alex Certify ʼಪಠಾಣ್ʼ​ ಹಾಡಿಗೆ ಕೊಹ್ಲಿ ಸ್ಟೆಪ್​: ಸೂಪರ್​ ಎಂದ ಶಾರುಖ್​ ಖಾನ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಪಠಾಣ್ʼ​ ಹಾಡಿಗೆ ಕೊಹ್ಲಿ ಸ್ಟೆಪ್​: ಸೂಪರ್​ ಎಂದ ಶಾರುಖ್​ ಖಾನ್​

ಶಾರುಖ್​ ಖಾನ್​ ನಟನೆಯ ʼಪಠಾಣ್ʼ​ ಚಿತ್ರ ಭರ್ಜರಿ ಯಶಸ್ಸು ಕಾಣುತ್ತಿರುವ ಬೆನ್ನಲ್ಲೇ ಹಲವರು ಇದರ ಹಾಡಿಗೆ ನೃತ್ಯ ಮಾಡುವ ವಿಡಿಯೋಗಳು ವೈರಲ್ ಆಗುತ್ತಿವೆ. ಈ ಹುಚ್ಚು ಕ್ರಿಕೆಟ್​ ತಾರೆಯರನ್ನೂ ಬಿಟ್ಟಿಲ್ಲ. ಕ್ರಿಕೆಟಿಗರಾದ ವಿರಾಟ್ ಕೊಹ್ಲಿ ಮತ್ತು ರವೀಂದ್ರ ಜಡೇಜಾ ಮೈದಾನದಲ್ಲಿ ‘ಜೂಮ್ ಜೋ ಪಠಾನ್’ ಗೆ ನೃತ್ಯ ಮಾಡಿದ್ದು ಅದೀಗ ವೈರಲ್​ ಆಗಿದೆ.

ಇದರ ವಿಡಿಯೋವನ್ನು ಅವರ ಅಭಿಮಾನಿಯೊಬ್ಬರು ಹಂಚಿಕೊಂಡಿದ್ದಾರೆ. ನಂತರ ಅದನ್ನು ಶಾರುಖ್​ ಖಾನ್​ ಅವರಿಗೆ ಟ್ಯಾಗ್​ ಮಾಡಿ ಈ ಬಗ್ಗೆ ಒಂದೆರಡು ಮಾತನಾಡಿ ಎಂದಿದ್ದಾರೆ.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ನಟ ಶಾರುಖ್​ ಖಾನ್​, “ಅವರು ನನಗಿಂತ ಉತ್ತಮವಾಗಿ ನೃತ್ಯ ಮಾಡಿದ್ದಾರೆ. ನೃತ್ಯ ಮಾಡುವುದನ್ನು ವಿರಾಟ್ ಮತ್ತು ಜಡೇಜಾ ಅವರಿಂದ ನಾನು ಕಲಿಯಬೇಕು” ಎಂದಿದ್ದಾರೆ. ಇದನ್ನು ಓದಿ ಶಾರುಖ್​ ಅಭಿಮಾನಿಗಳು ಶಾರುಖ್​ ಕುರಿತು ಹಾಡಿ ಹೊಗಳುತ್ತಿದ್ದಾರೆ.

ಅಷ್ಟಕ್ಕೂ ಕೊಹ್ಲಿ ಮತ್ತು ಜಡೇಜಾ ಈ ನೃತ್ಯಕ್ಕೆ ಹೆಜ್ಜೆ ಹಾಕಿದ್ದು ನಾಗ್ಪುರದಲ್ಲಿ ಆಸ್ಟ್ರೇಲಿಯಾ ವಿರುದ್ಧದ ಭಾರತದ ಮೊದಲ ಟೆಸ್ಟ್ ಪಂದ್ಯದ ಸಂದರ್ಭದಲ್ಲಿ. ಮೊದಲಿಗೆ ಕೊಹ್ಲಿ ಪಠಾಣ್‌ ಚಿತ್ರದ ಹಾಡಿಗೆ ನರ್ತಿಸಿದ್ದರು. ನಂತರ ರವೀಂದ್ರ ಜಡೇಜಾ ಅವರನ್ನು ಸೇರಿಕೊಂಡು ತಾವೂ ಹೆಜ್ಜೆ ಹಾಕಿದ್ದರು.

https://twitter.com/Asifsrksoldier/status/1625399716195319808?ref_src=twsrc%5Etfw%7Ctwcamp%5Etweetembed%7Ctwterm%5E1625403978770169856%7Ctwgr%5Ef9b7552e059953ea2ce740d764d404c3e1c95f61%7Ctwcon%5Es3_&ref_url=https%3A%2F%2Fwww.news18.com%2Fbuzz%2Fsrk-approves-virat-kohlis-recreation-of-pathaan-step-during-australia-test-7078603.html

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...