ತಂದೆ ಮತ್ತು ಮಗಳ ನಡುವಿನ ಬಾಂಧವ್ಯವು ಬಣ್ಣಿಸಲಾಗದ್ದು. ಮಗಳ ಮೊದಲ ಹೀರೋ ಯಾವಾಗಲೂ ಅವಳ ತಂದೆಯೇ ಆಗಿರುತ್ತಾರೆ. ಮಗಳೇ ತಂದೆಗೆ ಪ್ರಪಂಚವಾಗಿರುತ್ತಾಳೆ. ಇಂತಹ ಪರಿಶುದ್ಧ ಪ್ರೀತಿಯ ದ್ಯೋತಕವಾಗಿರುವ ತಂದೆ- ಮಗಳ ನಡುವಿನ ಬಂಧನವನ್ನ ತಿಳಿಸುವ ವಿಡಿಯೋವೊಂದು ವೈರಲ್ ಆಗಿದೆ. ಆ ವಿಡಿಯೋ ನಿಜಕ್ಕೂ ನಿಮ್ಮ ಕಣ್ಣಂಚಲ್ಲಿ ನೀರು ತರಿಸದೇ ಇರದು.
ವಿಶೇಷ ಸಾಮರ್ಥ್ಯವುಳ್ಳ ತಂದೆ ತನ್ನ ಪುಟ್ಟ ಮಗಳ ಶಾಲೆಯ ಸಮಾರಂಭದಲ್ಲಿ ನೃತ್ಯ ಮಾಡಿದ್ದಾರೆ. ಮಗಳನ್ನು ಕೈಯಲ್ಲಿ ಹಿಡಿದುಕೊಂಡು ವ್ಹೀಲ್ ಚೇರ್ ನಲ್ಲೇ ಅಪ್ಪ ನೃತ್ಯ ಮಾಡಿರುವ ವಿಡಿಯೋ ಇದಾಗಿದೆ.
ಇದೀಗ ವೈರಲ್ ಆಗಿರುವ ವಿಡಿಯೋವನ್ನು ಟ್ವಿಟರ್ ನಲ್ಲಿ ಹಂಚಿಕೊಳ್ಳಲಾಗಿದೆ. ವೇದಿಕೆಯಲ್ಲಿ ಇತರ ಪುರುಷರು ತಮ್ಮ ಹೆಣ್ಣುಮಕ್ಕಳೊಂದಿಗೆ ಇದ್ದಾರೆ. ಆದರೆ ವಿಶೇಷಚೇತನ ವ್ಯಕ್ತಿ ಎಲ್ಲರ ಹೃದಯ ಕದ್ದಿದ್ದಾರೆ.
“ಎಲ್ಲದರ ಹೊರತಾಗಿಯೂ, ಆ ತಂದೆ ತನ್ನ ಮಗಳ ಜೊತೆಗಿದ್ದಾರೆ, ಅವರು ಕ್ಷಮಿಸಿಲ್ಲ” ಎಂದು ವಿಡಿಯೋಗೆ ಶೀರ್ಷಿಕೆ ನೀಡಲಾಗಿದೆ.
ವಿಡಿಯೋ ವೀಕ್ಷಿಸಿದ ನಂತರ ಹಲವು ನೆಟ್ಟಿಗರು ಭಾವುಕರಾಗಿದ್ದು ಅಪ್ಪನನ್ನು ರಿಯಲ್ ಹೀರೋ, ಗ್ರೇಟ್ ಫಾದರ್ ಎಂದಿದ್ದಾರೆ.
https://twitter.com/ChasenVicki/status/1653525970194931712?ref_src=twsrc%5Etfw%7Ctwcamp%5Etweetembed%7Ctwterm%5E1653525970194931712%7Ctwgr%5Eee8772d5683224e2007f05503dd6552cf80b4f42%7Ctwcon%5Es1_&ref_url=http%3A%2F%2Fm.dailyhunt.in%2Fnews%2Findia%2Fenglish%2Findiatoday-epaper-dh270e11982dfa46bb8c2f9b6c27103d59%2Fspeciallyabledfatherdanceswithdaughteratherschoolfunctionviralvideomightmakeyoucry-newsid-n496024878