alex Certify ಚಕ್ರಗಳ ಸಹಾಯದಿಂದ ಮರುಹುಟ್ಟನ್ನ ಪಡೆದಿದೆ ಈ ಪುಟ್ಟ ಪ್ರಾಣಿ..! ವೈರಲ್ ಆಯ್ತು ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಕ್ರಗಳ ಸಹಾಯದಿಂದ ಮರುಹುಟ್ಟನ್ನ ಪಡೆದಿದೆ ಈ ಪುಟ್ಟ ಪ್ರಾಣಿ..! ವೈರಲ್ ಆಯ್ತು ವಿಡಿಯೋ

ಹುಟ್ಟುವಾಗಲೇ ಅಂಗವಿಕಲನಾಗಿ ಜನನದ ಸಂದರ್ಭದಲ್ಲಿ ತಾಯಿ ಹಾಗೂ ಸಹೋದರಿಯನ್ನ ಕಳೆದುಕೊಂಡಿದ್ದ ಪುಟ್ಟ ಅಲ್ಪಾಕಾ ಪ್ರಾಣಿ ಇದೀಗ ಚಲಿಸುವ ಶಕ್ತಿಯನ್ನ ವಾಪಸ್​ ಪಡೆದಿದೆ.

ಈ ದಿವ್ಯಾಂಗ ಮರಿಯನ್ನ ಸ್ನೇಹಿತರ ಜಮೀನಿನಲ್ಲಿ ಮೊದಲ ಬಾರಿಗೆ ಕಂಡ ರೋಂಜಾ ಎಂಬವರ ಹೃದಯ ಮಿಡಿದಿದೆ. ಅವರು ಈ ಪುಟ್ಟ ಮರಿಗೆ ಆಶ್ರಯ ನೀಡಲು ನಿರ್ಧರಿಸಿದ್ರು ಹಾಗೂ ಅಲ್ಪಾಕಾ ಎಲ್ಲಾ ಪ್ರಾಣಿಗಳಂತೆ ನಡೆಯುವಂತಾಗಲು ಏನಾದರೊಂದು ಮಾಡಬೇಕು ಎಂದು ನಿರ್ಧರಿಸಿದ್ರು.

ಜರ್ಮನಿಯ ಫ್ರಂಕ್​​ಫರ್ಟ್​ ನಗರದ ಪುಟ್ಟ ಮನೆಗೆ ಬಂದ ಅಲ್ಪಾಕಾರನ್ನ ಮೊದಲು ಪಶು ವೈದ್ಯರಿಗೆ ತೋರಿಸಲಾಯ್ತು. ಈ ಪಶು ವೈದ್ಯರು ಅಲ್ಪಾಕಾ ಕಾಲು ಇರುವ ಜಾಗದಲ್ಲಿ ಚಕ್ರಗಳನ್ನ ಜೋಡಿಸಿಕೊಟ್ಟಿದ್ದಾರೆ. ಈ ಚಕ್ರಗಳ ಸಹಾಯದಿಂದ ಅಲ್ಪಾಕಾ ಇದೀಗ ಕೊಟ್ಟಿಗೆಯ ತುಂಬೆಲ್ಲಾ ಅನಾಯಾಸವಾಗಿ ಓಡಾಡಲು ಶಕ್ತವಾಗಿದೆ.

ಆಕೆ ತನ್ನ ಸಮಸ್ಯೆಯನ್ನ ತಾನೇ ಬಗೆಹರಿಸಿಕೊಳ್ಳುತ್ತಾಳೆ. ತಾನಾಗೆ ಎದ್ದು ನಿಲ್ಲುತ್ತಾಳೆ ಎಂದು ರೋಂಜಾ ಹೇಳಿದ್ದಾರೆ.

Orphan baby alpaca given new life with wheels

Orphaned baby alpaca walks again with her own set of wheels https://reut.rs/3mCxWmf

Posted by Reuters UK on Thursday, April 8, 2021

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...