alex Certify ಮಧ್ಯಪ್ರದೇಶ: 11 ವರ್ಷಗಳಲ್ಲಿ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ 41 ಲಕ್ಷದಷ್ಟು ಕುಸಿತ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಧ್ಯಪ್ರದೇಶ: 11 ವರ್ಷಗಳಲ್ಲಿ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ 41 ಲಕ್ಷದಷ್ಟು ಕುಸಿತ

Madhya Pradesh: Govt schools lose over 31 lakh students in 11 years as enrollment in classes 1-8 falls - Cities News

ಸರ್ಕಾರೀ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಸಂಖ್ಯೆ ಕುಸಿಯುತ್ತಾ ಬರುತ್ತಿರುವುದು ನಮ್ಮಲ್ಲಿ ಮಾತ್ರವಲ್ಲದೇ ದೂರದ ಮಧ್ಯ ಪ್ರದೇಶದಲ್ಲೂ ಆಗುತ್ತಿದೆ.

ಕಳೆದ 11 ವರ್ಷಗಳ ಅವಧಿಯಲ್ಲಿ ಸರ್ಕಾರಿ ಶಾಲೆಗಳಲ್ಲಿನ ಮಕ್ಕಳ ಸಂಖ್ಯೆಯಲ್ಲಿ 41 ಲಕ್ಷದಷ್ಟು ಇಳಿಕೆಯಾಗಿದೆ ಎಂದು ರಾಜ್ಯದ ಶಿಕ್ಷಣ ಸಚಿವ ಇಂದರ್‌ ಸಿಂಗ್ ಪರ್ಮಾರ್‌ ತಿಳಿಸಿದ್ದಾರೆ. 2010-11ಕ್ಕೂ 2020-21ಕ್ಕೂ, ಸರ್ಕಾರಿ ಶಾಲೆಗಳಲ್ಲಿ 1-8ನೇ ತರಗತಿಯಲ್ಲಿ ಓದುತ್ತಿರುವ ಮಕ್ಕಳ ಸಂಖ್ಯೆಗಳ ಪಾಡು ಏನಾಗಿದೆ ಎಂದು ಶಾಸಕ ಪ್ರವೀಣ್ ಪಾಠಕ್ ಕೇಳಿದ ಪ್ರಶ್ನೆಗೆ ಇಂದರ್‌ ಸಿಂಗ್ ಸದನದಲ್ಲಿ ಈ ಉತ್ತರ ಕೊಟ್ಟಿದ್ದಾರೆ.

2010-11ರಲ್ಲಿ ಸರ್ಕಾರಿ ಶಾಲೆಗಳಲ್ಲಿ 1-8ನೇ ತರಗತಿಯಲ್ಲಿ ಒಟ್ಟಾರೆ 1.05 ಕೋಟಿ ವಿದ್ಯಾರ್ಥಿಗಳಿದ್ದರೆ, ಇದೇ ಸಂಖ್ಯೆಯು 2020-21ರಲ್ಲಿ 64.3 ಲಕ್ಷಕ್ಕೆ ಇಳಿದಿದೆ ಎಂದು ಪರ್ಮಾ‌ರ್‌ ತಿಳಿಸಿದ್ದಾರೆ.

BREAKING NEWS: ಚಿಕ್ಕಬಳ್ಳಾಪುರ ಜಿಲ್ಲೆಯ ಹಲವೆಡೆ ಲಘು ಭೂಕಂಪ

ಫ್ರೀ ಪ್ರೆಸ್ ಜರ್ನಲ್‌ ವರದಿಯೊಂದರ ಪ್ರಕಾರ, ಉಚಿತ ಪಠ್ಯ ಪುಸ್ತಕಗಳು ಮತ್ತು ಸಮವಸ್ತ್ರಗಳ ವಿತರಣೆಗೆ ಶಾಲೆಗಳಿಗೆ ನೀಡುತ್ತಿದ್ದ ದುಡ್ಡು ವಿದ್ಯಾರ್ಥಿಗಳ ಸಂಖ್ಯೆಯಂತೆಯೇ ಕಡಿಮೆಯಾಗಿದೆ. ಆದರೆ, ಇದೇ ಅವಧಿಯಲ್ಲಿ ಮಧ್ಯಾಹ್ನದ ಬಿಸಿಯೂಟಕ್ಕೆ ಕೊಡುತ್ತಿದ್ದ ಮೊತ್ತ ಹೆಚ್ಚಾಗಿದೆ.

2010-11ರಲ್ಲಿ 399.12 ಕೋಟಿ ರೂ.ಗಳನ್ನು ಸಮವಸ್ತ್ರಗಳ ವಿತರಣೆಗೆ ಖರ್ಚು ಮಾಡಿದ್ದರೆ, ಇದೇ ಮೊತ್ತವು 2020-21ರಲ್ಲಿ 324.08 ಕೋಟಿ ರೂಪಾಯಿಗೆ ಇಳಿದಿದೆ. 2010-11ರಲ್ಲಿ ಪುಸ್ತಕಗಳ ವಿತರಣೆಗೆಂದು 160.02 ಕೋಟಿ ರೂಪಾಯಿ ನೀಡಿದ್ದರೆ, 2020-21ರಲ್ಲಿ 154.36 ಕೋಟಿ ರೂ.ಗಳನ್ನು ನೀಡಲಾಗಿದೆ.

2010-11ರಲ್ಲಿ ಮಧ್ಯಾಹ್ನದ ಬಿಸಿಯೂಟಕ್ಕೆ 916.06 ಕೋಟಿ ರೂ.ಗಳನ್ನು ವ್ಯಯಿಸಿದ್ದರೆ, 2020-21ರಲ್ಲಿ ಇದೇ ಮೊತ್ತವು 1,617.90 ಕೋಟಿ ರೂ.ಗಳಿಗೆ ಏರಿಕೆಯಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...