alex Certify ‘ಚಿನ್ನದ ಬಾಂಡ್’ ಮೂಲಕ ಸರ್ಕಾರದ ಬೊಕ್ಕಸಕ್ಕೆ ಸಂದಾಯವಾದ ಹಣವೆಷ್ಟು ಗೊತ್ತಾ….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಚಿನ್ನದ ಬಾಂಡ್’ ಮೂಲಕ ಸರ್ಕಾರದ ಬೊಕ್ಕಸಕ್ಕೆ ಸಂದಾಯವಾದ ಹಣವೆಷ್ಟು ಗೊತ್ತಾ….?

ಸವರಿನ್ ಚಿನ್ನದ ಬಾಂಡ್‌ಗಳ ಸ್ಕೀಂಗೆ ಚಾಲನೆ ಕೊಟ್ಟ ಆರು ವರ್ಷಗಳಲ್ಲಿ ಸರ್ಕಾರದ ಬೊಕ್ಕಸಕ್ಕೆ ಯೋಜನೆಯಿಂದ 31,290 ಕೋಟಿ ರೂಪಾಯಿಗಳು ಹರಿದು ಬಂದಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸಂಸತ್ತಿಗೆ ತಿಳಿಸಿದ್ದಾರೆ.

ಪರ್ಯಾಯ ಆರ್ಥಿಕ ಮೂಲದ ರಚನೆಯ ಮೂಲ ಉದ್ದೇಶ ಹಾಗೂ ಚಿನ್ನವನ್ನು ದೈಹಿಕ ರೂಪದಲ್ಲಿ ಖರೀದಿ ಮಾಡುವ/ಶೇಖರಿಸುವ ಉದ್ದೇಶದಿಂದ ಚಾಲನೆಗೆ ಬಂದ ಈ ಸ್ಕೀಂಗೆ ಕೇಂದ್ರ ಸರ್ಕಾರವು ನವೆಂಬರ್‌ 5, 2015ರಲ್ಲಿ ಚಾಲನೆ ಕೊಟ್ಟಿತ್ತು.

ಬಾಂಡ್‌ಗಳನ್ನು ಭಾರತ ಸರ್ಕಾರದ ಪರವಾಗಿ ರಿಸರ್ವ್ ಬ್ಯಾಂಕ್ ವಿತರಿಸುತ್ತಿದ್ದು, ಸವರಿನ್ ಗ್ಯಾರಂಟಿ ಇದೆ. ಚಿನ್ನವನ್ನು ಗ್ರಾಂಗಳಲ್ಲಿ ನಮೂದಿಸಿ, ಅದಕ್ಕೆ ಪ್ರತಿಯಾಗಿ ಭಾರತೀಯ ರೂಪಾಯಿಗಳಲ್ಲಿ ಪಾವತಿ ಮಾಡಬಲ್ಲ ಬಾಂಡ್‌ಗಳನ್ನು ವಿತರಿಸಲಾಗುತ್ತಿದೆ.

BIG NEWS: ಈಶ್ವರಪ್ಪ ಪ್ರಚೋದನಕಾರಿ ಹೇಳಿಕೆ ನೀಡಿಲ್ಲ; ಸಚಿವರ ಹೇಳಿಕೆ ಸಮರ್ಥಿಸಿಕೊಂಡ ಸಿಎಂ ಬೊಮ್ಮಾಯಿ

ಚಿನ್ನದ ಬಾಂಡ್ ಯೋಜನೆಯ ಐದನೇ ಕಂತು ಸೋಮವಾರ ಆರಂಭಗೊಂಡಿದ್ದು, ಆಗಸ್ಟ್ 13ರವರೆಗೆ ಚಾಲ್ತಿಯಲ್ಲಿರುವುದು. ಇದಕ್ಕೆ ಆಗಸ್ಟ್‌ 17ನ್ನು ಸೆಟಲ್ಮೆಂಟ್ ದಿನಾಂಕವೆಂದು ನಿಗದಿಪಡಿಸಲಾಗಿದೆ. 4,790ರೂ./ಗ್ರಾಂನಂತೆ ಬಾಂಡ್‌ ಅನ್ನು ವಿತರಿಸಲಾಗುವುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...