ಸಿಬ್ಬಂದಿ ನೇಮಕಾತಿ ಆಯೋಗವು ಬರೋಬ್ಬರಿ 25271 ಕಾನ್ಸ್ಟೇಬಲ್ ಹಾಗೂ ರೈಫಲ್ಮ್ಯಾನ್ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದು ಈ ಹುದ್ದೆಗೆ ಅರ್ಜಿ ಸಲ್ಲಿಸಲು ನಾಳೆಯೇ ಕೊನೆಯ ದಿನಾಂಕವಾಗಿದೆ.
ಅಧಿಸೂಚನೆಯ ಪ್ರಕಾರ ಬಿಎಸ್ಎಫ್, ಸಿಐಎಸ್ಎಫ್, ಐಟಿಬಿಪಿ, ಎಸ್ಎಸ್ಬಿ, ಎಸ್ಎಸ್ಎಫ್ ಇಲಾಖೆಯಲ್ಲಿ ಕಾನ್ಸ್ಟೇಬಲ್ ಹುದ್ದೆ ಹಾಗೂ ಆಸ್ಸಾಂ ರೈಫಲ್ಸ್ನಲ್ಲಿ ರೈಫಲ್ ಮ್ಯಾನ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಖಾಲಿ ಇರುವ ಹುದ್ದೆಗಳ ವಿವರ
ಬಿಎಸ್ಎಫ್ 7545
ಸಿಎಸ್ಎಫ್ 8464
ಎಸ್ಎಸ್ಬಿ 3806
ಐಟಿಬಿಪಿ 1431
ಐಟಿಬಿಪಿ 3785
ಎಸ್ಎಸ್ಎಫ್ 240
ಒಟ್ಟು 25271
ಅರ್ಹತಾ ಮಾನದಂಡ :
ಅಭ್ಯರ್ಥಿಗಳು ಮಾನ್ಯತೆ ಪಡೆದ ಶಿಕ್ಷಣ ಇಲಾಖೆಯಲ್ಲಿ 10ನೇ ತರಗತಿ ಉತ್ತೀರ್ಣರಾಗಿರಬೇಕು. ಎನ್ಸಿಸಿ ಪ್ರಮಾಣ ಪತ್ರ ಹೊಂದಿರುವವರಿಗೆ ಬೋನಸ್ ಅಂಕ ಸಿಗಲಿದೆ. ಎನ್ಸಿಸಿ ‘ಸಿ’ ಪ್ರಮಾಣ ಪತ್ರ ಹೊಂದಿರುವವರಿಗೆ 5 ಹೆಚ್ಚುವರಿ ಅಂಕ ಸಿಗಲಿದೆ. ಎನ್ಸಿಸಿ ಬಿ ಹಾಗೂ ಸಿ ಪ್ರಮಾಣ ಪತ್ರ ಹೊಂದಿರುವವರು ಗರಿಷ್ಟ ಅಂಕಗಳ ಮೂರು ಹಾಗೂ 2 ಪ್ರತಿಶತ ಪಡೆಯಲಿದ್ದಾರೆ.
ಶೈಕ್ಷಣಿಕ ಅರ್ಹತೆ ಹೊರತುಪಡಿಸಿ ಅಭ್ಯರ್ಥಿಗಳಿಗೆ ವಯಸ್ಸಿನ ಮಿತಿ ಕೂಡ ಇದೆ. ಆಗಸ್ಟ್ 1ನೇ ತಾರೀಖಿಗೆ ಅನ್ವಯವಾಗುವಂತೆ ಅಭ್ಯರ್ಥಿಗಳು 18 – 23 ವರ್ಷ ಪ್ರಾಯದವರಾಗಿರಬೇಕು. ಅಂದರೆ 1998ರ ಆಗಸ್ಟ್ 2ಕ್ಕಿಂತ ಮೊದಲು ಹಾಗೂ 2003ರ ಆಗಸ್ಟ್ 1ರ ಬಳಿಕ ಜನಿಸಿರಬಾರದು.
ಕೆಲವೊಂದು ವರ್ಗದವರಿಗೆ ಗರಿಷ್ಟ ವಯಸ್ಸಿನ ಮಿತಿಯಲ್ಲಿ ಸಡಿಲಿಕೆ ನೀಡಲಾಗಿದೆ.
ಆಯ್ಕೆ ವಿಧಾನ
ಕಂಪ್ಯೂಟರ್ ಆಧಾರಿತ ಪರೀಕ್ಷೆ
ದೈಹಿಕ ಸಾಮರ್ಥ್ಯ ಪರೀಕ್ಷೆ
ವೈದ್ಯಕೀಯ ಪರೀಕ್ಷೆ
ದಾಖಲೆ ಪರಿಶೀಲನೆ.
ಅರ್ಜಿ ಸಲ್ಲಿಸುವ ಮಾರ್ಗ
ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಎಸ್ಎಸ್ಸಿ ಅಧಿಕೃತ ವೆಬ್ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಈ ಹುದ್ದೆಗೆ ಅರ್ಜಿ ಸಲ್ಲಿಸಲು ಆಗಸ್ಟ್ 31 ಕೊನೆಯ ದಿನಾಂಕವಾಗಿದೆ.
ಅಭ್ಯರ್ಥಿಗಳಿಗೆ 100 ರೂಪಾಯಿ ಅರ್ಜಿ ಶುಲ್ಕ ನಿಗದಿಯಾಗಿದೆ. ಎಸ್ಸಿ, ಎಸ್ಟಿ, ಮಾಜಿ ಯೋಧರಿಗೆ ಶುಲ್ಕದಿಂದ ವಿನಾಯ್ತಿ ನೀಡಲಾಗಿದೆ.