ತನ್ನಿಂದ ಗೊತ್ತಿಲ್ಲದೇ ಆದ ತಪ್ಪಿನಿಂದಾಗಿ ಹೊರಗಡೆ ತಿರುಗಾಡುವ ಮಂದಿಯ ಕಣ್ಣಿಗೆ ’ಸೌನಾ’ (ಬಿಸಿ ಉಷ್ಣಾಂಶಕ್ಕಾಗಿ ರೂಪಿಸಿರುವ ಒಂದು ಕೋಣೆ) ದಲ್ಲಿ ಕೂರುವ ಅತಿಥಿಗಳು ಕಾಣುವಂತೆ ಆಗಿರುವುದಕ್ಕೆ ದಕ್ಷಿಣ ಕೊರಿಯಾದ ಹೊಟೇಲ್ ಒಂದು ಕ್ಷಮೆಯಾಚಿಸಿದೆ.
ದಿ ಗ್ರಾಂಡ್ ಜೋಸನ್ ಹೆಸರಿನ ಈ ಐಷಾರಾಮಿ ಹೊಟೇಲ್, ಜೆಜು ದ್ವೀಪದಲ್ಲಿರುವ ತನ್ನ ರೆಸಾರ್ಟ್‌ನಲ್ಲಿ ಹೀಗೆ ಆಗಿರುವ ಕಾರಣ ತನ್ನ ಜಾಲತಾಣದಲ್ಲಿನ ಬ್ಲಾಗ್ ಒಂದರ ಮೂಲಕ ಕ್ಷಮೆಯಾಚಿಸಿದೆ.
ಕೃಷಿಕರ ಖಾತೆಗೆ 6 ಸಾವಿರ ರೂ. ಜಮಾ: ಇಲ್ಲಿದೆ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿ
ಮಹಿಳೆಯರ ಸೌನಾ ಪ್ರದೇಶವು ಬೀದಿಗೆ ಕಾಣಿಸುವ ಕಾರಣ, ಈ ಲೋಪವನ್ನು ಸರಿಪಡಿಸಲು ಮುಂದಿನ ಕೆಲ ದಿನಗಳ ಮಟ್ಟಿಗೆ ಸೌನಾ ಸೇವೆಯನ್ನು ರದ್ದು ಮಾಡುತ್ತಿರುವುದಾಗಿ ಹೊಟೇಲ್ ಆಡಳಿತ ತಿಳಿಸಿದೆ. ಈ ಸಂಬಂಧ ಆಂತರಿಕ ತನಿಖೆಯನ್ನೂ ನಡೆಸಲು ಮುಂದಾಗಿರುವುದಾಗಿ ಹೊಟೇಲ್ ಹೇಳಿಕೊಂಡಿದೆ.