alex Certify ವಿದ್ಯುತ್‌ ಉಳಿಸುವ ಸಲುವಾಗಿ ʼಟೈʼ ಕಟ್ಟಬೇಡಿ ಎಂದಿದ್ದಾರೆ ಈ ದೇಶದ ಪ್ರಧಾನಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿದ್ಯುತ್‌ ಉಳಿಸುವ ಸಲುವಾಗಿ ʼಟೈʼ ಕಟ್ಟಬೇಡಿ ಎಂದಿದ್ದಾರೆ ಈ ದೇಶದ ಪ್ರಧಾನಿ…!

ಇಂಧನ ಉಳಿಸುವುದಕ್ಕೂ ಟೈ ಕಟ್ಟಿಕೊಳ್ಳುವುದಕ್ಕೂ ಸಂಬಂಧವಿದೆಯೇ ? ಸಂಬಂಧವಿದೆ ಎಂದು ಪ್ರಧಾನಿ ತಮ್ಮ ದೇಶದ ಜನರಿಗೆ ತಿಳಿಯಪಡಿಸಿದ್ದಾರೆ.

ಸ್ಪೇನ್​ನ ಪ್ರಧಾನಮಂತ್ರಿ ಪೆಡ್ರೊ ಸ್ಯಾಂಚೆಜ್​ ತನ್ನ ದೇಶದ ನಾಗರಿಕರನ್ನು ಎನರ್ಜಿ (ವಿದ್ಯುತ್​) ಉಳಿಸಲು ನೆಕ್​ ಟೈ ಧರಿಸುವುದನ್ನು ತ್ಯಜಿಸುವಂತೆ ಮನವಿ ಮಾಡಿದ್ದಾರೆ. ಟೈ ಇಲ್ಲದೆ ನೀಲಿ ಬ್ಲೇಜರ್​ ಮತ್ತು ಬಿಳಿ ಶರ್ಟ್​ ಧರಿಸಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಕಾಣಿಸಿಕೊಂಡ ಪ್ರಧಾನಿ ಸ್ವತಃ ಉದಾಹರಣೆಯನ್ನು ಸಹ ನೀಡುತ್ತಿದ್ದರು.

ಸುದ್ದಿಗಾರರು ಮುಂದೆ ಮಾತು ಆರಂಭಿಸುವ ಮುನ್ನ ಅವರು ಸ್ವತಃ ಟೈ ಧರಿಸಿಲ್ಲ ಎಂಬುದನ್ನು ಎಲ್ಲರೂ ಗಮನಿಸಿದರು, ಎನರ್ಜಿ ಉಳಿತಾಯ ವಿಷಯದಲ್ಲಿ ಪ್ರತಿಯೊಬ್ಬರೂ ಪ್ರಯತ್ನ ಮಾಡಬಹುದು. ಟೈ ಅಗತ್ಯವಿಲ್ಲದಿದ್ದಾಗ ಬಳಸಬೇಡಿ, ಏಕೆಂದರೆ ಈ ರೀತಿಯಲ್ಲೂ ನಾವು ನಮ್ಮ ದೇಶಕ್ಕೆ ಅಗತ್ಯವಾದ ವಿದ್ಯುತ್​ ಉಳಿಸೋಣ ಎಂದು ಹೇಳಿದರು.

ಟೈ ಬಳಸದಿರುವ ಸೂಚಿಸುವ ಹಿಂದಿನ ಕಲ್ಪನೆಯೆಂದರೆ, ಟೈ ಬಳಸದೇ ಇರುವುದರಿಂದ ಎಸಿ ಬಳಕೆಯನ್ನು ಸಹ ಕಡಿಮೆ ಮಾಡುತ್ತದೆ. ಇದು ವಿದ್ಯುತ್​ ಉಳಿತಾಯಕ್ಕೆ ಸಹಾಯ ಮಾಡುತ್ತದೆ.

ಸ್ಪೇನ್​ನಲ್ಲಿ ತಾಪಮಾನವು ನಿರಂತರವಾಗಿ ಏರುತ್ತಿರುವ ಸಮಯದಲ್ಲಿ ಪೆಡ್ರೊ ಸ್ಯಾಂಚೆಜ್​ ಅವರ ಪ್ರತಿಕ್ರಿಯೆ ಬಂದಿವೆ. ಈ ವಾರ ಶುಕ್ರವಾರ ಮ್ಯಾಡ್ರಿಡ್​ನಲ್ಲಿ ತಾಪಮಾನವು 36 ಡಿಗ್ರಿ ಸೆಲ್ಸಿಯಸ್​ಗೆ ಮತ್ತು ಆಂಡಲೂಸಿಯಾದ ಸೆವಿಲ್ಲೆಯಲ್ಲಿ 39 ಡಿಗ್ರಿ ಸೆಲ್ಸಿಯಸ್​ಗೆ ಏರಿಕೆಯಾಗಿತ್ತು.

ರಷ್ಯಾ- ಉಕ್ರೇನ್​ ಯುದ್ಧದ ಜೊತೆಗೆ ಯುರೋಪ್​ನಲ್ಲಿನ ಪ್ರತಿಕೂಲ ಹವಾಮಾನ ಪರಿಸ್ಥಿತಿಗಳು ಸ್ಪೇನ್​ನಾದ್ಯಂತ ವಿದ್ಯುತ್​ ವೆಚ್ಚವನ್ನು ಹೆಚ್ಚಿಸುತ್ತಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...