alex Certify Watch Vide | ಹೆದ್ದಾರಿಯಲ್ಲಿ ವಿಚಿತ್ರ ಆಕೃತಿ ಸೆರೆ ಹಿಡಿದ ಟ್ರಕ್‌ ಡ್ಯಾಶ್‌ ಕ್ಯಾಮ್; ದೆವ್ವವಿರಬಹುದು ಎನ್ನುತ್ತಿದ್ದಾರೆ ಜನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Watch Vide | ಹೆದ್ದಾರಿಯಲ್ಲಿ ವಿಚಿತ್ರ ಆಕೃತಿ ಸೆರೆ ಹಿಡಿದ ಟ್ರಕ್‌ ಡ್ಯಾಶ್‌ ಕ್ಯಾಮ್; ದೆವ್ವವಿರಬಹುದು ಎನ್ನುತ್ತಿದ್ದಾರೆ ಜನ

ದೆವ್ವಗಳ ಇರುವಿಕೆಯ ಬಗ್ಗೆ ಪರ – ವಿರೋಧದ ಚರ್ಚೆಗಳಿಗೆ ಮತ್ತಷ್ಟು ಇಂಬು ನೀಡುವ ವಿಡಿಯೋವೊಂದು ಅಂತರ್ಜಾಲದಲ್ಲಿ ವೈರಲ್ ಆಗಿದೆ.

ಟ್ರಕ್ ಡ್ರೈವರ್‌‌ ಒಬ್ಬರ ಡ್ಯಾಶ್‌ಕ್ಯಾಮ್‌ನಲ್ಲಿ ಈ ವಿಡಿಯೋ ಸೆರೆಯಾಗಿದೆ. ಮಾರ್ಚ್ 11ರಂದು ಅರಿಜ಼ೋನಾದಲ್ಲಿ ಜರುಗಿದ ಈ ಘಟನೆಯಲ್ಲಿ ಚಾಲಕ ವಿಲಿಯಮ್‌ಗೆ ತಮ್ಮ ಕ್ಯಾಮೆರಾದಲ್ಲಿ ಸೆರೆಯಾದ ದೃಶ್ಯಾವಳಿಯಲ್ಲಿ ಬೆಳ್ಳನೆಯ ಆಕೃತಿಯೊಂದು ಗೋಚರಿಸಿದ್ದು, ಅದನ್ನು ಆತ ದೆವ್ವ ಎಂದೇ ಭಾವಿಸಿದ್ದಾನೆ.

ಬೆಳಗ್ಗಿನ ಜಾವ 2:30ರ ವೇಳೆಗೆ ಹೆದ್ದಾರಿಯೊಂದರ 200ನೇ ಮೈಲಿಯ ಮಾರ್ಕರ್‌ ಬಳಿ ಸಾಗುತ್ತಿದ್ದ ಸಂದರ್ಭದಲ್ಲಿ ವಿಲಿಯಮ್‌ ಕಣ್ಣಿಗೆ ಈ ದೃಶ್ಯ ಬಿದ್ದಿದೆ. ಅರಿಜ಼ೋನಾದ ಪೇಸನ್ ಹಾಗೂ ಫೀನಿಕ್ಸ್‌ಗಳ ನಡುವೆ ಈ ಜಾಗ ಬರುತ್ತದೆ. ಈ ಘಟನೆ ಜರುಗಿದ ವೇಳೆ ಅಕ್ಕಪಕ್ಕ ಯಾವ ಕಾರುಗಳೂ ಇರಲಿಲ್ಲ ಎನ್ನುತ್ತಾರೆ ವಿಲಿಯಮ್.

ಫಾಕ್ಸ್ ನ್ಯೂಸ್ ಸುದ್ದಿವಾಹಿನಿ ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಶೇರ್‌ ಮಾಡಿರುವ ಈ ಕ್ಲಿಪ್‌ ಭಾರೀ ವೈರಲ್‌ ಆಗಿದೆ. ವಿಡಿಯೋ ನೋಡಿದ ಅನೇಕ ವೀಕ್ಷಕರು ಸಹ ಶಾಕ್ ಆಗಿದ್ದು, ತಾವೂ ಸಹ ಬೆಚಿ ಬಿದ್ದಿರುವುದಾಗಿ ಕಾಮೆಂಟ್‌ ವಿಭಾಗದಲ್ಲಿ ಹೇಳಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...