alex Certify ಕೋವಿಡ್ ಲಸಿಕೆ ಸ್ಟೇಟಸ್ ತೋರಿಸುತ್ತೆ ಚರ್ಮದಡಿ ಅಳವಡಿಸಿಕೊಳ್ಳಬಹುದಾದ ಅಕ್ಕಿ ಕಾಳಿನ ಗಾತ್ರದ ಈ ಮೈಕ್ರೋಚಿಪ್‌ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೋವಿಡ್ ಲಸಿಕೆ ಸ್ಟೇಟಸ್ ತೋರಿಸುತ್ತೆ ಚರ್ಮದಡಿ ಅಳವಡಿಸಿಕೊಳ್ಳಬಹುದಾದ ಅಕ್ಕಿ ಕಾಳಿನ ಗಾತ್ರದ ಈ ಮೈಕ್ರೋಚಿಪ್‌

ಕೋವಿಡ್ ಲಸಿಕೆಯ ಸ್ಟೇಟಸ್‌ ಅನ್ನು ಯಾವುದೇ ಪತ್ರ ಅಥವಾ ಡಿಜಿಟಲ್ ದಾಖಲೆಗಳಿಲ್ಲದೇ ನಿಮ್ಮೊಟ್ಟಿಗೆ ಹೋದಲ್ಲೆಲ್ಲಾ ಕೊಂಡೊಯ್ಯಲು ಹೊಸ ವಿಧವೊಂದನ್ನು ಸ್ಟಾಕ್‌ಹೋಂನ ಸ್ಟಾರ್ಟ್‌ಅಪ್ ಒಂದು ಅಭಿವೃದ್ಧಿಪಡಿಸಿದೆ.

ಅಕ್ಕಿ-ಕಾಳಿನ ಗಾತ್ರದ ಮೈಕ್ರೋಚಿಪ್ ಒಂದನ್ನು ನಿಮ್ಮ ಚರ್ಮದ ಅಡಿ ಇಟ್ಟು, ಅದರಲ್ಲಿ ಕೋವಿಡ್ ಲಸಿಕೆಯ ಮಾಹಿತಿಗಳನ್ನು ಸಂಗ್ರಹಿಸಿ ಇಡಬಹುದು. ಎಪಿಸೆಂಟರ್‌ ಹೆಸರಿನ ಕಂಪನಿ ಮೈಕ್ರೋಚಿಪ್ ಅಭಿವೃದ್ಧಿಪಡಿಸಿದ್ದು, ಇದನ್ನು ಎಲ್ಲಕ್ಕಿಂತ ಮೊದಲು ಖುದ್ದು ಕಂಪನಿಯ ಉದ್ಯೋಗಿಗಳೇ ಅಳವಡಿಸಿಕೊಂಡಿದ್ದಾರೆ.

BREAKING NEWS: ಚಿಕ್ಕಬಳ್ಳಾಪುರ ಜಿಲ್ಲೆಯ ಹಲವೆಡೆ ಲಘು ಭೂಕಂಪ

ಈ ಇಂಪ್ಲಾಂಟ್‌ ಅನ್ನು ಎನ್‌ಎಫ್‌ಸಿ ಸಜ್ಜಿತ, ಸ್ಮಾರ್ಟ್‌ಫೋನ್‌ನಂಥ ಡಿವೈಸ್‌ಗಳಿಂದ ಪತ್ತೆ ಮಾಡಬಹುದಾಗಿದೆ. ಎನ್‌ಎಫ್‌ಸಿ ತಂತ್ರಜ್ಞಾನವನ್ನು ಇಂದಿನ ದಿನಗಳಲ್ಲಿ ಪೇಮೆಂಟ್ಸ್‌ ಮತ್ತು ಕೀಲಿರಹಿತ ಪ್ರವೇಶ ವ್ಯವಸ್ಥೆಗಳಲ್ಲಿ ಬಳಸಲಾಗುತ್ತಿದೆ.

ಈ ತಂತ್ರಜ್ಞಾನದಿಂದ ಜನರಿಗೆ ತಮ್ಮ ಕೋವಿಡ್ ಲಸಿಕೆಯ ಸ್ಟೇಟಸ್‌ ಅನ್ನು ಸಾರ್ವಜನಿಕ ಸ್ಥಳಗಳಲ್ಲಿ ತೋರಲು ಅನುಕೂಲವಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...