ದೇಶದಲ್ಲಿ ಕೊರೊನಾ 2ನೆ ಅಲೆ ಮಿತಿಮೀರಿದೆ. ಕೋವಿಡ್ ಸೋಂಕನ್ನ ನಿಯಂತ್ರಣಕ್ಕೆ ತರಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಲಾಕ್ಡೌನ್ ಸೇರಿದಂತೆ ಸಾಕಷ್ಟು ಕ್ರಮಗಳನ್ನ ಜಾರಿಗೆ ತರುತ್ತಿವೆ.
ವೈದ್ಯಕೀಯ ಸೌಲಭ್ಯಗಳ ಕೊರತೆಯಿಂದಾಗಿ ಕೊರೊನಾ ಬಂದರೆ ಸಾಕು ಜೀವ ಭಯ ಶುರುವಾಗುವ ಪರಿಸ್ಥಿತಿ ನಿರ್ಮಾಣವಾಗಿದೆ.
ದೇಶದಲ್ಲಿ ಪರಿಸ್ಥಿತಿ ಇಷ್ಟೊಂದು ಸಂಕಷ್ಟದಲ್ಲಿ ಇರುವಾಗ ಜನರ ಸೇವೆ ಮಾಡಬೇಕಿದ್ದ ಸಮಾಜವಾದಿ ಪಕ್ಷದ ನಾಯಕ ಶೈಲೇಂದ್ರ ಯಾದವ್ ಬಹಿರಂಗವಾಗಿಯೇ ಕೊರೊನಾ ಮಾರ್ಗಸೂಚಿಗಳನ್ನ ಗಾಳಿಗೆ ತೂರಿ ಜೈಲುಪಾಲಾಗಿದ್ದಾರೆ.
ತಮ್ಮ ಬಾವನ ಮದುವೆ ಕಾರ್ಯಕ್ರಮದಲ್ಲಿ ಸಾಮಾಜಿಕ ಅಂತರ ಮರೆತು ನೃತ್ಯ ಮಾಡಿದ್ದು ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಉತ್ತರ ಪ್ರದೇಶದ ಗೋರಖ್ಪುರ ಠಾಣಾ ಪೊಲೀಸರು ಶೈಲೇಂದ್ರ ಯಾದವ್ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.
https://www.facebook.com/TimesofIndia/videos/1424905851209468/