alex Certify ಆಗದು ಎಂದು ಕೈ ಕಟ್ಟಿ ಕುಳಿತುಕೊಳ್ಳುವವರಿಗೆ ಇಲ್ಲಿದೆ ಒಂದು ಸ್ಪೂರ್ತಿಯ ಕಥೆ ! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಗದು ಎಂದು ಕೈ ಕಟ್ಟಿ ಕುಳಿತುಕೊಳ್ಳುವವರಿಗೆ ಇಲ್ಲಿದೆ ಒಂದು ಸ್ಪೂರ್ತಿಯ ಕಥೆ !

ಸಾಮಾಜಿಕ ಜಾಲತಾಣದಲ್ಲಿ ಸ್ಪೂರ್ತಿದಾಯಕ ಕಥೆಗಳಿಗೇನು ಕೊರತೆ ಇಲ್ಲ. ದೇಶದ ಹಾಗೂ ಹೊರ ದೇಶದ ಇಂತಹ ಕಥೆಗಳು ಸಾಕಷ್ಟು ಕಾಣ ಸಿಗುತ್ತದೆ. ಅಂತಹ ಒಂದು ಕಥೆಯು ಈಗ ಗಮನ ಸೆಳೆಯುತ್ತಿದೆ. ಮುಂಬೈನಲ್ಲಿ ಭಿಕ್ಷೆ ಬೇಡುವ ಬದಲು ತನ್ನ ಜೀವನವನ್ನು ಘನತೆಯಿಂದ ನಡೆಸಲು ಒಬ್ಬ ವಿಕಲಚೇತನ ವ್ಯಕ್ತಿಯ ಪಾವ್​ ಭಾಜಿ ಸ್ಟಾಲ್​ ಅನ್ನು ನಡೆಸುತ್ತಿರುವ ಸ್ಪೂರ್ತಿಯ ಕಥೆಯಿದು.

ವಿಡಿಯೊದಲ್ಲಿ, ಮಿತೇಶ್​ ಗುಪ್ತಾ ಎಂಬುವರು ಪಾವ್​ ಭಾಜಿ ತಯಾರಿಸುವುದು ಮತ್ತು ತರಕಾರಿಗಳನ್ನು ಕೇವಲ ಒಂದು ಕೈಯಿಂದ ಕುಶಲತೆಯಿಂದ ಕತ್ತರಿಸುವುದನ್ನು ಕಾಣಬಹುದು. ಗುಪ್ತಾ ಅವರು ಕೆಲವು ವರ್ಷಗಳ ಹಿಂದೆ ಭೀಕರ ಅಪಘಾತದಲ್ಲಿ ತಮ್ಮ ಕೈಯನ್ನು ಕಳೆದುಕೊಂಡಿದ್ದರು.

ಜುಲೈ16ರಂದು ಟ್ವಿಟರ್​ನಲ್ಲಿ ವಿಡಿಯೊವನ್ನು ಹಂಚಿಕೊಳ್ಳಲಾಗಿದೆ, ಜಜ್ಬಾ ಹೋನಾ ಚಾಹಿಯೇ…… ಎಂದು ಆಕರ್ಷಕ ಶೀರ್ಷಿಕೆ ನೀಡಲಾಗಿದೆ. ಮಿತೇಶ್​ ಗುಪ್ತಾ ಮುಂಬೈನ ಮಲಾಡ್​ನಲ್ಲಿ ಪಾವ್​ ಭಾಜಿ ಸ್ಟಾಲ್​ ನಡೆಸುತ್ತಿದ್ದಾರೆ. ನಮ್ಮ ಕೈಲಾದದ್ದನ್ನು ಮಾಡೋಣ ಎಂಬ ಕೋರಿಕೆಯೂ ಅಲ್ಲಿದೆ.

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ನೆಟ್ಟಿಗರು ಇದರಿಂದ ಸ್ಫೂರ್ತಿ ಪಡೆದಿದ್ದಾರೆ. ಅವರ ಪ್ರಾಮಾಣಿಕತೆ ಮತ್ತು ಕಾರ್ಯತತ್ಪರತೆ ಜನರ ಹೃದಯವನ್ನು ಗೆದ್ದಿದೆ. ಅನೇಕರು ಅವರನ್ನು ಭೇಟಿಯಾಗಲು ಕಾತರರಾಗಿದ್ದಾರೆ. ಒಬ್ಬ ಬಳಕೆದಾರ, ಮನುಷ್ಯರಿಗೆ ಯಾವುದೂ ಅಸಾಧ್ಯವಲ್ಲ, ಏನೇ ಮಾಡಲು ಧೈರ್ಯವಿರಬೇಕು ಎಂದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...