alex Certify ಸ್ಟಾರ್ ​ಫಿಷ್​ ಚಲಿಸುವುದು ಹೇಗೆ ? ಇಲ್ಲಿದೆ ವಿಜ್ಞಾನಿಗಳು ಕೊಟ್ಟಿರುವ ಉತ್ತರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ಟಾರ್ ​ಫಿಷ್​ ಚಲಿಸುವುದು ಹೇಗೆ ? ಇಲ್ಲಿದೆ ವಿಜ್ಞಾನಿಗಳು ಕೊಟ್ಟಿರುವ ಉತ್ತರ

ಭೂಮಿಯ ಮೇಲೆ ಮತ್ತು ಸಾಗರದ ಆಳದಲ್ಲಿ ಅವೆಷ್ಟೋ ಕುತೂಹಲ, ವಿಚಿತ್ರ ಜೀವಿಗಳು ಇವೆ. ಅವುಗಳಲ್ಲಿ ಒಂದು ಸ್ಟಾರ್​ಫಿಷ್​. ನಕ್ಷತ್ರದಂತೆ ಇರುವ ಈ ಮೀನಿಗೆ ಸ್ಟಾರ್​ಫಿಷ್​ ಎಂದು ಕರೆಯಲಾಗುತ್ತದೆ. ಈ ನಕ್ಷತ್ರಮೀನಿನ ಜೀವನ ಕ್ರಮವೇ ವಿಚಿತ್ರವಾದದ್ದು.

ಇವುಗಳು ಹೇಗೆ ಚಲಿಸುತ್ತವೆ ಎಂಬ ಬಗ್ಗೆ ಬಹಳ ಹಿಂದಿನಿಂದಲೂ ಸಂಶೋಧಕರು ತಲೆ ಕೆಡಿಸಿಕೊಂಡಿದ್ದರು. ಇದೀಗ ಅತ್ಯಾಧುನಿಕ ತಂತ್ರಜ್ಞಾನದ ಸಹಾಯದಿಂದ ಅದನ್ನು ತಿಳಿಯುವುದು ಸಹಕಾರಿಯಾಗಿದೆ. ನಕ್ಷತ್ರ ಮೀನು ಚಲಿಸುವ ಅಪರೂಪದ ಹಳೆಯ ವಿಡಿಯೋ ಒಂದು ಜಾಲತಾಣದಲ್ಲಿ ವೈರಲ್​ ಆಗುತ್ತಿದೆ.

ಸ್ಟಾರ್​ಫಿಷ್​ಗಳಿಗೆ ಉಸಿರಾಡಲು ಸಾಮಾನ್ಯ ಮೀನಿನಂತೆ ಕಿವಿರುಗಳ ಅಗತ್ಯವಿಲ್ಲ. ಅವುಗಳು ವಿಶೇಷ ರಂಧ್ರಗಳನ್ನು ಹೊಂದಿವೆ. ಇತರ ಅನೇಕ ಪ್ರಾಣಿಗಳಿಗಿಂತ ಭಿನ್ನವಾಗಿ, ಅವು ಸಾಕಷ್ಟು ದೀರ್ಘಕಾಲ ಬದುಕುತ್ತವೆ. ಪರಿಸ್ಥಿತಿಗಳು ಅನುಕೂಲಕರವಾಗಿದ್ದರೆ 35 ವರ್ಷಗಳವರೆಗೆ ಜೀವಿಸುತ್ತವೆ.

ಸಾಮಾನ್ಯವಾಗಿ ಸ್ಟಾರ್​ಫಿಷ್​ಗಳು 5 ಕೆಜಿ ವರೆಗೆ ತೂಕವಿರುವ ಪ್ರಾಣಿಗಳು. ಇವುಗಳ ಚರ್ಮವು ಮುಳ್ಳು ಮತ್ತು ಕ್ಯಾಲ್ಸಿಯಂ ಕಾರ್ಬೊನೇಟ್ ಸಂಯೋಜನೆಯ ಲೇಪನದಿಂದ ಕೂಡಿದೆ. ಇದರ ಮೂಲಕವೂ ಅವುಗಳು ಚಲನೆ ಮಾಡಲು ಸಾಧ್ಯವಾಗಿವೆ.

https://twitter.com/fasc1nate/status/1594681307992580098?ref_src=twsrc%5Etfw%7Ctwcamp%5Etweetembed%7Ctwterm%5E1594681307992580098%7Ctwgr%5Ede35269c31d70b712dbb0f46418bae8e730d0830%7Ctwcon%5Es1_&ref_url=https%3A%2F%2Fwww.news18.com%2Fnews%2Fbuzz%2Fstill-wondering-how-a-starfish-moves-watch-the-old-video-that-has-gone-viral-again-6445039.html

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...