alex Certify ವಿಡಿಯೋ ತೆಗೆಯಲು ಹೋಗಿ ಕೋತಿ ದಾಳಿಗೊಳಗಾದ ಯುವತಿ; ಆಘಾತಕಾರಿ ವಿಡಿಯೋ ವೈರಲ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಡಿಯೋ ತೆಗೆಯಲು ಹೋಗಿ ಕೋತಿ ದಾಳಿಗೊಳಗಾದ ಯುವತಿ; ಆಘಾತಕಾರಿ ವಿಡಿಯೋ ವೈರಲ್​

ಮೆಕ್ಸಿಕೊ: ಮೆಕ್ಸಿಕೋದ ಯುವತಿಯೊಬ್ಬಳು ಮೃಗಾಲಯದಲ್ಲಿ ಕೆಲವು ಕೋತಿಗಳ ವಿಡಿಯೋ ತೆಗೆಯಲು ಹೋಗಿ ಕೋತಿಯ ದಾಳಿಗೆ ಒಳಗಾದ ಆಘಾತಕಾರಿ ಘಟನೆ ದೃಶ್ಯ ವೈರಲ್​ ಆಗಿದೆ.

ಸ್ಪೈಡರ್​ ಜಾತಿಗೆ ಸೇರಿದ ಮಂಗಗಳನ್ನು ಕಂಡು ಸಂತೋಷಗೊಂಡ ಯುವತಿಯೊಬ್ಬಳು ಅದರ ವಿಡಿಯೋ ತೆಗೆಯಲು ಮುಂದಾಗಿದ್ದಾಗ ಈ ಅನಾಹುತ ಸಂಭವಿಸಿದೆ. ಪಂಜರದ ಒಳಗಿದ್ದ ಕೋತಿ ಪಂಜರದ ತುದಿಗೆ ಬಂದಿತ್ತು. ಆ ಸಂದರ್ಭದಲ್ಲಿ ಯುವತಿ ಅದರ ವಿಡಿಯೋ ಮಾಡಲು ಹೋಗಿದ್ದಾಳೆ.

ಆಕೆ ಸಮೀಪ ಹೋಗುತ್ತಿದ್ದಂತೆಯೇ, ಕೋತಿ ಅವಳ ಮೇಲೆ ದಾಳಿ ಮಾಡಿ ಕೂದಲನ್ನು ಎಳೆದಿದೆ. ಸುತ್ತಲಿನ ಜನರು ಅವಳನ್ನು ರಕ್ಷಿಸಲು ಪ್ರಯತ್ನಿಸಿದರೂ ಕೋತಿ ತನ್ನ ಪಟ್ಟು ಬಿಡಲಿಲ್ಲ. ನಂತರ ಹೇಗೋ ಹುಡುಗಿ ಅದರಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾಳೆ.

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ಶೇರ್​ ಆಗುತ್ತಿತ್ತು. ಕೋತಿಗಳ ಜತೆ ಎಚ್ಚರಿಕೆಯಿಂದ ಇರಿ ಎಂದು ನೆಟ್ಟಿಗರು ಹೇಳಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...