ಅನೇಕರು ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಇಲ್ಲದೆ ಅಡುಗೆ ಮಾಡೋದೆ ಇಲ್ಲ. ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಮಾಡಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಮಾರುಕಟ್ಟೆಯಲ್ಲಿ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಸಿಗುತ್ತದೆ. ಆದ್ರೆ ಅನೇಕರು ಅದನ್ನು ಬಳಸುವುದಿಲ್ಲ. ಮನೆಯಲ್ಲಿಯೇ ಮಾಡಲು ಇಷ್ಟಪಡ್ತಾರೆ. ಬೆಳ್ಳುಳ್ಳಿ-ಶುಂಠಿ ಪೇಸ್ಟ್ ತುಂಬಾ ಸಮಯ ಇರಬೇಕೆಂದ್ರೆ ಈ ಟಿಪ್ಸ್ ಫಾಲೋ ಮಾಡಿ.
ಒಂದೆರಡು ತಿಂಗಳು ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಇಡಬೇಕೆಂದ್ರೆ ಮೊದಲು ಶುಂಠಿ ಮತ್ತು ಬೆಳ್ಳುಳ್ಳಿಯನ್ನು ಸಿಪ್ಪೆ ತೆಗೆದು ಬ್ಲೆಂಡರ್‌ನಲ್ಲಿ ಹಾಕಿ. ಇದರ ನಂತರ ಅದರಲ್ಲಿ ಎರಡು ಚಮಚ ಸಾಸಿವೆ ಎಣ್ಣೆಯನ್ನು ಮಿಶ್ರಣ ಮಾಡಿ. ನಂತರ ನೀರನ್ನು ಬಳಸದೆ ನುಣ್ಣಗೆ ರುಬ್ಬಿಕೊಂಡು ಪೇಸ್ಟ್ ಮಾಡಿ. ಈ ಪೇಸ್ಟ್ ಗೆ ಸ್ವಲ್ಪ ಉಪ್ಪು ಸೇರಿಸಿ ಮತ್ತು ಅದನ್ನು ಗಾಳಿಯಾಡದ ಡಬ್ಬದಲ್ಲಿ ತುಂಬಿಸಿ ಫ್ರಿಜ್‌ನಲ್ಲಿಡಿ. ಒಂದು ಅಥವಾ ಎರಡು ತಿಂಗಳು ಇದನ್ನು ಬಳಸಬಹುದು.
ನಾಲ್ಕರಿಂದ ಐದು ತಿಂಗಳು ಚೆನ್ನಾಗಿರಬೇಕೆಂದ್ರ, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ತಯಾರಿಸುವ ಮೊದಲು ಎರಡು ಚಮಚ ಸಾಸಿವೆ ಎಣ್ಣೆಯನ್ನು ಸೇರಿಸಿ. ಅದಕ್ಕೆ ಸ್ವಲ್ಪ ಉಪ್ಪು ಸೇರಿಸಿ. ಚಮಚದ ಸಹಾಯದಿಂದ ಪೇಸ್ಟನ್ನು ಐಸ್ ಟ್ರೇನಲ್ಲಿ ತುಂಬಿಸಿ. ನಂತ್ರ ಟ್ರೇಯನ್ನು ಪ್ಲಾಸ್ಟಿಕ್ ಕವರ್ ನಲ್ಲಿ ಅಥವಾ ಜಿಪ್ ಪಾಲಿ ಬ್ಯಾಗ್ ನಲ್ಲಿ ತುಂಬಿಸಿ ಫ್ರಿಜರ್ ನಲ್ಲಿಡಿ.