alex Certify ಸುರುಳಿಸುರುಳಿಯಾಗಿ ತಿರುಗುವ ಕಟ್ಟಡ: ವಿಡಿಯೋ ನೋಡಿದರೆ ತಲೆ ತಿರುಗೋದು ಗ್ಯಾರಂಟಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸುರುಳಿಸುರುಳಿಯಾಗಿ ತಿರುಗುವ ಕಟ್ಟಡ: ವಿಡಿಯೋ ನೋಡಿದರೆ ತಲೆ ತಿರುಗೋದು ಗ್ಯಾರಂಟಿ

ಇಟಲಿ: ಸಿಲಿಂಡರಾಕಾರದ ಕಟ್ಟಡವೊಂದು ಸುರುಳಿಯಾಕಾರದಲ್ಲಿ ತಿರುಗುತ್ತಿದ್ದು ಜನರು ಕೆಳಗೆ ಇಳಿಯುತ್ತಿದ್ದಂತೆ ಭಾಸವಾಗುವ ಕುತೂಹಲದ ಲಿಫ್ಟ್​ ಒಂದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ನೋಡುಗರನ್ನು ತಿರುಗುತ್ತಿರುವಂತೆ ಮಾಡುತ್ತಿದೆ. ಆಪ್ಟಿಕಲ್ ಭ್ರಮೆಯ ಈ ಕಟ್ಟಡವು ತಿರುಗಿದಂತೆ ಕಾಣಿಸುತ್ತಿದ್ದು, ನೋಡುಗರನ್ನು ಅಚ್ಚರಿಗೊಳಿಸುತ್ತದೆ.

ಟ್ವಿಟ್ಟರ್ ಹ್ಯಾಂಡಲ್ ಟೆಕ್ ಬುರ್ರಿಟೋದಿಂದ ಶೇರ್​ ಮಾಡಲಾದ ಈ ವಿಡಿಯೋದಲ್ಲಿ ಜನರು ಒಂದೇ ದಿಕ್ಕಿನಲ್ಲಿ ಚಲಿಸುತ್ತಿರುವುದನ್ನು ನೋಡಬಹುದು. ಆದರೆ ಆಪ್ಟಿಕಲ್ ಭ್ರಮೆಯಿಂದಾಗಿ ಕಟ್ಟಡವು ತನ್ನಿಂದ ತಾನೇ ತಿರುಗಿದಂತೆ ಕಾಣಿಸುತ್ತದೆ.

ಇಟಲಿಯ ಮಿಲನ್‌ನಲ್ಲಿರುವ ಸ್ಯಾನ್ ಸಿರೊ ಸ್ಟೇಡಿಯಂನ ದೃಶ್ಯ ಇದಾಗಿದೆ. ಈ ವಿಡಿಯೋ ಶೇರ್​ ಮಾಡಿಕೊಂಡ ಎರಡೇ ದಿನಗಳಲ್ಲಿ 9 ಲಕ್ಷಕ್ಕೂ ಅಧಿಕ ವ್ಯೂಸ್​ ಕಂಡಿದೆ. ಅಬ್ಬಾ! ಇದನ್ನು ವಿಡಿಯೋದಲ್ಲಿಯೇ ನೋಡಲು ಸಾಧ್ಯವಿಲ್ಲ, ತಲೆ ತಿರುಗುತ್ತದೆ, ಇನ್ನು ಲೈವ್​ ಆಗಿ ನೋಡಲು ಸಾಧ್ಯವೇ ಇಲ್ಲ ಎಂದು ಹಲವರು ಕಮೆಂಟ್​ ಮೂಲಕ ತಿಳಿಸುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...