ತ್ವರಿತವಾಗಿ ದಿನಸಿ ಡೆಲಿವರಿ ಮಾಡುವ ’Zepto’ ಸ್ಟಾರ್ಟ್‌ಅಪ್ ಅಭಿವೃದ್ಧಿಪಡಿಸಿದ ಮುಂಬಯಿಯ ಇಬ್ಬರು ಟೀನೇಜರ್‌ಗಳು ಉದ್ಯಮ ವಲಯದಲ್ಲಿ ಸಂಚಲನ ಸೃಷ್ಟಿಸಿದ್ದಾರೆ.
ನಿಧಿ ಸಂಗ್ರಹಗಾರ ವೈ ಕಾಂಬಿನೇಟರ್ ಮೂಲಕ ’Zepto’ಗೆ ಹೊಸದಾಗಿ $100 ದಶಲಕ್ಷ ಹರಿದುಬಂದಿದ್ದು, ಸ್ಟಾರ್ಟ್-ಅಪ್‌ನ ಮೌಲ್ಯವು $570 ದಶಲಕ್ಷಕ್ಕೆ ಏರಿಕೆ ಕಂಡಿದೆ. ಭಾರತದ ಇ-ಕಾಮರ್ಸ್ ಕ್ಷೇತ್ರಕ್ಕೆ ಕಾಲಿಟ್ಟ ಐದೇ ತಿಂಗಳಲ್ಲಿ ’Zepto’ ಈ ಮಟ್ಟದ ಪ್ರಗತಿ ಸಾಧಿಸಿದೆ.
ಸ್ಟಾನ್‌ಫೋರ್ಡ್ ವಿವಿ ಡ್ರಾಪ್‌ಔಟ್ ಆದಿತ್ ಪಾಲಿಚಾ ಎಂಬ 19 ವರ್ಷದ ಮತ್ತು ಆತನ ಬಾಲ್ಯದ ಸ್ನೇಹಿತ ಕೈವಲ್ಯ ವೋಹ್ರಾ ಸೇರಿಕೊಂಡು ’Zepto’ ಕಟ್ಟಿದ್ದಾರೆ. ವಿದೇಶದ ವ್ಯಾಸಂಗ ಬಿಟ್ಟು ಭಾರತಕ್ಕೆ ಆಗಮಿಸಿರುವ ಈ ಇಬ್ಬರೂ ಇ-ಕಾಮರ್ಸ್‌ನಲ್ಲಿ ಎಲ್ಲರ ಹುಬ್ಬೇರಿಸುವಂತೆ ಹೆಜ್ಜೆಗಳನ್ನು ಇಡುತ್ತಿದ್ದಾರೆ.
ಮಧ್ಯಪ್ರದೇಶ: 11 ವರ್ಷಗಳಲ್ಲಿ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ 41 ಲಕ್ಷದಷ್ಟು ಕುಸಿತ
ದಿನಸಿ ಮತ್ತು ದೈನಿಕ ಅಗತ್ಯತೆಗಳನ್ನು 10 ನಿಮಿಷಗಳ ಒಳಗೆ ಪೂರೈಸುವುದಾಗಿ ಹೇಳುವ ’Zepto’ ಮುಂಬಯಿಯಲ್ಲಿ ಆರಂಭಗೊಂಡು ಅದಾಗಲೇ ಬೆಂಗಳೂರು, ದೆಹಲಿ ಮತ್ತು ಇನ್ನೂ ನಾಲ್ಕು ನಗರಗಳಿಗೂ ಕಾಲಿಟ್ಟಿದೆ.
$1 ಲಕ್ಷ ಕೋಟಿ ಮೌಲ್ಯದ ರೀಟೇಲ್ ಮಾರುಕಟ್ಟೆಯಾದ ಭಾರತದಲ್ಲಿ ದಿನಸಿ ಪದಾರ್ಥಗಳ ಡೆಲಿವರಿ ಕ್ಷೇತ್ರ ಇದೀಗ ತಾನೇ ಮೇಲೇಳುತ್ತಿದೆ. ಈ ಕ್ಷೇತ್ರದಲ್ಲಿರುವ ಸಾಫ್ಟ್‌ಬ್ಯಾಂಕ್ ಸಮೂಹದ ಬೆಂಬಲಿತ ಬ್ಲಿಂಕಿಟ್, ಗೂಗಲ್ ಬೆಂಬಲಿತ ಡಂಜ಼ೋ ಮತ್ತು ನಾಸ್ಪರ್ಸ್ ನಿಯಮಿತ ಬೆಂಬಲಿತ ಸ್ವಿಗ್ಗಿ ಹಾಗೂ ಅಮೇಜ಼ಾನ್ ಮತ್ತು ವಾಲ್‌ಮಾರ್ಟ್ ಬೆಂಬಲಿತ ಫ್ಲಿಪ್‌ಕಾರ್ಟ್‌ಗಳೊಂದಿಗೆ ’Zepto’ ದಿನಸಿ ಡೆಲಿವರಿ ಕ್ಷೇತ್ರದಲ್ಲಿ ಪೈಪೋಟಿ ನಡೆಸಲಿದೆ.
’Zepto’ದಲ್ಲಿ 100ರಷ್ಟು ಡಾರ್ಕ್‌ಸ್ಟೋರ್‌ಗಳಿದ್ದು, ತಂತ್ರಜ್ಞಾನದ ಆಧಾರದಿಂದ ಆರ್ಡರ್‌ಗಳನ್ನು ಡೆಲಿವರಿ ಮಾಡಲು ಯಾವ ಲೊಕೇಶನ್‌ನಲ್ಲಿರುವ ಅಂಗಡಿಗಳು ಸೂಕ್ತವೆಂದು ನಿರ್ಧರಿಸಿ, ಮ್ಯಾಪಿಂಗ್ ಅನ್ನೂ ಮಾಡಿ ಮುಗಿಸಿ, ಸಂಚಾರ ದಟ್ಟಣೆ ಕಡಿಮೆ ಇರುವ ಮಾರ್ಗಗಳನ್ನು ಹುಡುಕುತ್ತದೆ. ತಾಜಾ ಉತ್ಪನ್ನಗಳು, ಅಡುಗೆ ಪದಾರ್ಥಗಳು, ಕುರುಕಲು ತಿಂಡಿಗಳು ಮತ್ತು ಪೇಯಗಳು, ವೈಯಕ್ತಿಕ ಆರೈಕೆ ಉತ್ಪನ್ನಗಳ ಮತ್ತು ಮನೆ ಸ್ವಚ್ಛಗೊಳಿಸುವ ಪದಾರ್ಥಗಳನ್ನು ’Zepto’ ಡೆಲಿವರಿ ಮಾಡುತ್ತಿದೆ.