alex Certify ಫೆ. 8 ರಿಂದ ರಾಜ್ಯಮಟ್ಟದ ʻಪ್ರತಿಭಾ ಕಾರಂಜಿ ಸ್ಪರ್ಧೆʼ : ಪಾಲಿಸಬೇಕಾದ ನಿಯಮಗಳು ಇಲ್ಲಿದೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಫೆ. 8 ರಿಂದ ರಾಜ್ಯಮಟ್ಟದ ʻಪ್ರತಿಭಾ ಕಾರಂಜಿ ಸ್ಪರ್ಧೆʼ : ಪಾಲಿಸಬೇಕಾದ ನಿಯಮಗಳು ಇಲ್ಲಿದೆ

2023-24 ನೆಯ ಸಾಲಿನ ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಗಳನ್ನು ಆಯೋಜಿಸುವ ಕುರಿತು ಶಾಲಾ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.

ಮೇಲ್ಕಾಣಿಸಿದ ವಿಷಯ ಹಾಗೂ ಉಲ್ಲೇಖಕ್ಕೆ ಸಂಬಂಧಿಸಿದಂತೆ 2023-24 ನೆಯ ಸಾಲಿನ ರಾಜ್ಯ ಮಟ್ಟದ “ಪ್ರತಿಭಾ ಕಾರಂಜಿ ಸ್ಪರ್ಧೆ” ಕಾರ್ಯಕ್ರಮವು ಧಾರವಾಡ ಜಿಲ್ಲೆಯಲ್ಲಿ ನಡೆಯಲಿದ್ದು, ದಿನಾಂಕ : 08-02-2024 ರಿಂದ 09-02-2024 ರ ವರೆಗೆ ಆಯೋಜಿಸಲು ತೀರ್ಮಾನಿಸಲಾಗಿದೆ. ಸ್ಪರ್ಧಾಳುಗಳ ಹಾಗೂ ನೋಡಲ್ ಅಧಿಕಾರಿಗಳ/ ತಂಡದ ಮೇಲ್ವಿಚಾರಕರ ನೋಂದಣಿ ಪ್ರಕ್ರಿಯೆಯು ದಿನಾಂಕ: 07-02-2024 ರಂದು ಸಂಜೆ 04.00 ಗಂಟೆಯಿಂದ 09.00 ಗಂಟೆವರೆಗೆ ಹಾಗೂ ದಿನಾಂಕ 08-02-2024 ರ ಮುಂಜಾನೆ 07.00 ಗಂಟೆಯಿಂದ 09.00 ಗಂಟೆ ವರೆಗೆ ನಡೆಯುವುದು. ಕಾರಣ ಎಲ್ಲ ಜಿಲ್ಲೆಗಳ ಪ್ರತಿಭಾ ಕಾರಂಜಿ ನೋಡಲ್ ಅಧಿಕಾರಿಗಳು ತಮ್ಮ ಜಿಲ್ಲೆಯ ಸ್ಪರ್ಧಾಳುಗಳು ಹಾಗೂ ತಂಡದ ಮೇಲ್ವಿಚಾರಕರೊಂದಿಗೆ ಸಕಾಲದಲ್ಲಿ ನೋಂದಣಿ ಮಾಡಿಕೊಳ್ಳಲು ತಿಳಿಸಿದೆ.

ಮುಂದುವರೆದು, ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ 2023-24 ರ ವಿವಿಧ ಸ್ಪರ್ಧೆಗಳ ಸಾಮಾನ್ಯ ಹಾಗೂ ನಿರ್ದಿಷ್ಟ ನಿಯಮಗಳನ್ನು ಈ ಮುಂದೆ ತಿಳಿಸಲಾಗಿದ್ದು, ತಮ್ಮ ಜಿಲ್ಲೆಯ ಸ್ಪರ್ಧಾಳುಗಳು ಸದರ ನಿಯಮಗಳನ್ವಯ ಸಿದ್ಧತೆ ಮಾಡಿಕೊಳ್ಳುವಂತೆ ಕ್ರಮವಹಿಸುವುದು.

2023-24 ನೆಯ ಸಾಲಿನ ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಗಳ ನಿಯಮಗಳು ಕೆಳಗಿನಂತಿವೆ:

ಸ್ಪರ್ಧೆಯ ಸಾಮಾನ್ಯ ನಿಯಮಗಳು:

ಸ್ಪರ್ಧಾಳುಗಳು ತಮ್ಮ ಕೋಡ್ ನಂಬರ್‌ನ ಕಾರ್ಡಗಳನ್ನು ಸ್ಪರ್ಧಾ ಸ್ಥಳದಲ್ಲಿನ ಸೂಚಿತ ಕೌಂಟರ್ ನಲ್ಲಿ ತಮ್ಮ ನೋಡಲ್ ಅಧಿಕಾರಿ/ತಂಡದ ಮೇಲ್ವಿಚಾರಕರೊಂದಿಗೆ ಬಂದು ಪಡೆದುಕೊಳ್ಳುವುದು.

ಸ್ಪರ್ಧಾಳುಗಳು ತಮ್ಮ ಕೋಡ್ ನಂಬರ್ ಕಾರ್ಡನ್ನು ಪಡೆಯದೇ ಸ್ಪರ್ಧೆಗೆ ಭಾಗವಹಿಸುವಂತಿಲ್ಲ.

ಕೋಡ್ ನಂಬರ್ ಕಾರ್ಡನ್ನು ಸ್ಪರ್ಧೆ ನಡೆಯುವ ಸ್ಥಳದಲ್ಲಿ ಸಂಬಂಧಿಸಿದ ತೀರ್ಪುಗಾರರಿಗೆ ಸಲ್ಲಿಸಿ ತಮ್ಮ ಪ್ರಸ್ತುತಿಯನ್ನು ಮಾಡಬೇಕು.

 ಸ್ಪರ್ಧಾಳುಗಳು ತಮ್ಮ ಹೆಸರು/ ಶಾಲೆ/ ಜಿಲ್ಲೆಯ ಹೆಸರನ್ನು ಪ್ರಸ್ತುತಿಯ ಸಂದರ್ಭದಲ್ಲಿ ಹೇಳುವಂತಿಲ್ಲ.

 ನಿರ್ಣಾಯಕರ ನಿರ್ಣಯವೇ ಅಂತಿಮವಾಗಿರುತ್ತದೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...