alex Certify ಕೆನಡಾ ಗಡಿಯಲ್ಲಿ ಅಪ್ಪಳಿಸಿದ ಉಲ್ಕಾಶಿಲೆ; ಚೂರು ತಂದುಕೊಟ್ಟವರಿಗೆ $25,000 ಬಹುಮಾನ ಘೋಷಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೆನಡಾ ಗಡಿಯಲ್ಲಿ ಅಪ್ಪಳಿಸಿದ ಉಲ್ಕಾಶಿಲೆ; ಚೂರು ತಂದುಕೊಟ್ಟವರಿಗೆ $25,000 ಬಹುಮಾನ ಘೋಷಣೆ

ಕೆನಡಾದ ಗಡಿ ಪ್ರದೇಶವೊಂದರಲ್ಲಿ ಬಾಹ್ಯಾಕಾಶದಿಂದ ಒಂದಷ್ಟು ಶಿಲೆಗಳು ಬಂದು ಭೂಮಿಗೆ ಬಿದ್ದು ಸುತ್ತಲೂ ಅದರ ಚೂರುಗಳು ಚೆಲ್ಲಿವೆ.

ಇಂಥ ಶಿಲೆಯ ಒಂದೇ ಒಂದು ಚೂರನ್ನು ತಂದುಕೊಟ್ಟರೆ $25,000 ಕೊಡುವುದಾಗಿ ಇಲ್ಲಿನ ಬೆತೆಲ್‌ನಲ್ಲಿರುವ ಮೇಎಯ್ನ್‌ ಮಿನರಲ್ ಅಂಡ್ ಜೆಮ್ ಮ್ಯೂಸಿಯಮ್ ತಿಳಿಸಿದೆ.

ಶನಿವಾರದಂದು ಬೆಂಕಿಚೆಂಡೊಂದು ಹಾಡಹಗಲೇ ಭೂಮಿಗೆ ಬಂದು ಬಿದ್ದಿದೆ ಎನ್ನಲಾಗಿದೆ.

ಉಲ್ಕಾಶಿಲೆಗಳು ಬಂದು ಬೀಳುತ್ತಿರುವುದನ್ನು ತನ್ನ ರೇಡಾರ್‌ಗಳು ಪತ್ತೆ ಮಾಡಿವೆ ಎಂದು ನಾಸಾ ತಿಳಿಸಿದ್ದು, ಜೊತೆಗೆ ಪ್ರತ್ಯಕ್ಷದರ್ಶಿಗಳ ಹೇಳಿಕೆಗಳು ತಾಳಿಕೆಯಾಗುತ್ತಿವೆ. ಇದೇ ಮೊದಲ ಬಾರಿ ಮೇಯ್ನ್‌ ಪ್ರದೇಶದಲ್ಲಿ ಉಲ್ಕಾಶಿಲೆಯೊಂದು ನಾಸಾದ ರೇಡಾರ್‌ಗೆ ಪತ್ತೆಯಾಗಿದೆ.

ಚಂದ್ರ ಹಾಗೂ ಮಂಗಳನ ಅಂಗಳದ ಶಿಲೆಗಳನ್ನು ಹೊಂದಿರುವ ಮೇಯ್ನ್‌ ಮಿನರಲ್ ಹಾಗು ಜೆಮ್ ಸಂಗ್ರಹಾಲಯವು ತನ್ನ ಸಂಗ್ರಹಕ್ಕೆ ಈ ಹೊಸ ಚೂರನ್ನು ಸೇರಿಸಲು ಬಯಸುತ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...