ತನ್ನ ಫ್ಲೈಟ್ಗಳ ಒಳಗೆ ಇರುವ ಮನರಂಜನಾ ವ್ಯವಸ್ಥೆ ಮೂಲಕ ಆಗಸದಲ್ಲಿರುವಾಗಲೇ ಕ್ಯಾಬ್ ಬುಕಿಂಗ್ ಮಾಡುವ ವ್ಯವಸ್ಥೆಯನ್ನು ಸ್ಪೈಸ್ಜೆಟ್ ತನ್ನ ಪ್ರಯಾಣಿಕರಿಗೆ ಕೊಡಮಾಡಿದೆ.
”ಕ್ಯಾಬ್ ಬುಕಿಂಗ್ಗಳು ಸದಾ ರದ್ದಾಗಿ ನಿಮಗೆ ಬೋರಾಗಿದೆಯೇ? ನಮ್ಮಲ್ಲಿ ಅದಕ್ಕೆ ಪರಿಹಾರವಿದೆ. ಆಗಸದಲ್ಲೇ ಕ್ಯಾಬ್ ಬುಕಿಂಗ್ ಮಾಡುವ ಮೂಲಕ ನಿಮ್ಮ ಆಗಮನವಾದ ಕೂಡಲೇ ಕ್ಯಾಬ್ ರೆಡಿ ಇರುವಂತೆ ಮಾಡಿಕೊಳ್ಳಿ. http://spicejet.comನಲ್ಲಿ ಬುಕ್ ಮಾಡಿ ಅಥವಾ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಳ್ಳಿ,” ಎಂದು ಸ್ಪೈಸ್ ಜೆಟ್ ಟ್ವೀಟ್ ಮಾಡಿದೆ.
ಸೆಲ್ಫೀ ಹುಚ್ಚಿಗೆ ಹಾರಿ ಹೋಯ್ತು ಯುವತಿ ಪ್ರಾಣ
ಹೀಗೆ ಬುಕ್ ಮಾಡುವ ಮೂಲಕ ಕ್ಯಾಬ್ ಸೇವೆಯ ಶುಲ್ಕದಲ್ಲಿ 10%ವರೆಗೂ ರಿಯಾಯಿತಿಯನ್ನು ಪ್ರಯಾಣಿಕರು ಪಡೆಯಬಹುದಾಗಿದೆ. ಯಾವುದೇ ಕಾರಣದಿಂದಲೂ ಪ್ರಯಾಣಿಕ ಕ್ಯಾಬ್ಗೆ ಹತ್ತದೇ ಇದ್ದಲ್ಲಿ ರದ್ದತಿ ಶುಲ್ಕ ವಿಧಿಸಲಾಗುವುದಿಲ್ಲ.
ಸದ್ಯದ ಮಟ್ಟಿಗೆ ಈ ಸೇವೆಯನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ ಮಾತ್ರವೇ ನೀಡುತ್ತಿರುವ ಸ್ಪೈಸ್ ಜೆಟ್ ಮುಂದಿನ ದಿನಗಳಲ್ಲಿ ಮುಂಬಯಿ, ಚೆನ್ನೈ, ಬೆಂಗಳೂರು, ಪುಣೆ, ಹೈದರಾಬಾದ್, ಕೋಲ್ಕತ್ತಾ, ಗೋವಾ ಹಾಗೂ ಅಹಮದಾಬಾದ್ಗಳಿಗೂ ವಿಸ್ತರಿಸಲಿದೆ.
ʼನೋಕಿಯಾʼ ಪ್ರಿಯರಿಗೆ ಇಲ್ಲಿದೆ ಒಂದು ಗುಡ್ ನ್ಯೂಸ್
ಫ್ಲೈಟ್ನಲ್ಲಿರುವ ವೇಳೆ ಸ್ಪೈಸ್ಸ್ಕ್ರೀನ್ ಅಪ್ಲಿಕೇಶನ್ ಮೂಲಕ ತಮ್ಮ ಮೊಬೈಲ್ಗೆ ಸಂಪರ್ಕಿಸಿಕೊಂಡು, ಕ್ಯಾಬ್ ಸೆಕ್ಷನ್ಗೆ ಭೇಟಿ ನೀಡಿ ಕ್ಯಾಬ್ ಬುಕಿಂಗ್ ಮಾಡಬಹುದಾಗಿದೆ. ಬುಕಿಂಗ್ ಪುಟದಲ್ಲಿ ಕ್ಯಾಬ್ ಸೇವೆಯ ಶುಲ್ಕಗಳನ್ನು ನೋಡಬಹುದಾಗಿದೆ.
ಕ್ಯಾಬ್ ಬುಕ್ ಮಾಡಿದ ಕೂಡಲೇ ಪ್ರಯಾಣಿಕರ ಮೊಬೈಲ್ಗೆ ಎಸ್ಎಂಎಸ್, ವಾಟ್ಸಾಪ್, ಸ್ವಯಂ ಚಾಲಿತ ಒಳಬರುವ ಕರೆ ಖಾತ್ರಿ ವ್ಯವಸ್ಥೆ ಮೂಲಕ ನಿಲ್ದಾಣದಲ್ಲಿ ಆಗಮಿಸುತ್ತಲೇ ಓಟಿಪಿ ಬರಲಿದೆ.