alex Certify ತೆರಿಗೆದಾರರೇ ಗಮನಿಸಿ: 2 ತಿಂಗಳ ಜಿಎಸ್‌ಟಿ ರಿಟರ್ನ್ಸ್ ಸಲ್ಲಿಸದಿದ್ದರೆ ಜಿಎಸ್‌ಟಿಆರ್‌-1 ಸಲ್ಲಿಸುವಂತಿಲ್ಲ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತೆರಿಗೆದಾರರೇ ಗಮನಿಸಿ: 2 ತಿಂಗಳ ಜಿಎಸ್‌ಟಿ ರಿಟರ್ನ್ಸ್ ಸಲ್ಲಿಸದಿದ್ದರೆ ಜಿಎಸ್‌ಟಿಆರ್‌-1 ಸಲ್ಲಿಸುವಂತಿಲ್ಲ

ಹಿಂದಿನ ಎರಡು ತಿಂಗಳ ಜಿಎಸ್‌ಟಿಆರ್‌-3ಬಿ ರಿಟರ್ನ್ಸ್ ಸಲ್ಲಿಸದ ಉದ್ಯಮಗಳು ಸೆಪ್ಟೆಂಬರ್‌ 1ರಿಂದ ಜಿಎಸ್‌ಟಿಆರ್‌-1ರ ಹೊರಮುಖ ಪೂರೈಕೆಗಳ ವಿವರಗಳನ್ನು ಸಲ್ಲಿಸಲಾಗದು ಎಂದು ಜಿಎಸ್‌ಟಿ ಜಾಲ ತಿಳಿಸಿದೆ.

ನಿರ್ದಿಷ್ಟ ತಿಂಗಳ ಜಿಎಸ್‌ಟಿಆರ್‌-1ಅನ್ನು ಅದರ ಮುಂದಿನ ತಿಂಗಳ 11ನೇ ದಿನದಂದು ಉದ್ಯಮಗಳು ಪಾವತಿ ಮಾಡುತ್ತವೆ. ಜಿಎಸ್‌ಟಿಆರ್‌-3ಬಿಯನ್ನು ಅದೇ ತಿಂಗಳ 20-24ನೇ ದಿನಗಳ ನಡುವೆ ಹಂತಹಂತವಾಗಿ ಸಲ್ಲಿಸಲಾಗುತ್ತದೆ.

ಕೇಂದ್ರ ಜಿಎಸ್‌ಟಿ ಕಾನೂನಿನ 59(6)ನೇ ವಿಧಿಯಡಿ ಜಿಎಸ್‌ಟಿಆರ್‌-1ರ ಫೈಲಿಂಗ್‌ ಮೇಲೆ ನಿರ್ಬಂಧ ಹೇರುವ ಸಾಧ್ಯತೆ ಕೊಟ್ಟಿದ್ದು, ಸೆಪ್ಟೆಂಬರ್‌ 1ರಿಂದ ಅನ್ವಯವಾಗಲಿದೆ ಎಂದು ಸರಕು ಮತ್ತು ಸೇವಾ ತೆರಿಗೆಯ ತಂತ್ರಜ್ಞಾನ ಬೆನ್ನೆಲುಬಾದ ಜಿಎಸ್‌ಟಿ ಜಾಲವು ತೆರಿಗೆದಾರರಿಗೆ ತಿಳಿಸಿದೆ.

ಇಡ್ಲಿ-ದೋಸೆ, ಅಂಬಲಿ ಮಿಕ್ಸ್‌ ಪುಡಿಗಳ ಮೇಲೆ ಶೇ.18 GST

ನಿಯಮಗಳ ಪ್ರಕಾರ: ನೋಂದಾಯಿತ ವ್ಯಕ್ತಿಯು ಹಿಂದಿನ ಎರಡು ತಿಂಗಳ ಜಿಎಸ್‌ಟಿಆರ್‌-3ಬಿ ವಿವರಗಳನ್ನು ಒದಗಿಸದೇ ಇದ್ದಲ್ಲಿ ಸರಕು ಅಥವಾ ಸೇವೆಗಳ ಹೊರಮುಖ ಪೂರೈಕೆ ವಿವರಗಳು ಹಾಗೂ ಜಿಎಸ್‌ಟಿಆರ್‌-1 ಫಾರಂ ಫೈಲಿಂಗ್ ಮಾಡಲು ಅವಕಾಶ ಇರುವುದಿಲ್ಲ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...