ಉಗ್ರರು ಹಿಂದೂ ದೇವಾಲಯಗಳನ್ನು ಟಾರ್ಗೆಟ್ ಮಾಡಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಉಗ್ರರ ಸಂಚಿಗೆ ಮಂತ್ರಾಲಯ ಮಠದ ಸುಬುಧೇಂದ್ರತೀರ್ಥ ಸ್ವಾಮೀಜಿ ಖಂಡಿಸಿದ್ದಾರೆ.
ನಮ್ಮ ರಾಜ್ಯ ಬಹಳ ಶಾಂತಿ ಪ್ರಿಯವಾದ ನಾಡು. ಅವರವರ ಸಂಪ್ರದಾಯ ಆಚಾರ ವಿಚಾರ ಪಾಲನೆ ಮಾಡುತ್ತಾರೆ. ಹಿಂದೂ ದೇವಾಲಯಗಳ ಮೇಲೆ ಉಗ್ರರ ದಾಳಿಯನ್ನು ಖಂಡಿಸುತ್ತೇನೆ. ರಾಜ್ಯ ಸರ್ಕಾರ ಉಗ್ರರ ಚಟುವಟಿಕೆ ನಿಗ್ರಹಿಸಬೇಕೆಂದು ಒತ್ತಾಯಿಸಿದ್ದಾರೆ.
ಕೋಮು ಗಲಭೆಯಿಂದ ಸೌಹಾರ್ದತೆ ನಾಶವಾಗುತ್ತಿದೆ. ಶಾಂತಿ ಸೌಹಾರ್ದತೆಯಿಂದ ಬಾಳಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ ಅವರು, ಹಿಂದೂ ದೇವಾಲಯಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದ್ದಾರೆ.