alex Certify ಸ್ಪೇಸ್‌ ಎಕ್ಸ್ ನಲ್ಲಿ ಟಾಯ್ಲೆಟ್ ಸೋರಿಕೆ: ಭೂಮಿಗೆ ಹಿಂತಿರುಗುವಾಗ ಗಗನಯಾತ್ರಿಗಳು ಡೈಪರ್‌ ಬಳಸಬೇಕಾದ ಸ್ಥಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ಪೇಸ್‌ ಎಕ್ಸ್ ನಲ್ಲಿ ಟಾಯ್ಲೆಟ್ ಸೋರಿಕೆ: ಭೂಮಿಗೆ ಹಿಂತಿರುಗುವಾಗ ಗಗನಯಾತ್ರಿಗಳು ಡೈಪರ್‌ ಬಳಸಬೇಕಾದ ಸ್ಥಿತಿ

ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಹೊರಡಲಿರುವ ಗಗನಯಾತ್ರಿಗಳು ತಮ್ಮ ಸ್ಪೇಸ್ಎಕ್ಸ್ ಕ್ಯಾಪ್ಸುಲ್‌ನಲ್ಲಿ ಶೌಚಾಲಯ ಕೆಟ್ಟು ಹೋಗಿರುವುದರಿಂದ ಭೂಮಿಗೆ ಹಿಂತಿರುಗುವಾಗ ಡೈಪರ್‌ಗಳನ್ನು ಬಳಸಬೇಕಾಗುತ್ತದೆ ಎಂದು ಹೇಳಲಾಗಿದೆ.

ಬಾಹ್ಯಾಕಾಶ ಯಾನವು ಸಾಕಷ್ಟು ಸಣ್ಣ ಸವಾಲುಗಳಿಂದ ಕೂಡಿದೆ ಎಂದು ಗಗನಯಾತ್ರಿ ಮ್ಯಾಕ್‌ ಆರ್ಥರ್ ತಿಳಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಇದನ್ನು ಗಗನಯಾತ್ರಿಗಳು ಎದುರಿಸಲೇಬೇಕಾಗುತ್ತದೆ. ಆದರೆ, ಇದರ ಬಗ್ಗೆ ಹೆಚ್ಚು ಚಿಂತಿಸುವುದಿಲ್ಲ ಎಂದು ಅವರು ಹೇಳಿದ್ದಾರೆ.

ಶುಕ್ರವಾರದ ಸಭೆಗಳ ಸರಣಿಯ ನಂತರ, ಮ್ಯಾಕ್‌ ಆರ್ಥರ್ ಮತ್ತು ಅವರ ಉಳಿದ ಸಿಬ್ಬಂದಿಯನ್ನು ವಾಪಸ್ ಕರೆತರಲು ನಿರ್ಧರಿಸಿದ್ದರು. ಸ್ಪೇಸ್ಎಕ್ಸ್ ಉಡಾವಣೆಯು ಕೆಟ್ಟ ಹವಾಮಾನ ಮತ್ತು ಗಗನಯಾತ್ರಿಗಳ ಬಹಿರಂಗಪಡಿಸದ ವೈದ್ಯಕೀಯ ಸಮಸ್ಯೆಯಿಂದ ಒಂದು ವಾರಕ್ಕೂ ಹೆಚ್ಚು ವಿಳಂಬವಾಗಿದೆ.

ಗಗನಯಾತ್ರಿಗಳು ಬಾಹ್ಯಾಕಾಶದಲ್ಲಿ ಟಾಯ್ಲೆಟ್ ಸೋರಿಕೆ ಸಮಸ್ಯೆಯನ್ನು ಎದುರಿಸಬೇಕಾಯಿತು. ಸೆಪ್ಟೆಂಬರ್‌ನಲ್ಲಿ ಸ್ಪೇಸ್‌ಎಕ್ಸ್‌ನ ಖಾಸಗಿ ಹಾರಾಟದ ಸಮಯದಲ್ಲಿ ಈ ಸಮಸ್ಯೆಯನ್ನು ಮೊದಲು ಗಮನಿಸಲಾಯಿತು. ಎಂಡೀವರ್ ಎಂಬ ಹೆಸರಿನ ಕ್ರ್ಯೂ ಡ್ರ್ಯಾಗನ್ ಬಾಹ್ಯಾಕಾಶ ನೌಕೆಯಲ್ಲಿ ಹಾಳಾದ ಶೌಚಾಲಯದಿಂದಾಗಿ ಸಿಬ್ಬಂದಿ ಅಸ್ವಸ್ಥತೆಯನ್ನು ಎದುರಿಸಬೇಕಾಯಿತು. ಹೀಗಾಗಿ ಶುಕ್ರವಾರದ ಸರಣಿ ಸಭೆಗಳ ನಂತರ ಎಲ್ಲಾ ನಾಲ್ಕು ಗಗನಯಾತ್ರಿಗಳನ್ನು ಮನೆಗೆ ಕರೆತರುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಆದ್ದರಿಂದ ಗಗನಯಾತ್ರಿಗಳು ಡೈಪರ್ ಉಪಯೋಗಿಸಬೇಕಾಗಿದೆ.

ಇನ್ನೊಂದು ಕುತೂಹಲಕಾರಿ ಅಂಶವೆಂದ್ರೆ, ಗಗನಯಾತ್ರಿಗಳು ಮೊದಲ ಬಾರಿಗೆ ಬಾಹ್ಯಾಕಾಶದಲ್ಲಿ ಮೆಣಸಿನಕಾಯಿಯನ್ನು ಬೆಳೆದಿದ್ದಾರೆ. ಇದಕ್ಕಾಗಿ ಭೂಮಿಯಿಂದ ಕೊಂಡೊಯ್ಯಲಾಗಿರುವ ಮಣ್ಣು, ಸಾವಯವ ಗೊಬ್ಬರಗಳನ್ನು ಬಳಸಿ, ಅಲ್ಲಿನ ವಾತಾವರಣದಲ್ಲಿ ಅವರು ಮೆಣಸಿನಕಾಯಿ ಬೆಳೆದಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...