ಸದಾ ವಿವಾದಗಳಿಂದಲೇ ಸದ್ದು ಮಾಡುವ ಸಮಾಜವಾದಿ ಪಾರ್ಟಿ ಶಾಸಕ ಅಬು ಅಜ್ಮಿ ತಮ್ಮ ಹುಟ್ಟು ಹಬ್ಬದ ಆಚರಣೆ ಸಂದರ್ಭದಲ್ಲಿ ಕೋವಿಡ್ ನಿಯಂತ್ರಣ ಸಂಬಂಧದ ನಿರ್ಬಂಧಗಳ ಉಲ್ಲಂಘನೆ ಮಾಡಿ ಸುದ್ದಿಯಲ್ಲಿದ್ದಾರೆ.
ಮುಂಬಯಿಯ ಗೋವಾಂಡಿ ಉಪನಗರದಲ್ಲಿ ಹುಟ್ಟುಹಬ್ಬ ಆಚರಿಸಿಕೊಳ್ಳುವ ಸಂದರ್ಭದಲ್ಲಿ ಮಾಸ್ಕ್ ಧರಿಸದೇ ಇದ್ದಿದ್ದಲ್ಲದೇ, ಸಾಮಾಜಿಕ ಅಂತರದ ನಿರ್ಬಂಧಗಳನ್ನೂ ಉಲ್ಲಂಘಿಸಿದ್ದಾರೆ.
ಪ್ರಕರಣ ಸಂಬಂಧ ಮುಂಬಯಿಯ ಶಿವಾಜಿನಗರ ಪೊಲೀಸ್ ಠಾಣೆಯಲ್ಲಿ ಅಜ್ಮಿ ಹಾಗೂ ಇತರ 17 ಮಂದಿ ವಿರುದ್ಧ ಐಪಿಸಿಯ 188 ಮತ್ತು 269ನೇ ವಿಧಿ ಮತ್ತು ಭಾರತೀಯ ಶಸ್ತ್ರ ಕಾಯಿದೆ ಅಡಿ ಪ್ರಕರಣ ದಾಖಲಿಸಲಾಗಿದೆ.
BIG NEWS: ಎಲ್ಲ ವಾಹನ ಮಾಲೀಕರಿಗೆ ಮುಖ್ಯ ಮಾಹಿತಿ; ಹೊಸ ನಂಬರ್ ಪ್ಲೇಟ್ ಕಡ್ಡಾಯ
ಮಹಾರಾಷ್ಟ್ರದ ಮನ್‌ಖುರ್ದ್ ಶಿವಾಜಿನಗರದ ಶಾಸಕರಾದ ಅಬು ಅಜ್ಮಿ ಕುದುರೆ ಗಾಡಿ ಮೇಲೆ ಕುಳಿತು ಸಂಭ್ರಮಿಸುತ್ತಿದ್ದ ವೇಳೆ ಮಾಸ್ಕ್ ಧರಿಸದೇ ಇರುವ ವಿಡಿಯೋ ವೈರಲ್ ಆಗಿದ್ದು, ಪೊಲೀಸರು ಆತನ ವಿರುದ್ಧ ಕ್ರಮ ತೆಗೆದುಕೊಳ್ಳುವಂತಾಗಿದೆ.