ನ್ಯೂಯಾರ್ಕ್ನ ಯುವತಿ ತನ್ನ ಪೋಷಕರ ಹಣವನ್ನು ಐಷಾರಾಮಿ ಅತಿರಂಜಿತ ವಸ್ತುಗಳ ಖರೀದಿಗಳಿಗಾಗಿ ಹಾಳುಮಾಡುತ್ತಿದ್ದು, ಅದು ತನ್ನ ಕೆಲಸ ಎಂದು ವಿವರಿಸುವ ವಿಶೇಷ ವರದಿಯೊಂದು ಅಲ್ಲಿನ ಮಾಧ್ಯಮದಲ್ಲಿ ವರದಿಯಾಗಿದೆ.
ರೋಮಾ ಅಬ್ಡೆಸ್ಸೆಲಾಮ್ ಎಂಬಾಕೆ ತನ್ನನ್ನು ತಾನು ಪ್ರೊಫೆಷನ್ ಸ್ಟೇ ಎಟ್ ಹೋಮ್ ಡಾಟರ್ ಎಂದು ಕರೆದುಕೊಳ್ಳುತ್ತಾಳೆ. ಶಾಪಿಂಗ್ಗೆ ಕೇವಲ ಒಂದು ದಿನದಲ್ಲಿ ಅಂದಾಜು 39 ಲಕ್ಷ ರೂ. ಗಿಂತ ಹೆಚ್ಚು ಖರ್ಚು ಮಾಡಿದ್ದು, ತನ್ನ ಜೀವನಶೈಲಿಯನ್ನು ಸಾಮಾಜಿಕ ಜಾಲತಾಣದಲ್ಲಿ ತೋರಿಸಿದ್ದಾಳೆ. ಆಕೆಯ ದಿಗ್ಭ್ರಮೆಗೊಳಿಸುವ ದೈನಂದಿನ ಖರ್ಚನ್ನು ನೋಡಿ ನೆಟ್ಟಿಗರು ಹೌಹಾರಿದ್ದಾರೆ.
ಶನೆಲ್, ಗುಸ್ಸಿ, ಪ್ರಾಡಾ ಮತ್ತು ಡಿಯರ್ ಸೇರಿದಂತೆ ಐಷಾರಾಮಿ ಫ್ಯಾಷನ್ ಬ್ರ್ಯಾಂಡ್ಗಳ ವಸ್ತು ಖರೀದಿಯ ಬಿಲ್ ಪ್ರದರ್ಶನ, ಹಣವನ್ನು ಎಸೆಯುವ ಪೋಸ್ಟ್ಗಳನ್ನು ಆಗಾಗ್ಗೆ ಪೋಸ್ಟ್ ಮಾಡಿದ್ದು, “ನಾನು ನನ್ನ ಪೋಷಕರ ಹಣವನ್ನು ಸ್ಟೇ ಎಟ್ ಹೋಮ್ ಡಾಟರ್ಗಾಗಿ ಖರ್ಚು ಮಾಡಿದ್ದೇನೆ. ಇದು ಖುಷಿತಂದಿದೆ’ ಎಂದು ಅಬ್ದೆಸ್ಸೆಲಾಮ್ ಹೇಳಿಕೊಂಡಿದ್ದಾರೆ.
ಕೋವಿಡ್ ದಾಳಿಗೆ ಮುನ್ನ ಅಬ್ದೆಸ್ಸೆಲಾಮ್ ಸ್ಕಿನ್ ಕೇರ್ ಲೈನ್ ವ್ಯವಹಾರಕ್ಕೆ ಯೋಜನೆ ರೂಪಿಸಿದ್ದಳು. ಆದರೆ, ಕಳೆದ ಎರಡು ವರ್ಷಗಳಲ್ಲಿ ಆಕೆ ತನ್ನ ವ್ಯಾಪಾರ ಯೋಜನೆಗೆ ಹೆಚ್ಚು ಗಮನ ಕೊಡಲಿಲ್ಲ. ಈಗ ಐಷಾರಾಮಿ ಜೀವನವನ್ನು ಬಯಸಿದ್ದು, ಹಣ ಗಳಿಸುವ ಯೋಜನೆ ಕೈಬಿಟ್ಟಿದ್ದಾಳೆ.
ಪ್ರತಿದಿನ ನಾನು ಬೆಳಿಗ್ಗೆ ಉಪಹಾರ ಸೇವಿಸಿ, ವರ್ಕ್ ಔಟ್ ತರಗತಿಗೆ ಹೋಗುತ್ತೇನೆ ಬಳಿಕ ಬರ್ಗ್‌ಡಾಫ್ ಕಾರಿನಲ್ಲಿ ಗೆಳತಿಯರೊಂದಿಗೆ ಶಾಪಿಂಗ್ ಮಾಡುತ್ತೇನೆ. ಅದು ನನ್ನ ನಿರುದ್ಯೋಗಿ ಜೀವನ ಎಂದು ಹೇಳಿಕೊಂಡಿದ್ದಾಳಾಕೆ.