
ಮೋಡಗಳು ಚದುರುವುದು, ಮಳೆ-ಬಿಸಿಲುಗಳ ವ್ಯತ್ಯಾಸ, ತಾಪಮಾನದ ವಿವರಗಳು ಗ್ರಾಫಿಕ್ಸ್ ನಲ್ಲಿ ಪರದೆ ಮೇಲೆ ಬಿತ್ತರಗೊಳ್ಳುತ್ತಿತ್ತು. ಆದರೆ ಇವುಗಳ ನಡುವೆ ಒಂದು ಪುಟ್ಟ ನಾಯಿ ಪರದೆ ಮೇಲೆ ಓಡಾಡಿಕೊಂಡಿತ್ತು!
ಹೌದು, ಸ್ಟಾರ್ಮ್ ಹೆಸರಿನ ಈ ನಾಯಿ ನ್ಯೂಸ್ ಸ್ಟುಡಿಯೊದ ವರದಿಗಾರಿಕೆ ಕೊಠಡಿಗೆ ಪ್ರವೇಶಿಸಿದೆ.
ನೇರಪ್ರಸಾರದ ಮಧ್ಯೆ ಬಂದ ಈ ಅತಿಥಿಯನ್ನು ಹೊರಗೆ ಓಡಿಸಲು ಯಾರಿಗೂ ಸಮಯವಿಲ್ಲದ ಕಾರಣ, ನಾಯಿಯು ಟಿವಿ ಪರದೆಯಲ್ಲಿ ಹಲವು ನಿಮಿಷಗಳು ಬಿತ್ತರಗೊಂಡಿದೆ. ಈ ವಿಡಿಯೊ ಟಿಕ್‍ಟಾಕ್ ಮತ್ತು ಟ್ವಿಟರ್‍ನಲ್ಲಿ ವೈರಲ್ ಆಗಿದೆ.