ರೆಸ್ಟೋರೆಂಟ್ ಗಳಲ್ಲಿ ಕೆಲಸ ಮಾಡುವುದೆಂದರೆ ಅದು ಸುಲಭದ ಕೆಲಸವಲ್ಲ. ಯಾಕೆಂದರೆ ಯಾವುದೇ ವಸ್ತುಗಳನ್ನು ಬೀಳಿಸದೆ, ಬಹಳ ನಾಜೂಕಾಗಿ ಎತ್ತಿಡಬೇಕು. ಆದರೆ, ನೀವು ಸ್ಪೈಡರ್ ಮ್ಯಾನ್‌ನಂತಹ ಶಕ್ತಿ ಹೊಂದಿದ್ದರೆ ಈ ಕೆಲಸ ನಿಮಗೆ ಬಹಳ ಸುಲಭವಾಗಬಹುದು. ಇದೀಗ ವೈರಲ್ ಆಗಿರೋ ವಿಡಿಯೋ ನಿಮಗೆ ಅಚ್ಚರಿ ತರಿಸಬಲ್ಲದು.
ಇದೀಗ ಟ್ವಿಟ್ಟರ್‌ನಲ್ಲಿ ಹಂಚಿಕೊಂಡ ಸಿಸಿ ಟಿವಿ ದೃಶ್ಯಾವಳಿಯಲ್ಲಿ ವ್ಯಕ್ತಿಯೊಬ್ಬರು ಪಿಜ್ಜಾ ಬಾಕ್ಸ್‌ಗಳ ದೊಡ್ಡ ಸ್ಟಾಕ್ ಅನ್ನು ಹೊತ್ತೊಯ್ಯುತ್ತಿರುವುದನ್ನು ತೋರಿಸಿದೆ. ಅವರು ಪಿಜ್ಜಾ ಬಾಕ್ಸ್‌ಗಳ ರಾಶಿಯನ್ನು ಹೊತ್ತುಕೊಂಡು ಕೌಂಟರ್‌ಗೆ ಸಮೀಪಿಸುತ್ತಿದ್ದಂತೆ, ಮೇಲ್ಭಾಗದ ಬಾಕ್ಸ್ ಕೆಳಗೆ ಬಿದ್ದಿದೆ. ಅದು ನೆಲಕ್ಕೆ ಬಿದ್ದು ತಿರುಗಿದಂತೆ ತೋರುತ್ತದೆ. ಅದನ್ನು ಹೆಕ್ಕದೆಯೇ ಸಿಬ್ಬಂದಿ ಬಾಕ್ಸ್ ಅನ್ನು ಉಳಿದ ಬಾಕ್ಸ್ ಗಳ ಮೇಲೆ ಇತ್ತಿಡುತ್ತಾರೆ. ಅಯ್ಯೋ….. ಇದು ಹೇಗೆ ಸಾಧ್ಯ ಅಂತಾ ಯೋಚಿಸ್ತಿದ್ದೀರಾ….. ಹಾಗಿದ್ರೆ ವಿಡಿಯೋವನ್ನು ಸರಿಯಾಗಿ ಗಮನಿಸಿ.
ಅಂದಹಾಗೆ, ಪಿಜ್ಜಾ ಬಾಕ್ಸ್ ಗಳನ್ನು ಎಷ್ಟೇ ಜಾಗರೂಕತೆಯಿಂದ ಆತ ತರುತ್ತಿದ್ರೂ ಜಾರಿ ಬಿದ್ದಿದೆ. ಹಾಗಂತ ನೆಲಕ್ಕೆ ಬಿದ್ದಿಲ್ಲ. ಸಿಬ್ಬಂದಿಯ ಸಮಯೋಚಿತ ಕಾರ್ಯದಿಂದ ಬಾಕ್ಸ್ ನೇರವಾಗಿ ಆತನ ಕೈಸೇರಿದೆ. ನಂತರ ಆತ ಬಾಕ್ಸ್ ಅನ್ನು ಉಳಿದ ಬಾಕ್ಸ್ ಗಳ ಮೇಲೆ ಇಟ್ಟು ಅಲ್ಲಿಂದ ತೆರಳುತ್ತಾನೆ.
ಸದ್ಯ, ಈ ವಿಡಿಯೋವನ್ನು 2.5 ಮಿಲಿಯನ್ ಟ್ವಿಟ್ಟರ್ ಬಳಕೆದಾರರು ವೀಕ್ಷಿಸಿದ್ದಾರೆ. ತನ್ನ ತ್ವರಿತ ಪ್ರತಿಕ್ರಿಯೆಯಿಂದ ವ್ಯಕ್ತಿಯು ನೆಟ್ಟಿಗರ ಮನಗೆದ್ದಿದ್ದಾನೆ. ಕೆಳಗೆ ಬೀಳುತ್ತಿದ್ದ ಬಾಕ್ಸ್ ಅನ್ನು ಹಿಡಿದುಕೊಂಡ ಆತ ತನ್ನ ಕೈಗಳನ್ನೇ ನೋಡಿದ್ದಾನೆ. ಬಳಿಕ ಸ್ಪೈಡರ್ ಮ್ಯಾನ್ ರೀತಿ ಕೈ ಸನ್ನೆ ಮಾಡಿದ್ದಾನೆ. ಸಿಸಿಟಿವಿ ದೃಶ್ಯಾವಳಿಯು ಕೆಲವರಿಗೆ ಟೋಬೆ ಮ್ಯಾಗೈರ್ ನಟಿಸಿದ ಸ್ಪೈಡರ್-ಮ್ಯಾನ್‌ನ ದೃಶ್ಯವನ್ನು ನೆನಪಿಸಿದೆ. ಆ ಚಿತ್ರದಲ್ಲಿ ಆತ ಆಹಾರದ ಟ್ರೇ ಅನ್ನು ಹಿಡಿಯುತ್ತಾನೆ.
https://twitter.com/TheFigen/status/1549350005235908608?ref_src=twsrc%5Etfw%7Ctwcamp%5Etweetembed%7Ctwterm%5E1550320111189639168%7Ctwgr%5E%7Ctwcon%5Es2_&ref_url=https%3A%2F%2Fwww.news18.com%2Fnews%2Fbuzz%2Fspider-man-is-that-you-restaurant-staffer-saves-pizza-box-with-cool-reflex-5604019.html