಡೀಸ್​​ ಈ ಔಷಧಿಗಳನ್ನ ಸರಬರಾಜು ಮಾಡಲಿದೆ. ಮೊದಲ ಹಂತದಲ್ಲಿ ಕಂಪನಿಯು ಮಹಾನಗರ ಹಾಗೂ 1ನೇ ಶ್ರೇಣಿಯ ನಗರಗಳಲ್ಲಿರುವ ಆಸ್ಪತ್ರೆಗಳಿಗೆ ಔಷಧಿ ನೀಡಲಿದೆ. ಉಳಿದ ಭಾಗಗಳಿಗೆ ನಂತರದ ದಿನಗಳಲ್ಲಿ ಲಸಿಕೆ ವಿತರಣೆಯಾಗಲಿದೆ ಎಂದು ಕಂಪನಿ ಹೇಳಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...